PLEASE LOGIN TO KANNADANET.COM FOR REGULAR NEWS-UPDATES


ಕೊಪ್ಪಳ ಜಿಲ್ಲಾ ನಾಗರಿಕರ ವೇದಿಕೆವತಿಯಿಂದ ಪ್ರತಿವರ್ಷದಂತೆ ಜರುಗುವ ಈ ವರ್ಷದ ೨೦೧೪ರ  ೮ನೇ ಜಿಲ್ಲಾ ಉತ್ಸವದಲ್ಲಿ  ರಾಯಚೂರು ಜಿಲ್ಲೆಯ ಸಿಂಧನೂರು ನಗರದಲ್ಲಿ ಕಾರ್ಯನಿರ್ವಹಿಸುತ್ತಿರುವ ಸಿವಿಲ್ ಅಭಿಯಂತ ಹಾಗೂ ಗುತ್ತಿಗೆದಾರ ಕೊಪ್ಪಳದ ಎಂ.ನಜೀರ್‌ಹುಸೇನ್ ರವರಿಗೆ ದಿ.೨೪ರ ರವಿವಾರ ಸಂಜೆ ಇಲ್ಲಿನ ಸಾಹಿತ್ಯ ಭವನದಲ್ಲಿ ಏರ್ಪಡಿಸಿದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಕೊಪ್ಪಳ ಐಸಿರಿ ಪ್ರಶಸ್ತಿಯನ್ನು ಅವರ ಅತ್ಯುತ್ತಮ ಸಾಧನೆ ಮತ್ತು ಸೇವೆಗಾಗಿ ನೀಡಿ ಸತ್ಕರಿಸಲಾಯಿತು.
  ಎಂ.ನಜೀರ್‌ಹುಸೇನ್ ರವರು ೧೯೯೬ರಿಂದ ಇಲ್ಲಿಯ ವರೆಗೆ ರಾಯಚೂರು ಮತ್ತು ಕೊಪ್ಪಳ ಜಿಲ್ಲೆಗಳಲ್ಲಿ ಎನ್.ಕೆ.ಕನ್ಸಲ್ಟಿಂಗ್ ಇಂಜಿನಿಯರಿಂಗ ಸಂಸ್ಥೆಯಕಾರ್ಯದ ಜೊತೆಗೆ ಸಮಾಜ ಸೇವೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ಉತ್ತಮ ಕೆಲಸ ಮಾಡುತ್ತಿದ್ದಾರೆ ಅವರ ಈ ಕಾರ್ಯ ಮತ್ತು ಸೇವೆಯನ್ನು ಪರಿಗಣಿಸಿ ಅವರಿಗೆ ಕೊಪ್ಪಳ ಜಿಲ್ಲಾ ಉತ್ಸವದಲ್ಲಿ ಕೊಪ್ಪಳ ಜಿಲ್ಲಾ ನಾಗರೀಕರ ವೇದಿಕೆ ವತಿಯಿಂದ ಕೊಡಮಾಡುವ ಕೊಪ್ಪಳ ಐಸಿರಿ ಪ್ರಶಸ್ತಿಯನ್ನು ನೀಡಿ  ಸನ್ಮಾನಿಸಲಾಯಿತು.
  ಈ ಸಂದರ್ಭದಲ್ಲಿ ಜಿಲ್ಲಾ ತಿರುಳ್ಗನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಶೇಖರಗೌಢ ಮಾಲೀಪಾಟೀಲ್, ಸಾಹಿತಿ ಮತ್ತು ಹಿರಿಯ ಪತ್ರಕರ್ತ ವಿಠ್ಠಪ್ಪ ಗೋರಂಟ್ಲಿ, ಸಾಹಿತಿ ಡಾ.iಹಾತೇಂಶ ಮಲ್ಲನಗೌಡರ್, ನಗರಸಭಾ ಸದಸ್ಯೆ ವಿಜಯಾ ಹಿರೇಮಠ,  ಮತ್ತು ಸಿದ್ದಲಿಂಗಯ್ಯ ಹಿರೇಮಠ, ನಾಗರಿಕರ ವೇದಿಕೆಯ ರಾಜ್ಯಾಧ್ಯಕ್ಷ ಮಹೇಶ್ ಬಾಬು ಸುರ್ವೆಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.
  ಅಭಿನಂದನೆ. ರಾಯಚೂರು ಜಿಲ್ಲೆ ಸಿಂಧನೂರು ನಗರದಲ್ಲಿ ಎನ್.ಕೆ.ಕನ್ಸಲ್ಟಿಂಗ್ ಇಂಜಿನಿಯರಿಂಗ್ ಏಜನ್ಸಿ ಸ್ಥಾಪಿಸಿ ತಮ್ಮ ಕೆಲಸದ ಜೊತೆ ಸಾಮಾಜಿಕ ಕಾರ್ಯ ಚಟುವಟಿಕೆಯಲ್ಲಿ ತೊಡಗಿಸಿಕೊಂಡು ಸೇವೆಸಲ್ಲಿಸಿ ಮತ್ತು ಉತ್ತಮ ಗುಣಮಟ್ಟದ ಸುಂದರ ಕಟ್ಟಡ ನಿರ್ಮಿಸುವಲ್ಲಿ ಯಶಸ್ವಿಯಾಗಿ ಕೊಪ್ಪಳ ಜಿಲ್ಲೆಯ ಹೆಸರು ಗಳಿಸಿ ಈಗ ಕೊಪ್ಪಳ ಜಿಲ್ಲಾ ಉತ್ಸವದಲ್ಲಿ ಕೊಪ್ಪಳ ಐಸಿರಿ ಪ್ರಶಸ್ತಿಯನ್ನು ೨೦೧೪ರ ಸಾಲಿನಲ್ಲಿ ಪ್ರಶಸ್ತಿ ಪಡೆದಿರುವುದಕ್ಕೆ ಅವರ ಸ್ನೇಹಿತರ ಬಳಗ ಹರ್ಷ ವ್ಯಕ್ತಪಡಿಸಿ ಅಭಿನಂಸಿದಿದೆ ಹಾಗೂ ಇಲ್ಲಿನ ವಿವಿಧ ಸಂಘಟನೆಗೆಳು ಕೂಡಾ ಅಭಿನಂದಿಸಿದ್ದಾರೆ.

Advertisement

0 comments:

Post a Comment

 
Top