
ಕೊಪ್ಪಳ ಜಿಲ್ಲಾ ಕುರಿಗಾರರ ಸಂಘ, ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಮತ್ತು ಸಿಪಿಐಎಂಎಲ್ ಜಂಟಿ ನೇತೃತ್ವದಲ್ಲಿ ಪ್ರತಿಭಟಿಸುತ್ತಾ, ಕಳೆದ ಮೂರು ವಾರಗಳಿಂದ ಕೂಕನಪಳ್ಳಿ ವಣಬಳ್ಳಾರಿ ರಾಜಕೀಯ ಪಕ್ಷಗಳ ಕಾರ್ಯಕರ್ತರಿಂದ ಸಂಘರ್ಷ ಏರ್ಪಟ್ಟು ಕುರಿ ಸಂತೆ ಸ್ಥಗಿತಗೊಂಡಿತ್ತು.
ಈ ಗದ್ದಲಗೊತ್ತಾಗದೆ ಯತಾಸ್ಥಿತಿಯಲ್ಲಿ ಕುರಿಗಾರರು ಮತ್ತು ಖರೀದಿದಾರರು ಮಾರುಕಟ್ಟೆಗೆ ಬಂದಾಗ ನಿಷೇಧಾಜ್ಞೆ ಹೆಸರಿನಲ್ಲಿ ಪೋಲಿಸರು ಲಾಠಿ ಬಿಸುವುದರ ಮೂಲಕ ಪರ‍್ಯಾಯ ವ್ಯವಸ್ಥೆ ಕಲ್ಪಿಸದೆ ಚದುರಿಸಿದ್ದರು. ಕಳೆದ ಮೂರು ದಿನಗಳಿಂದ ಜಿಲ್ಲಾಧಿಕಾರಿ, ಪೋಲಿಸರು ಪ್ರಯತ್ನ ನಡೆಸಿ ಶಾಂತಿ ಸಭೆ ಮಾಡಲು ಮುಂದಾಗಿ ಎರಡು ಗ್ರಾಮಗಳ ಜನರ ವಿಶ್ವಾಸ ತೆಗೆದುಕೊಳ್ಳುವಲ್ಲಿ ವಿಫಲರಾಗಿದ್ದರು. ಇಂದು ಪುನಃ ಕುರಿ ಮಾರುಕಟ್ಟೆಗೆ ದೂರದ ಚೆನ್ನೈ, ಹೈದರಬಾದ್ ನಂತಹ ನಗರಗಳಿಂದ ಬಂದ ಕುರಿ ಖರೀದಿದಾರರು ಮತ್ತು ಕುರಿಗಾರರು ಹೆದ್ದಾರಿ ೧೩ ಪಕ್ಕದ ಕೆರೆಹಳ್ಳಿಯ ಅಗಳಕೇರಿ ಕ್ರಾಸ್‌ನಲ್ಲಿ ಸಂತೆ ನಡೆಸುವುದಕ್ಕೆ ಬಹಳ ಪ್ರಾಯಾಸಪಟ್ಟು ವ್ಯವಸ್ಥೆ ಕಲ್ಪಿಸಲಾಯಿತು.
ಈ ಕುರಿತು ಶಾಶ್ವತ ಪರಿಹಾರಕ್ಕಾಗಿ ಬೂದಗುಂಪ ಗ್ರಾಮ ಪಕ್ಕದ ದನಕನದೊಡ್ಡಿ ಕ್ರಾಸ್ ಬಳಿ ಪಾಳುಬಿದ್ದ ಖಾಸಗಿ ರೈತರ ಭೂಮಿಯಲ್ಲಿ ತಾತ್ಕಾಲಿಕವಾಗಿ ಸಂತೆ ನಡೆಸಿ ಈ ಸುತ್ತಲಿನ ಸರ್ಕಾರಿ ಜಾಗೆಯಲ್ಲಿ ಶಾಶ್ವತ ಸಂತೆ ವ್ಯವಸ್ಥೆ ಕಲ್ಪಿಸಬೇಕೆಂದು, ಎಪಿಎಂಸಿ ಮೇಲೆ ಕ್ರಮ ಜರುಗಿಸಿ ಸೂಕ್ತ ರಕ್ಷಣೆ ಓದಗಿಸಬೇಕೆಂದು ಜಿಲ್ಲಾಧ್ಯಕ್ಷರಾದ ಹನುಮಂತಪ್ಪ ಹೊಳೆಯಾಚೆ, ತಾಲೂಕಾಧ್ಯಕ್ಷರಾದ ಶಿವಣ್ಣ ಬಿ. ಇಂದರಗಿ, ತಾಲೂಕ ಕಾರ್ಯದರ್ಶಿ ಗವಿಸಿದ್ದಪ್ಪ ಡೊಳ್ಳಿನ, ಸಿಪಿಐಎಂಎಲ್ ಜಿಲ್ಲಾ ಕಾರ್ಯದರ್ಶಿ ಕೆ.ಬಿ.ಗೋನಾಳ, ಕುರಿ ಸಾಕಾಣಿಕೆದಾರರ ಸಂಘದ ಜಿಲ್ಲಾ ಉಪಾಧ್ಯಕ್ಷ ಸಿದ್ದಪ್ಪ ಕಂಟೇರ, ಪರಶುರಾಮ ಇಂದರಗಿ, ಕಾಂತಪ್ಪ ಎ. ಕುದರಿಮೋತಿ ಹಾಗೂ ಬಸವರಾಜ ಪೂಜಾರ ಇದ್ದ ನಿಯೋಗವು ಸಹಾಯಕ ಜಿಲ್ಲಾಧಿಕಾರಿ ಸುರೇಶ ಈಟ್ನಾಳ ಈವರಿಗೆ ಮನವಿ ಸಲ್ಲಿಸಿ ಒತ್ತಾಯಿಸಲಾಯಿತು.
0 comments:
Post a Comment