ಇದೇ ದಿ. ೧೬ ರಂದು ಸೋಮವಾರ ನಗರದ ಮಳೆಮಲ್ಲೇಶ್ವರ ದೇವಾಲಯದಲ್ಲಿನ ಕಲ್ಯಾಣ ಮಂಟಪದಲ್ಲಿ ಪಾರಂಪರಿಕ ವೈದ್ಯರ ಔಷಧಿ ಸಸ್ಯಗಳ ದಾಖಲೀಕರಣ ಹಾಗೂ ಸನ್ಮಾನ ಸಮಾರಂಭ ಹಮ್ಮಿಕೊಳ್ಳಲಾಗಿದೆ. ಎಂದು ಪಾರಂಪರಿಕ ವೈದ್ಯ ಪರಿಷತ್ ರಾಜ್ಯಾಧ್ಯಕ್ಷ ವೈದ್ಯ ಮಹಾಂತೇಶ ವಿ. ಹಿರೇಮಠ ತಿಳಿಸಿದ್ದಾರೆ.
ಅವರು ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿ, ರಾಜ್ಯದಲ್ಲಿರುವ ಪಾರಂಪರಿಕ ವೈದ್ಯರು ಹಾಗೂ ನಾಟಿ ವೈದ್ಯರಿಗೆ ಕರ್ನಾಟಕ ಜ್ಞಾನ ಆಯೋಗ ಹಾಗೂ ಆಯುಷ್ ಇಲಾಖೆ ವತಿಯಿಂದ ಪಾರಂಪರಿಕ ವೈದ್ಯರಿಂದ ಆಯುರ್ವೇದ ವೈದ್ಯ ಪದ್ದತಿಯಲ್ಲಿ ಪ್ರಮುಖ ಪಾತ್ರವಹಿಸಿದ ಔಷಧಿ ಸಸ್ಯಗಳ ದಾಖಲೀಕರಣ ಮಾಡಲಾಗುವುದು. ನಂತರ ಪಾರಂಪರಿಕ ವೈದ್ಯರಿಗೆ ಸನ್ಮಾನಿಸಲು ತಿರ್ಮಾನಿಸಲಾಗಿದೆ. ಈ ಮಹತ್ವ ಕಾರ್ಯಕ್ಕೆ ಪಾರಂಪರಿಕ ವೈದ್ಯರು ಸ್ಪಂಧಿಸುವ ಕಾರ್ಯ ಅತ್ಯಂತ ಮಹತ್ವಪೂರ್ಣವಾಗಿದೆ. ಪಾರಂಪರಿಕ ವೈದ್ಯರಿಗೆ ಇರುವಂತಹ ಜ್ಞಾನ ವನಸ್ಪತಿಗಳ ಉಪಯೋಗ ಅದರ ಗುಣಧರ್ಮ, ಚಿಕಿತ್ಸೆ ಮತ್ತು ಔಷಧಿಗಳ ಮಹತ್ವ ದಾಖಲೀಕರಣ ಮಾಡುವ ಮುಖಾಂತರ ಮುಂದಿನ ಪೀಳಿಗೆಗೆ ಇದರ ಮಹತ್ವ ತಿಳಿಸಿ, ಉಳಿಸಿ ಬೆಳಸಿಕೊಂಡು ಹೋಗುವ ಗುರುತರ ಜವಾಬ್ದಾರಿ ನಮ್ಮ ನಿಮ್ಮಮೇಲಿದ್ದು ಈ ಕಾರ್ಯಕ್ರಮದ ಮುಖ್ಯ ಉದ್ದೇಶವಾಗಿದೆ ಎಂದು ತಿಳಿಸಿದ್ದಾರೆ. ಅತ್ಯಂತ ಕಡಿಮೆ ವೆಚ್ಚದಲ್ಲಿ ಆಯುರ್ವೇಧಿಕ ಔಷಧಿ ಪದ್ಧತಿ ಮುಖಾಂತರ ಭಯಂಕರ ರೋಗಗಳನ್ನು ಕಡಿಮೆ ಖರ್ಚಿನಲ್ಲಿ ಶಾಶ್ವತ ಗುಣಪಡಿಸಬಹುದಾಗಿದೆ. ಈ ಕುರಿತು ಹೆಚ್ಚಿನ ಮಾಹಿತಿ ಹಾಗೂ ನೊಂದಣಿಗಾಗಿ ವೈದ್ಯ ಪರಿಷತ್ ರಾಜ್ಯಾಧ್ಯಕ್ಷ ವೈದ್ಯ ಮಹಾಂತೇಶ ವಿ. ಹಿರೇಮಠ ಮೊ. ೯೭೪೧೯೦೮೨೨೬ ಸಂಪರ್ಕಿಸಲು ಕೋರಲಾಗಿದೆ.
0 comments:
Post a Comment