PLEASE LOGIN TO KANNADANET.COM FOR REGULAR NEWS-UPDATES


ಸರಕಾರದ ಯೋಜನೆಗಳನ್ನು ಸಮುದಾಯಕ್ಕೆ ಮುಟ್ಟಿಸುವಲ್ಲಿ ಬೀದಿನಾಟಕ ಪ್ರಬಲ ಮಾಧ್ಯಮವಾಗಿದೆ ಎಂದು ಕಸಾಪ ಜಿಲ್ಲಾಧ್ಯಕ್ಷ ವೀರಪ್ಪ ಮ. ನಿಂಗೋಜಿ ಹೇಳಿದರು.
ಅವರು ಶುಕ್ರವಾರ ಯಲಬುರ್ಗಾ ತಾಲೂಕಿನ ಕರಮುಡಿ ಗ್ರಾಮದ ಶ್ರೀ ಆಂನೇಯ ದೇವದ್ಥಾನದ ಆವರಣದಲ್ಲಿ ವಾರ್ತಾಇಲಾಖೆ ಹಾಗೂ ದ್ವಾರಕಾ ಸಮುದಾಯ ಅಭಿವೃದ್ಧಿ ಸಂಸ್ಥೆ ಇವರ ಸಹಯೋಗದಲ್ಲಿ ಸರಕಾರದ ಜನಪ್ರೀಯ ಯೋಜನೆಗಳು ಹಾಗೂ ಸಾಧನೆ ಕುರಿತು ಹಮ್ಮಿಕೊಳ್ಳಲಾಗಿದ್ದ ಬೀದಿನಾಟಕ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.
ದ್ವಾರಕಾ ಸಮುದಾಯ ಅಭಿವೃದ್ಧಿ ಸಂಸ್ಥೆ ಪ್ರಧಾನ ಕಾರ್ಯದರ್ಶಿ ವೈ. ಬಿ. ಜೂಡಿ ಅವರ ನಿರ್ದೇಶನದಲ್ಲಿ ಸರಕಾರದ ಜನಪರ ಯೋಜನೆಗಳಾದ ಅನ್ನಭಾಗ್ಯ, ಕ್ಷೀರಭಾಗ್ಯ, ವಸತಿಭಾಗ್ಯ, ವಿದ್ಯಾಸಿರಿ, ಮನಸ್ವಿನಿ, ಮೈತ್ರಿ ಸೇರಿದಂತೆ ವಿವಿಧ ಯೋಜನೆಗಳ ಕುರಿತು ತಂಡದ ಕಾವಿದರಾಗಿ ದಾಲಸಾಬ ಅತ್ತಾರ್, ಕೊಟ್ರೇಶ ಲಕ್ಕಿಮರದ, ಕೆ.ಆರ್. ಸ್ವಾಮಿ, ನಾಗರಾಜ ಕಂಕಿ, ವೀರೇಶ ಅಳವಂಡಿ, ಲಲಿತವ್ವ ಪುಜಾರ, ಗ್ಯಾನೇಶ ಬಡಿಗೇರ, ಪ್ರಕಾಶ ಗಡಿಗಿ, ಚಿರಂಜವ್ವ ನಟಿಸಿದ್ದರು.
ಈ ಸಂದರ್ಭದಲ್ಲಿ ಕರಮುಡಿ ಗ್ರಾ.ಪಂ. ಕಾರ್ಯದರ್ಶಿ ಈರಪ್ಪ, ಎಸ್.ಡಿ.ಎಂ.ಸಿ ಮಾಜಿ ಅಧ್ಯಕ್ಷ ಸಂಗಪ್ಪ, ಯುವಕ ಸಂಘದ ಸದಸ್ಯ ಆನಂದ ಮುಂತಾವರು ಇದ್ದರು.

Advertisement

0 comments:

Post a Comment

 
Top