ನಂತರ ಅವರು ಏರ್ಪಡಿಸಿದ ಸರಳ ಸಾಂಕೇತಿಕ ಸಮಾರಂಭದಲ್ಲಿ ಮಾತನಾಡಿ, ಕೊಪ್ಪಳ ನಗರ ದಿನೇದಿಂದ ದಿನಕ್ಕೆ ವೇಗವಾಗಿ ಬೆಳೆಯುತ್ತಿದ್ದು, ಜಿಲ್ಲಾ ಕೇಂದ್ರವಾದ ಕೊಪ್ಪಳ ನಗರದಲ್ಲಿ ಇಂತಹ ಶಾಖೆ ಆರಂಭಗೊಂಡಿರುವುದು ಸಂತೋಷದ ಸಂಗತಿ. ನೂತನವಾಗಿ ನಿವೇಶನ ಖರೀದಿಸುವವರು ಹಾಗೂ ತಮ್ಮ ನಿವೇಶನದಲ್ಲಿ ಮನೆ ಕಟ್ಟಿಸಿಕೊಳ್ಳುವವರು ಈ ಶಾಖೆಯಲ್ಲಿರುವ ಇಂಜಿನೀಯರ‍್ಸ್‌ಗಳಿಗೆ ಸಂಪರ್ಕಿಸಿ ತಮ್ಮ ಕನಸಿನ ಮನೆಗಳನ್ನು ನಿರ್ಮಿಸಿಕೊಳ್ಳಲು ಶಾಸಕ ಕೆ.ರಾಘವೇಂದ್ರ ಹಿಟ್ನಾಳ ಜನತೆಗೆ ಕರೆ ನೀಡಿದರು.
ಈ ಸಂದರ್ಭದಲ್ಲಿ ನಗರಸಭೆ ಉಪಾಧ್ಯಕ್ಷ ಅಮ್ಜದ್ ಪಟೇಲ್, ನಿವೃತ್ತ ಡಿಹೆಚ್‌ಓ ಡಾ.ಟಿ.ಹೆಚ್.ಮುಲ್ಲಾ, ನಗರಸಭೆ ಸದಸ್ಯರಾದ ಖಾಜಾವಲಿ ಬನ್ನಿಕೊಪ್ಪ, ಮಲ್ಲಪ್ಪ ಕವಲೂರ, ಅಂಜುಮನ್ ಕಮೀಟಿ ಅಧ್ಯಕ್ಷ ಎಂ.ಪಾಷಾ ಕಾಟನ್, ಕಾಂಗ್ರೆಸ್ ತಾಲೂಕ ಅಧ್ಯಕ್ಷ ಎಸ್.ಬಿ.ನಾಗರಳ್ಳಿ, ವಾಣಿಜ್ಯೋದ್ಯಮಿ ಬಸವರಾಜ ಗೌರಾ, ಯೂಸೂಫಿಯಾ ಮಸೀದಿ ಆಡಳಿತಾಧಿಕಾರಿ ಹಾಜಿ ಗೌಸ್‌ಸಾಬ ಸರದಾರ, ಹಿರಿಯರಾದ ಸಯ್ಯದ್ ತಾಜುದ್ದೀನ್ ಸಾಬ, ರಫೀಕಸಾಬ ಕಾತರಕಿ ಸೇರಿದಂತೆ ಬೇಸ್ಟ್ ಹೋಮ್ಸ್ ಇಂಜಿನೀಯರಿಂಗ್ ಶಾಖೆಯ ವ್ಯವಸ್ಥಾಪಕ ನಿರ್ದೇಶಕ ಸಯ್ಯದ್ ಕೆ.ಖಾದ್ರಿ (ಜಮೀರ್), ಕಾರ್ಯನಿರ್ವಾಹಕ ವ್ಯವಸ್ಥಾಪಕ ಅಬ್ದುಲ್ ಮುನಾಫ್, ವ್ಯವಸ್ಥಾಪಕ ಅತೀಕ ಉರ್ ರಹೇಮಾನ್, ಕಾನೂನು ಸಲಹೆಗಾರ ಆಸೀಫ್ ಸರದಾರ, ಕ್ಷೇತ್ರಾಭಿವೃದ್ದಿ ಅಧಿಕಾರಿ ಆದಿಲ್ ಪಟೇಲ್ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.
0 comments:
Post a Comment