PLEASE LOGIN TO KANNADANET.COM FOR REGULAR NEWS-UPDATES


ಕೊಪ್ಪಳ. ರಾಜಕೀಯ ಇಚ್ಛಾಶಕ್ತಿ ಕೊರತೆಯಿಂದ ಹೈದರಾಬಾದ್-ಕರ್ನಾಟಕದ ಅನೇಕ ನೀರಾವರಿ ಯೋಜನೆಗಳು ಪೂರ್ಣಗೊಳ್ಳದೆ ಕುಂಟಿತಗೊಂಡಿವೆ ಎಂದು ಬೆಂಗಳೂರಿನ ಸರಕಾರಿ ಅಭಿಯೋಜಕ ಬಿಎಸ್ ಪಾಟೀಲ್ ವಿಷಾಧಿಸಿದರು.
ಅವರು ಇಲ್ಲಿನ ಸಾಹಿತ್ಯ ಭವನದಲ್ಲಿ ಕೊಪ್ಪಳ ಜಿಲ್ಲಾ ನಾಗರಿಕರ ವೇದಿಕೆ ಆಯೋಜಿಸಿದ್ದ ೮ನೇ ಕೊಪ್ಪಳ ಜಲ್ಲಾ ಉತ್ಸವ ಹಾಗೂ ೬ನೇ ತಿರುಳುಗನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಹೈದರಾಬಾದ್ ಕರ್ನಾಟಕಕ್ಕೆ ನೀರಾವರಿ ಯೋಜನೆಗಳ ಆಶಾ ಭಾವನೆಗಳ ಕುರಿತು ವಿಶೇಷ ಉಪನ್ಯಾಸ ನೀಡಿ ಮಾತನಾಡಿದರು.
ಕೊಪ್ಪಳ ಜಿಲ್ಲೆಯಲ್ಲಿಯೇ ತುಂಗಭದ್ರಾ ಜಲಾಶಯ, ಹಿರೇಹಳ್ಳ ಏತ ನೀರಾವರಿ ಯೋಜನೆ, ಸಿಂಗಟಾಲೂರ ಏತ ನೀರಾವರಿ ಹಾಗೂ ಕೃಷ್ಣಾ ಬಿ ಸ್ಕಿಂ ಯೋಜನೆಗಳನ್ನು ಆಯಾ ಸರಕಾರಗಳು ರೂಪಿಸಿವೆಯಾದರೂ ಈ ಎಲ್ಲ ನೀರಾವರಿ ಯೋಜನೆಗಳು ಜಿಲ್ಲೆಯಲ್ಲಿ ಸಮರ್ಪಕವಾಗಿ ಅನುಷ್ಠಾನಗೊಳ್ಳುವಲ್ಲಿ ಸಂಪೂರ್ಣವಾಗಿ ವಿಫಲವಾಗಿವೆ.
ತುಂಗಭದ್ರಾ ಜಲಾಶಯ ಜಿಲ್ಲೆಯಲ್ಲಿಯೇ ಹರಿದರೂ ಸಹ ಹೆಚ್ಚಿನ ನೀರು ನದಿ ಮೂಲಕ ಹೊರಾಜ್ಯಕ್ಕೆ ಹರಿದು ಹೋಗುವುದರಿಂದ ನಮ್ಮ ನೆಲದ ನೀರಿನ ಸದ್ಬಳಿಕೆ ನಮಗೆ ಸಿಗುತ್ತಿಲ್ಲ, ತುಂಗಭದ್ರಾ ಜಲಾಶಯದ ಹೆಚ್ಚುವರಿ ನೀರನ್ನು ತಡೆದು ಜಿಲ್ಲೆಯ ಎಲ್ಲ ಕೆರೆಗಳಿಗೆ ನೀರು ತುಂಬಿಸುವ ಯೋಜನೆಯನ್ನು ಹಾಕಿಕೊಳ್ಳಲಾಗಿದೆಯಾದರೂ ಅದು ಅನುಷ್ಠಾನಕ್ಕೆ ಬಂದಿಲ್ಲ ಇದಕ್ಕೆ ನಮ್ಮ ಜನಪ್ರತಿನಿಧಿಗಳ ರಾಜಕೀಯ ಇಚ್ಛಾಶಕ್ತಿ ಕೊರತೆ ಎಂದು ವಿಷಾಧಿಸಿದರು.
ಕೃಷ್ಣಾ ಬಿ ಸ್ಕಿಂ, ಹಿರೇಹಳ್ಳ ಏತ ನೀರಾವರಿ ಹಾಗೂ ಸಿಂಗಟಾಲೂರ ಏತ ನೀರಾವರಿ ಯೋಜನೆಗಳು ಜಿಲ್ಲೆಯಲ್ಲಿ ಸಂಪೂರ್ಣವಾಗಿ ಅನುಷ್ಠಾನಗೊಂಡಲ್ಲಿ ಕೊಪ್ಪಳ ಜಿಲ್ಲೆ ಸಂಪದ್ಭರಿತ ಜಿಲ್ಲೆಯಾಗುದರಲ್ಲಿ ಅನುಮಾನವಿಲ್ಲ ಇದಕ್ಕೆ ನಮ್ಮ ಜಿಲ್ಲೆಯ ಜನಪ್ರತಿನಿಧಿಗಳು ಮನಸ್ಸು ಮಾಡಬೇಕಷ್ಟೆ ಎಂದರು.
೬ನೇ ತಿರುಳುಗನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆಯನ್ನು ಜಿಲ್ಲಾ ಕಸಾಪ ಮಾಜಿ ಅಧ್ಯಕ್ಷ ಶೇಖರಗೌಡ ಮಾಲಿಪಾಟೀಲ್ ವಹಿಸಿದ್ದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪತ್ರಕರ್ತ ಎಂ.ಸಾದಿಕ್‌ಅಲಿ ವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ನಾಗರಿಕರ ವೇದಿಕೆಯ ಸಂಸ್ಥಾಪಕ ಅಧ್ಯಕ್ಷ ಮಾರುತಿರಾವ್ ಸುರ್ವೆ, ಸಾಹಿತಿ ಮಹಾಂತೇಶ ಮಲ್ಲನಗೌಡರ, ಕೆಎಂಸಿ ನ್ಯೂಸ್‌ನ ಎಂ.ಜೆ.ಗೀರೀಶ, ಹಿರಿಯ ವಕೀಲೆ ಸಂದ್ಯಾ ಮಾದಿನೂರ, ನಾಗರಿಕರ ವೇದಿಕೆಯ ರಾಜ್ಯ ಉಪಾಧ್ಯಕ್ಷ ಸಿದ್ದಪ್ಪ ಹಂಚಿನಾಳ, ಕಾರ್ಯದರ್ಶಿ ಎನ್.ಎಂ.ದೊಡ್ಡಮನಿ, ಹಿರಿಯ ಪತ್ರಕರ್ತ ಎಚ್.ಎಸ್.ಹರೀಶ್, ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘಧ ಅಧ್ಯಕ್ಷ ಜಿ.ಎಸ್.ಗೋನಾಳ, ನಗರಸಭೆ ಮಾಜಿ ಸದಸ್ಯೆ ಶಕುಂತಲಾ ಹುಡೆಜಾಲಿ, ಸಮಾಜ ಸೇವಕಿ ಶ್ರೀಮತಿ ಮಲ್ಲಿಕಾ ಮತ್ತಿತರರು ಭಾಗವಹಿಸಿದ್ದರು.
ಕಾರ್ಯಕ್ರಮದಲ್ಲಿ ಬೆಂಗಳೂರಿನ ಹೆಬ್ಬಾಳದ ಯುಎಎಸ್ ಕ್ಯಾಂಪಸ್‌ನ ಕೆ.ವರ್ಷಾ ಹಾಗೂ ರಾಜೇಶ್ವರಿ ಸಂಗಡಿಗರಿಂದ ವಿವಿಧ ಸಾಂಸ್ಕೃತಿಕ ನೃತ್ಯ ಕಾರ್ಯಕ್ರಮಗಳು ಜರುಗಿದವು.
ನಾಗರಿಕರ ವೇದಿಕೆಯ ರಾಜ್ಯಾಧ್ಯಾಕ್ಷ ಮಹೇಶ ಸುರ್ವೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಉಮೇಶ ಸುರ್ವೆ ಕಾರ್ಯಕ್ರಮ ನಿರ್ವಹಿಸಿದರು.

೬ನೇ ತಿರುಳುಗನ್ನಡ ಸಮ್ಮೇಳನಕ್ಕೆ ಅದ್ದೂರಿ ಚಾಲನೆ
ಕೊಪ್ಪಳ. ಸಮ್ಮೇಳನಧ್ಯಾಕ್ಷ ಶೇಖರಗೌಡ ಮಾಲೀಪಾಟಿಲ್ ಅವರು ಕೊಪ್ಪಳ ಜಿಲ್ಲಾ ಉತ್ಸವ ಕಾರ್ಯಕ್ರಮವನ್ನು ಕುರಿತು ಜಿಲ್ಲೆಯ ಹಿರಿಯ ಸಾಹಿತಿಗಳಾದ ದಿ|| ಜೆ.ಎಚ್ ಪಾಟೀಲ್‌ರನ್ನು ಸ್ಮರಿತ್ತಾ ಕೊಪ್ಪಳ ಜಿಲ್ಲೆಯ ಪಾರಂಪರೆಯನ್ನು ಮತ್ತು ಕವಿರಾಜ ಮಾರ್ಗದಲ್ಲಿ ಜಿಲ್ಲೆಯ ಕುರಿತಾದ ವರ್ಣಯನ್ನು ವಿವರಿಸುತ್ತಾ, ಜಿಲ್ಲೆಯ ಜನರು ಸಾಹಿತ್ತಯಕ್ಕೆ ಹೆಚ್ಚು ಪ್ರೋತ್ಸಹವನ್ನು ನೀಡುತ್ತಾ ಬಂದಿದ್ದು ಜಿಲ್ಲೆಯಲ್ಲಿ ಈವರೆಗೂ ನಡೆದ ಎರಡು ಸಾಹಿತ್ಯ ಸಮ್ಮೇಳನಗಳು ಪ್ರಾಶಂಸನೀಯವಾಗದ್ದು, ೧೯೭೭ ರ ಸಾಹಿತ್ಯ ಸಮ್ಮೇಳನ ಹಾಗೂ ಇತ್ತೀಗೆ ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನಲ್ಲಿ ನಡೆದ ಸಾಹಿತ್ಯ ಸಮ್ಮೇಳನ ಅತ್ಯಂತ ಜನಪ್ರೀಯವಾಗಿದ್ದು, ಕೊಪ್ಪಳ ಜನತೆಯು ಸ್ವಾತಂತ್ಯ ಹೋರಾಟದಲ್ಲಿ ಮುಂಡರಗಿ ಭೀಮರಾಯ ಸ್ವಾತಂತ್ಯ ಹೋರಾಟದ ಕಿಚ್ಚನ್ನು ಹಚ್ಚಿದ್ದಾರೆ, ಜಿಲ್ಲೆಯು ಸಾಹಿತ್ಯದಲ್ಲಿ ಪ್ರಸಿದ್ದಿಯನ್ನು ಪಡೆದಿದ್ದು ನವೋದಯ, ಭಂಡಾಯ ಹೆಚ್ಚು ಪ್ರಚಲಿತದಲಿದ್ದು ಜಿಲ್ಲೆಯಲ್ಲಿ ಯುವ ಪತ್ರಕರ್ತರು ತಮ್ಮದೇ ಆದ ಶೈಲಿಯಲ್ಲಿ ವಾರ್ತವಾಚಕರಾಗಿದ್ದು ಜಿಲ್ಲೆಯ ಪ್ರತಿಯಲ್ಲಿ ಮಹತ್ತವದ ಪತ್ರವನ್ನು ವಹಿಸಿದ್ದಾರೆ ಎಂದರು.
ಉದ್ಘಾಟನೆಯ ನಂತರದಲ್ಲಿ ಮಹಾಂತೇಶ್ ಮಲ್ಲನಗೌಡ ನಿಕಟಪೂರ್ವ ಸಮ್ಮೇಳನಾಧ್ಯಕ್ಷರು ಇವರಿಂದ ಸಮ್ಮೇಳನ ಅದ್ಯಕ್ಷರಾದ ಶ್ರೀ ಶೇಖರಗೌಡ ಮಾಲಿಪಾಟೀಲ್ ಅವರಿಗೆ ಸಮ್ಮೆಳನದ ಧ್ವಜ ಹಸ್ತಾಂತರಿಸಲಾಯಿತು. ಕೊಪ್ಪಳ ಜಿಲ್ಲೆಗಾಗಿ ಕಾರಣಿಕರ್ತರಾದ ದಿ|| ಜೆ.ಎಚ್ ಪಾಟೀಲ್ ರವರಿ ಸಮ್ಮೇಳನ ಅಧ್ಯಕ್ಷರಿಂದ ಪುಷ್ಪಗುಚ್ಚಗಳ ಮೂಲಕ ಗೌರವ ನಮನ ಸಲ್ಲಿಸಲಾಯಿತು. ಹಾಗೂ ಕೊಪ್ಪಳ ಜಿಲ್ಲೆಯ ಹರಿಕರರಾದಂತಹ ದಿ|| ಸಿದ್ದಯ್ಯ ಪುರಾಣಿಕ್ ರವರಿಗೆ ಸಮ್ಮೇಳನದ ಹಿರಿಯ ವಕೀಲರಾದ ಸಂಧ್ಯಾ ಮಾದಿನೂರು ಅವರಿಂದ ಪುಷ್ಪಗುಚ್ಚಗಳ ಮೂಲಕ ಗೌರವ ನಮನ ಸಲ್ಲಿಸಲಾಯಿತು.
ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದಂತಹ ಶ್ರೀಮತಿ ಸಧ್ಯಾ ಮಾದಿನೂರು ಹಿರಿಯ ವಕೀಲರು ಕೊಪ್ಪಳ ರವರು ಕೊಪ್ಪಳ ಜಿಲ್ಲಾ ಉತ್ಸವದ ಮೂಲಕ ಕೊಪ್ಪಳ ಜಿಲ್ಲೆಯ ಸಮಸ್ಯೆಗಳನ್ನು ನಾಗರೀಕ ವೇದಿಕೆಯ ಮೂಲಕ ಜಿಲ್ಲೆಯಲ್ಲಿ ನೆಲೆಗುಂಡಿಗೆ ಬಿದ್ದಿರುವ ಸಮಸ್ಯೆಗಳನ್ನು ಜಿಲ್ಲಾಧಿಕಾರಿಗಳಿಗೆ ತಿಳಿಸುವ ಮೂಲಕ ಹಂತ ಹಂತವಾಗಿ ಜಿಲ್ಲೆಯ ಅಭಿವೃದ್ದಿಗೆ ಮುಂದಾಗಬೇಕೆಂದು ಹೇಳಿದರು. ಕೊಪ್ಪಳ ಜಿಲ್ಲಾ ಉತ್ಸವವು ಅನೇಕ ರೀತಿಯ ಕಾರ್ಯಕ್ರಮಗಳನ್ನು ಮಾಡುತ್ತಾ ಉತ್ತಮವಾದ ಸಾಂಸ್ಕ್ರತಿಕ ಹಾಗೂ ಸಾಮಾಜಿಕ ಮನರಂಜನೆಯನ್ನು ನೀಡುತ್ತಾ ಬಂದಿದೆ ಎಂದು ವೇದಿಕೆಯನ್ನು ಉದ್ದೇಶಿಸಿ ಮಾತನಾಡಿದರು.

 

Advertisement

0 comments:

Post a Comment

 
Top