PLEASE LOGIN TO KANNADANET.COM FOR REGULAR NEWS-UPDATES



ಶನಿವಾರ ೧೦;೩೦ ಕ್ಕೆ ಕೊಪ್ಪಳದಲ್ಲಿ ಕರ್ನಾಟಕ ರಾಜ್ಯ ವೀಕಲಚೇತನರ ಒಕ್ಕೂಟ ಜಿಲ್ಲಾ ಘಟಕ ಕೊಪ್ಪಳ ಇವರಿಂದ ಕೊಪ್ಪಳ ಬಸ್ಸ್ ನಿಲ್ದಾಣದಿಂದ ಸಾಹಿತ್ಯಭವನದ ವರಗೆ ಮೆರವಣಿಗೆ ಮೂಲಕ ಘೋಷಣೆ ಕೂಗುತ್ತಾ ವಿಕಲಚೇತನರ ವಿವಿಧ ಬೇಡಿಕೆಗಳಾದ ವಿಕಲಚೇತನರ ಮತ್ತು ಹಿರಿಯ ನಾಗರಿಕರ ಕಲ್ಯಾಣಧಿಕಾರಿಗಳನ್ನು ಪೂರ್ಣಅವಧಿ ನೇಮಕ ಮಾಡುವುದು. ಒಖW .ಗಿಖW ಕಾರ್ಯಕರ್ತರನ್ನು ಕಾಯಂಗೊಳಿಸುವುದು. ಕವಿ ಮಾತಿನ ಮತ್ತು ಗಂಟಲು ತಜ್ಞರನ್ನು ಪೂರ್ಣಅವಧಿಗೆ ಕೊಪ್ಪಳ ಜಿಲ್ಲಾಆಸ್ಪತ್ರೆಗೆ ನೇಮಕ ಮಾಡುವುದು ಹಾಗೂ ಕಿವುಡ ಮಕ್ಕಳಿಗೆ ಆಡಿಯೋಗ್ರಾಮ ವ್ಯವಸ್ಥೆ ಮಾಡಬೇಕು. ಜಿಲ್ಲಾ ಪುನರವಸತಿ ಕೇಂದ್ರವನ್ನ ಶಿಘ್ರವಾಗಿ ಆರಂಭಿಸಬೇಕು. ಸರ್ಕಾರದಲ್ಲಿ ಬರುವ ಎಲ್ಲಾ ಇಲಾಖೆಗಳಲ್ಲಿ ಶೇ/ ೩ ರಷ್ಟು ಅನುದಾನ ಬಳಸಲು ಕ್ರಿಯಾಯೋಜನೆ ಆಗಬೇಕು.
ಶಾಸಕರ ಮತ್ತು ಸಂಸದರ ಅನುದಾನದಲ್ಲಿ ಮೀಸಲಿರು ಹಣವನ್ನು ವಿಕಲಚೇತನರಿಗಾಗಿ ಮಾತ್ರ ಖರ್ಚು ಮಾಡಬೇಕು. ಪ್ರತಿ ತಿಂಗಳು ತಾಲೂಕಿನಲ್ಲಿ ವಿಕಲಚೇತನರ ಕುಂದು ಕೊರತೆ ಸಭೆ ನೆಡಸಬೇಕು. ಈ ಮೇಲಿನ ಎಲ್ಲಾ ಬೇಡಿಕೆಗಳನ್ನು ಈಡೆರಿಸಬೇಕೇಂದು ಜಲ್ಲಾಧಿಕಾರಿಗಳಿಗೆ ಪ್ರತಿಭಟ ಮಾಡುವ ಮೂಲಕ ಮನವಿ ಸಲ್ಲಿಸಲಾಯಿತು.  
ಕರ್ನಾಟಕ ರಾಜ್ಯ ವಿಕಲಚೇತನರ ಒಕ್ಕೂಟದ ಅಧ್ಯಕ್ಷರಾದ ಮಲ್ಲಿಕಾರ್ಜುನ ವಾಯ್, ಪೂಜಾರ, ಮತ್ತು ಪದಾಧಿಕಾರಿಗಳಾದ ವಿರುಪಾಕ್ಷ ತಳಕಲ್ ಶಿದ್ಲಿಂಗಯ್ಯ ಗೊರ‍್ಲೇಕೊಪ, ಹುಲಗಪ್ಪ ಕಾಗಿ ಶರಣಪ್ಪ ವಡ್ಡರ, ಮಹ್ಮದ ಅನೀಪ್, ಚಂದ್ರಶೇಖರ ಕುಂಬಾರ ತಿಮ್ಮಪ್ಪ ಮುಂಡರಗಿ, ವೀರೇಶ ಹಾಲಗೂಂಡಿ ಹಾಗೂ ಜಿಲ್ಲೆಯ ವಿಕಲಚೇತನರು ಪಾಲ್ಗೋಂಡು ಪ್ರತಿಭಟನೆ ಯಶಸ್ವಿಗೊಳಿಸಿದರು. 

Advertisement

0 comments:

Post a Comment

 
Top