PLEASE LOGIN TO KANNADANET.COM FOR REGULAR NEWS-UPDATES

ಕೊಪ್ಪಳ: ವಿಕಲಚೇನರಲ್ಲಿ ವಿಶಿಷ್ಟವಾದ ಶಕ್ತಿ ಅಡಗಿದೆ ಎಂದು ನಗರಸಭೆಯ ಸದಸ್ಯರಾದ ಅನಿಕೇತ ಅಗಡಿ ಹೇಳಿದರು.
  ಅವರು ನಗರದ ಸ್ಟೇಷನ್ ರೋಡ್‌ನ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ ಸರ್ವ ಶಿಕ್ಷಣ ಅಭಿಯಾನದ ಅಡಿಯಲ್ಲಿ ಸಮನ್ವಯ ಶಿಕ್ಷಣ ವಿಭಾಗದಿಂದ ೨೦೧೪-೧೫ನೇ ಸಾಲೀನ ತಾಲೂಕ ಮಟ್ಟದ ವಿಕಲಚೇತನ ಮಕ್ಕಳ ತಪಾಸಣೆಯ ಶಿಬಿರವನ್ನು ಉದ್ಘಾಟಿಸಿ ಮಾತನಾಡುತ್ತ,ಅಂಗವಿಕಲತೆಯು ವಿವಿಧ ಕಾರಣಗಳಿಂದ ಉಂಟಾಗುತ್ತದೆ.ಆದರೆ ಯಾರು ಅದನ್ನು ಶಾಪವೆಂದು ಪರಿಗಣಿಸಬಾರದು ವರವಾಗಿ ಸ್ವೀಕರಿಸಬೇಕು.ಅವರಲ್ಲಿ ವಿಭಿನ್ನವಾದ ಶಕ್ತಿಯು ಅಡಗಿದ್ದು ಅದನ್ನು ಹೊರಹಾಕಬೇಕಾದರೆ ಅವರಿಗೆ ವೇಧಿಕೆಗಳನ್ನು ಒದಗಿಸಿಕೊಡಬೇಕಾಗುತ್ತದೆ.ಅಲ್ಲದೆ ಸಮಾಜದಲ್ಲಿ ಅವರ ಬಗ್ಗೆ ಅವಹೇಳನ ರೀತಿಯಲ್ಲಿ ಮಾತನಾಡುವುದನ್ನು,ನಿಂಧಿಸುವುದನ್ನು ಮಾಡಬಾರದು.ಅವರು ಕೂಡಾ ಸಮಾಜದಲ್ಲಿ ಇತರರಂತೆ ಬಾಳಲು ನಾವೆಲ್ಲರೂ ಅನುಕೂಲ ಮಾಡಿಕೊಡಬೇಕಾಗಿದೆ ಎಂದು ಹೇಳಿದರು.
 ನಂತರ ಸರ್ಕಾರಿ ಅಂಗವಿಕಲ ನೌಕರರ ಸಂಘದ ರಾಜ್ಯ ಸಂಘಟನಾ ಕಾರ್ಯದರ್ಶಿ ಬೀರಪ್ಪ ಅಂಡಗಿ ಚಿಲವಾಡಗಿ ಮಾತನಾಡಿ,ರಾಜ್ಯದಲ್ಲಿ ಅಂಗವಿಕಲತೆಯ ಕುರಿತಾಗಿ ಸಮಗ್ರವಾದ ಸಮೀಕ್ಷೆಯನ್ನು ಮಾಡುವಂತೆ ಅನೇಕ ಸಂಬಂಧ ಪಟ್ಟ ಸಚಿವರಿಗೆ ಮನವಿ ಪತ್ರವನ್ನು ಸಲ್ಲಿಸಿದರೂ ಕೂಡಾ ಯಾವುದೇ ಸಮೀಕ್ಷೆಗಳನ್ನು ನಡೆಸಲಾಗಿಲ್ಲ.ಅಲ್ಲದೆ ಅಂಗವಿಕಲ ವಿದ್ಯಾರ್ಥಿಗಳಿಗೆ ನೀಡಲಾಗುತ್ತಿರುವ ವಿದ್ಯಾರ್ಥಿ ವೇತನವನ್ನು ಹೆಚ್ಚಿಸಬೇಕು.ಅಲ್ಲದೆ ಅಂಗವಿಕಲರಿಗೆ ವಿಶಿಷ್ಠವಾದ ಗುರುತಿನ ಚೀಟಿಯನ್ನು ನೀಡಬೇಕು.ವಿಕಲಚೇನರು ಸರ್ಕಾರದಿಂದ ದೊರೆಯುವ ಸೌಲಭ್ಯಗಳನ್ನು ಸಮರ್ಪಕವಾಗಿ ಬಳಸಿಕೊಳ್ಳಬೇಕು ಎಂದು ಹೇಳಿದರು.  ಪ್ರಾಸ್ತಾವಿಕವಾಗಿ ಸಮನ್ವಯ ಶಿಕ್ಷಣದ ಶಿಕ್ಷಕರಾದ ಶಂಕ್ರಪ್ಪ ಮಾತನಾಡಿದರು.  ಕಾರ್ಯಕ್ರಮವನ್ನು ಉದ್ದೇಶಿಸಿ ಬಿ.ಆರ್.ಪಿ.ಗಳಾದ ಎಂ.ಎಚ್.ಕುರಿ ಮಾತನಾಡಿದರು.  ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸ್ಟೇಷನ್ ರೋಡ ಶಾಲೆಯ ಮುಖ್ಯೋಪಾದ್ಯಾಯರಾದ ಲಷ್ಕರ್‌ನಾಯಕ ವಹಿಸಿದ್ದರು.ಕಾರ್ಯಕ್ರಮದಲ್ಲಿ  ಬಿ.ಆರ್.ಪಿ.ಶೇಷಪ್ಪ ಸ್ವಾಮಿ,ಮುಖ್ಯ ಶಿಕ್ಷಕರಾದ ಶ್ರೀಶೈಲಪ್ಪ,ಶೇಖರಪ್ಪ,ಶಿಕ್ಷಕರಾದ ಈರಪ್ಪ ಬಳ್ಳೋಳ್ಳಿ ಮುಂತಾದವರು ಹಾಜರಿದ್ದರು.ಕಾರ್ಯಕ್ರಮವನ್ನು ಶಿಕ್ಷಕರಾದ ಬಸವನಗೌಡ ಪಾಟೀಲ ಹಲಗೇರಿ ನಿರೂಪಿಸಿದರು. ಸಮನ್ವಯ ಶಿಕ್ಷಣದ ಶಿಕ್ಷಕರಾದ ಬಲರಾಮ ಪೂಜಾರ ಸ್ವಾಗತಿಸಿ,ಶೇಖರಪ್ಪ ಬೇಟಗೇರಿ ವಂದಿಸಿದರು.

Advertisement

0 comments:

Post a Comment

 
Top