PLEASE LOGIN TO KANNADANET.COM FOR REGULAR NEWS-UPDATES

 ಕಿನ್ನಾಳ ಶ್ರೀ ಕಾಶೀವಿಶ್ವನಾಥ ದೇವಸ್ಥಾನದಲ್ಲಿ ದಿ. ೧೭-೦೮-೨೦೧೪ ರಿಂದ ೨೨-೦೮-೨೦೧೪ರ ವರೆಗಿನ ಶ್ರೀ ಬೆಟ್ಟದಲಿಂಗೇಶ್ವರ ೯ನೇ ವರ್ಷದ ಅಹೋರಾತ್ರಿ ಪುರಾಣ ಮಹೋತ್ಸವ ಹಾಗೂ ಸಂಗೀತೋತ್ಸವ ಕಾರ್ಯಕ್ರಮ ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಇವರುಗಳ ಸಂಯುಕ್ತಾಶ್ರಯದಲ್ಲಿ ಅದ್ದೂರಿಯಾಗಿ ನಡೆಯಿತು.  ಶ್ರೀ ಬೆಟ್ಟದ ಲಿಂಗೇಶ್ವರ ಪುರಾಣ ವಿದ್ವಾಂಸರಿಂದ ಪ್ರವಚನ ಹಾಗೂ ಖ್ಯಾತ ಸಂಗೀತ ಕಲಾವಿದರಿಂದ ಹಿಂದೂಸ್ಥಾನಿ ಶಾಸ್ತ್ರೀಯ ಸಂಗೀತ ಭಕ್ತಿಸಂಗೀತ, ಜಾನಪದ ಇತ್ಯಾದಿ ಕಾರ್ಯಕ್ರಮಗಳನ್ನು ವ್ಯವಸ್ಥೆ ಮಾಡಲಾಗಿತ್ತು.    ಗುರುರಾವ ದೇಶಪಾಂಡೆ ಸಂಗೀತ ಸಭಾ ಬೆಂಗಳೂರು ಇವರ ಗ್ರಾಮ ಸಂಗೀತ ಯಾತ್ರಾ ಯೋಜನೆಯಡಿಯಲ್ಲಿ ಖ್ಯಾತ ಹಿಂದೂಸ್ಥಾನಿ ಶಾಸ್ತ್ರೀಯ ಸಂಗೀತ ಗಾಯಕಿ ಶ್ರೀಮತಿ ವಸುಧಾ ಕಿನ್ನಾಳ ಇವರಿಂದ ರಾಗ; ಭೂಪಾಲಿ ವಿಲಂಬಿತ್ ತಿನ್‌ತಾಳ್ ರಾಗ ಯಮನದಲ್ಲಿ ತರಾನ & ದಾಸರ ಪದಗಳನ್ನು ಪ್ರೇಕ್ಷಕರ ಮನ ತಂಗಿಸುವಲ್ಲಿ ಯಶಸ್ವಿಯಾದರೆ, ಕು.ದತ್ತಾತ್ರೇಯ ಮುತಾಲಿಕ್ ಬೆಂಗಳೂರು ಇವರ ಬಾನ್ಸುರಿ ವಾದನದಲ್ಲಿ ರಾ: ಜೋಗ; ವಿಲಂಬಿತ್ ತಿನ್‌ತಾಲ್, ಅಭಂಗ್ ಸುಮರಿ ನುಡಿಸುವಲ್ಲಿ  ಜನರನ್ನು ಅನೇಕ ದಾಸರಪದ, ವಚನ ಪ್ರಸ್ತುತಪಡಿಸಿದರು.  ಜಾನಪದ ಲಹರಿಯಲ್ಲಿ ಶ್ರೀ ವಾಲ್ಮೀಕಿಮುನಿ. ಹ.ಯಕ್ಕರನಾಳ ಇವರು ಮೂಲ ಬಿಸುವ ಪದ, ಹಂತಿಪದ, ಎದರಗೊಳ್ಳಪದ, ಸೋಬಾನಪದ ಅತ್ಯದ್ಭುತವಾಗಿ ಹಾಡಿದರು.  

ಗಾನ ಪ್ರವಚನ :  ಸುಮೇಧಾನಂದ ಸ್ವಾಮೀಜಿ, ಅಧ್ಯಕ್ಷರು,  ರಾಮಕೃಷ್ಣ ಗೀತಾಶ್ರಮ ಹೊಸಪೇಟೆ, ಕು.ಚಂಪಕಮಾಲ ಆನೆಗೊಂದಿ, ಶಿವಲಿಂಗಪ್ಪ ಗುದಮುರಗಿ ಸಾ: ಹಿರೇಬಿಡನಾಳ ಇವರಿಂದ ಪ್ರವಚನ  ಬಸವೇಶ್ವರ ಭಜನಾ ಸಂಘ ಹಿರೇಬಿಡನಾಳ ಇವರಿಂದ ಭಜನೆ ಕಾರ್ಯಕ್ರಮ,   ಬಸವರಾಜ ಇಟಗಿ ಪುರಾಣಪಠಣ,  ವಿದ್ಯಾಸಾಗರ ಕುದ್ರಿಮೋತಿ ಪುರಾಣ ಪ್ರವಚನ,  ಶಾರದಾ ಸಂಗೀತ ಕಲಾ, ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿಗಳಿಂದ ಸಂಗೀತ ಕಾರ್ಯಕ್ರಮ ಮುಂತಾದ ಕಲಾವಿಇದರು ಈ ಸಮಾರಂಭದ ಅಂಗವಾಗಿ ಪ್ರತಿದಿನ ಭಕ್ತಿಸಂಗೀತ ಕಾರ್ಯಕ್ರಮ ನೀಡಿದರು.  ಶ್ರೀ ಶಾರದಾ ಸಂಗೀತ ಮಹಾವಿದ್ಯಾಲಯ ಪ್ರಾಚಾರ್ಯ ಲಚ್ಚಪ್ಪ ಹಳೆಪೇಟೆ (ಹಾರ‍್ಮೋನಿಯಂ ಸಾಥ್) ತಬಲಾಸಾಥ್ : ಖ್ಯಾತ ತಬಲಾಪಟು   ಜಲಿಲಪಾಷಾ ಮುದ್ದಾಬಳ್ಳಿ ಗಂಗಾವತಿ ಮತ್ತು ಕು. ಶಿವಲಿಂಗಪ್ಪ ಹಳೆಪೇಟೆ ತಬಲಾ & ತಾಳ   ಕೃಷ್ಣ ಸೊರಟೂರು ಕೊಪ್ಪಳ ಗೆಜ್ಜೆ ಸಾಥ್ ಕು. ವಿನಾಯಕ ಹಳೆಪೇಟೆ, ಚಿದಾನಂದಪ್ಪ ಹೆಚ್. ಕಿನ್ನಾಳ,  ರಂಗಪ್ಪ ಕಡ್ಲಿಬಾಳ ಈ ೧೧ ದಿವಸಗಳ ಅಹೋರಾತ್ರಿ ಪುರಾಣ & ಸಂಗೀತೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.  

ಈ ಕಾರ್ಯಕ್ರಮದ ಸಾನಿಧ್ಯವನ್ನು ಕೊಪ್ಪಳ   ರಾಮಕೃಷ್ಣ ವಿವೇಕಾನಂದ ಶ್ರೀಮಠ ಅಧ್ಯಕ್ಷರು,  ಚೇತನಾನಂದ ಸ್ವಾಮೀಜಿ, ಶ್ರೀ ಸಣ್ಣವೀರಯ್ಯಸ್ವಾಮಿ ಹಿರೇಮಠ ಕಿನ್ನಾಳ ಉದ್ಘಾಟನೆಯನ್ನು ;  ಗಂಗಾಧರಪ್ಪ ಕುಂಬಾರ ಸಾ; ಹೂಳೂರು ತಾ: ಸಿರುಗುಪ್ಪ ಜಿ:ಬಳ್ಳಾರಿ ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ;   ಪುಟ್ಟಣ್ಣ ಬೆಲ್ಮಕೊಂಡಿ ಮುಖ್ಯ ಅತಿಥಿಗಳಾಗಿ: ರಂಗಭೂಮಿ ಕಲಾವಿದರಾದ  ಭರಮಪ್ಪ ಜುಟ್ಲದ, ಅಣ್ಣಪ್ಪ ಪರಗಿ, ಶಂಕ್ರಪ್ಪ ಶಿರಿಗೇರಿ, ಮೇಲಪ್ಪ ರ‍್ಯಾವಣಿಕಿ, ಸೋಮಪ್ಪ ತೋಟದ ಹಿರೇಬಿಡನಾಳ ಈರಪ್ಪ ಕುರಿ, ರಾಮಣ್ಣ ನಾಗರಡ್ಡಿ, ನಿಂಗಜ್ಜ ಕೆ.  ಚಂದ್ರಪ್ಪ ಯಳ್ಪಿ, ನರಸಪ್ಪ ತಾವರಗೇರಾ, ಲಕ್ಷ್ಮಣಪ್ಪ ಬಡಗಲ್ ಸಾ: ಗಂಗಾವತಿ ಇನ್ನೂ ಅನೇಕ ಗಣ್ಯ ಮಹನೀಯ ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.  ಈ ಕಾರ್ಯಕ್ರಮದ ಪ್ರಥಮವಾಗಿ ಶ್ರೀ ಶಾರದಾ ಸಂಗೀತ ಮಹಾವಿದ್ಯಾಲಯದ ಪ್ರಾಚಾರ್ಯ  ಲಚಪ್ಪ ಹಳೆಪೇಟೆ ಪ್ರಾರ್ಥಿಸಿದರು ಮತ್ತು ಸಂಗಪ್ಪ ಚಕ್ರಸಾಲಿ ಶಿಕ್ಷಕರು ನಿರೂಪಿಸಿದರು.  

ಈ ಕಾರ್ಯಕ್ರಮದಲ್ಲಿ ಉದಯ ಡೆಕೋರೆಷನ್ ನಿರ್ದೇಶಕ ಒಳ್ಳೆಯ ಸಹಕಾರದೊಂದಿಗೆ ಕಾರ್ಯಕ್ರಮಕ್ಕೆ ಮೆರಗು ತಂದಿತು.  

Advertisement

0 comments:

Post a Comment

 
Top