ಸರಕಾರಿ ಕೈಗಾರಿಕಾ ತರಬೇತಿ ಸಂಸ್ಥೆಗಳಿಗೆ ಪ್ರಸಕ್ತ ಸಾಲಿಗೆ ಮೆರಿಟ್ ಕಂ.ರಿಸರ್ವೇಷನ್ ಆಧಾರಿತ ಪ್ರವೇಶ ಪ್ರಕ್ರಿಯೆಯು ಪ್ರಾರಂಭಗೊಂಡಿದ್ದು, ದಿನಾಂಕ: 12-5-2014 ರಂದು 14 ವರ್ಷ ಮೇಲ್ಪಟ್ಟ ವಯೋಮಿತಿಯ 8ನೇ ತರಗತಿ, ಎಸ್.ಎಸ್.ಎಲ್.ಸಿ., ಪಿಯುಸಿ, ಜೆಓಸಿ, ಉತ್ತೀರ್ಣರಾದ ಅರ್ಹ ಆಸಕ್ತ ಅಭ್ಯರ್ಥಿಗಳಿಂದ ವಿವಿಧ ತಾಂತ್ರಿಕ, ತಾಂತ್ರಿಕೇತರ ವೃತ್ತಿಗಳಿಗೆ ರಾಜ್ಯದ ಯಾವುದೇ ಭಾಗದಿಂದ ಆನ್‌ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ಅರ್ಜಿ ಸಲ್ಲಿಸಲು ಜೂ.14 ಕೊನೆಯ ದಿನವಾಗಿದ್ದು, ವೆಬ್‌ಸೈಟ್ www.emptrg.kar.nic.in / www.detkarnataka.org.in ರ ಮೂಲಕ ಸಲ್ಲಿಸಬಹುದಾಗಿದೆ. ಅಭ್ಯರ್ಥಿಗಳು ರಾಜ್ಯದ ಯಾವುದೇ ಸರಕಾರಿ, ಅನುದಾನಿತ ಐಟಿಐ, ಇಂಟರ್‌ನೆಟ್ ಕೆಫೆ, ಸೈಬರ್ ಸೆಂಟರ್‌ನಲ್ಲಿ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ. ಕೊಪ್ಪಳ ಜಿಲ್ಲೆಯ ಸರಕಾರಿ ಕೈಗಾರಿಕಾ ತರಬೇತಿ ಸಂಸ್ಥೆಗಳಾದ ಕೊಪ್ಪಳ, ಕುಕನೂರು, ತಳಕಲ್, ಮಂಗಳೂರು ಗ್ರಾಮ, ಯಲಬುರ್ಗಾ (ಮ), ಹನುಮಸಾಗರ ಮತ್ತು ಗಂಗಾವತಿ, ಅನುದಾನಿತ ಕೈಗಾರಿಕಾ ತರಬೇತಿ ಸಂಸ್ಥೆಗಳಾದ ಮಂಡಲಗಿರಿ, ಮಾಲಗಿತ್ತಿ ಮತ್ತು ಗಂಗಾವತಿ ಈ ಸ್ಥಳಗಳಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ಸರಕಾರಿ/ಅನುದಾನಿತ ಕೈಗಾರಿಕಾ ತರಬೇತಿ ಸಂಸ್ಥೆಗಳ ಪ್ರಾಚಾರ್ಯರು ಕುಕನೂರು ದೂರವಾಣಿ ಸಂಖ್ಯೆ: 08534-230470 ಇವರನ್ನು ಕಛೇರಿ ವೇಳೆಯಲ್ಲಿ ಸಂಪರ್ಕಿಸಬಹುದಾಗಿದೆ ಎಂದು ಪ್ರಾಚಾರ್ಯರು ತಿಳಿಸಿದ್ದಾರೆ.
0 comments:
Post a Comment