PLEASE LOGIN TO KANNADANET.COM FOR REGULAR NEWS-UPDATES

 ಕೊಪ್ಪಳ-೯ ಕ್ಷೇತ್ರದ ಹಳೇ ಕನಕಾಪೂರು, ಬಸಾಪೂರು, ಹಾಲವರ್ತಿ, ಕುಣಕೇರಿ ತಾಂಡಾ ಹಾಗೂ ಕುಣಕೇರಿ ಗ್ರಾಮಗಳಲ್ಲಿ ಎಸ್‌ಸಿಪಿ ಮತ್ತು ಟಿಎಸ್‌ಪಿ ಯೋಜನೆಗಳಡಿಯಲ್ಲಿ  ರೂ. ೧೦೦.೦೦ ಲಕ್ಷ ಅನುದಾನದಲ್ಲಿ ಸಿಸಿ ರಸ್ತೆ ಮತ್ತು ಸಮುದಾಯ ಭವನಗಳ ಕಾಮಗಾರಿಗೆ ಕೊಪ್ಪಳದ ಜನಪ್ರೀಯ ಶಾಸಕರಾದ ಕೆ. ರಾಘವೇಂಧ್ರ ಹಿಟ್ನಾಳ ರವರು ಭೂಮಿ ಪೂಜೆ ನೆರವೇರಿಸಿ, ಕಾಮಗಾರಿಗೆ ಚಾಲನೆ ನೀಡಿದರು.
                ಈ ಸಂದರ್ಭದಲ್ಲಿ ಮಾತನಾಡಿದ ಅವರು ಕ್ಷೇತ್ರದ ಪ್ರತಿಯೊಂದು ಗ್ರಾಮದಲ್ಲಿ ಉತ್ತಮ ಗುಣಮಟ್ಟದ ಸಿಸಿ ರಸ್ತೆ, ಶುದ್ದ ಕುಡಿಯುವ ನೀರು, ಚರಂಡಿ ವ್ಯವಸ್ಥೆ ಹಾಗೂ ಗ್ರಾಮಗಳಿಗೆ ನೀರಾವರಿಯ ಸೌಲಭ್ಯವನ್ನು ಒದಗಿಸಲಾಗುವುದು, ಈಗಾಗಲೇ ಕ್ಷೇತ್ರದ ಅನೇಕ ಗ್ರಾಮಗಳಲ್ಲಿ ಈ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದೆ. ಕೊಪ್ಪಳ ಕ್ಷೇತ್ರದ ಗುಣಮಟ್ಟದ ಶಿಕ್ಷಣಕ್ಕೆ ಹೆಚ್ಚಿನ ಒತ್ತುಕೊಟ್ಟು ಭವಿಷ್ಯದಲ್ಲಿ ಇಲ್ಲಿಯ ಬಡ ವಿದ್ಯಾರ್ಥಿಗಳಿಗೆ ಹೆಚ್ಚಿನ ವಿದ್ಯಾಭಾಸಕ್ಕಾಗಿ ಈಗಾಗಲೇ ಮೇಡಿಕಲ್ ಕಾಲೇಜ ಬರುವ ದಿನಗಳಲ್ಲಿ ಪ್ರಾರಂಭಗೊಳ್ಳಲಿದೆ. ಈ ಭಾಗದ ಬಡ ವಿದ್ಯಾರ್ಥಿಗಳ ಭವಿಷ್ಯಕ್ಕೆ ಆಶಾಕಿರಣವಾಗಲಿದೆ. ಕ್ಷೇತ್ರದ ಪ್ರತಿಯೊಬ್ಬ ಪಾಲಕರು ಮಕ್ಕಳ ಉಜ್ವಲ ಭವಿಷ್ಯಕ್ಕಾಗಿ ಉತ್ತಮ ಶಿಕ್ಷಣಕ್ಕೆ ಹೆಚ್ಚು ಆದ್ಯತೆ ನೀಡಬೇಕೆಂದು ಕರೆ ನೀಡಿದರು. ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಕಾಂಗ್ರೇಸ್ ಸರಕಾರದ ಜನಪ್ರೀಯ ಮುಖ್ಯ ಮಂತ್ರಿಗಳಾದ ಸಿದ್ದರಾಮಯ್ಯನವರು ರಾಜ್ಯದ ಬಡ ವಿದ್ಯಾರ್ಥಿಗಳಿಗೆ ಶಿಕ್ಷಣ ಕ್ಷೇತ್ರದಲ್ಲಿ ಅನೇಕ ಯೋಜನೆಗಳನ್ನು ಜಾರಿಗೆ ತಂದಿದ್ದಾರೆ. ಈ ಯೋಜನೆಗಳ ಸದುಪಯೋಗವನ್ನು ವಿದ್ಯಾರ್ಥಿಗಳು ಪಡೆದು ಕೋಳ್ಳಬೇಕೆಂದು ಹೇಳಿದರು 
ಈ ಸಂದರ್ಭದಲ್ಲಿ  ಗೂಳಪ್ಪ ಹಲಗೇರಿ, ನಾಗರಾಜ ಚಳ್ಳೊಳ್ಳಿ, ಲಕ್ಷ್ಮವ್ವ ಪೂಜಾರ, ಯಮನೂರಪ್ಪ ಕಟ್ಟಗಿ, ಗುದ್ನೇಪ್ಪ ಹೊಸುರು, ಮಾರುತಿ ಪೂಜಾರ, ಮರಿಯಪ್ಪ ಕಾರಬಾರಿ, ಕೇಶಪ್ಪ ಪೂಜಾರ, ಸೋಮಪ್ಪ ಅಗಸಿಮನಿ, ಪಂಪಣ್ಣ ಪೂಜಾರ, ಮುತ್ತು ಪೂಜಾರ, ವಿವಿಧ ಇಲಾಖೆಗಳ ಅಧಿಕಾರಿಗಳು ಅಭಿಯಂತರರು ಉಪಸ್ಥಿತರಿದ್ದರು.  

Advertisement

0 comments:

Post a Comment

 
Top