PLEASE LOGIN TO KANNADANET.COM FOR REGULAR NEWS-UPDATES

  ಮತ ಎಣಿಕೆ ಕಾರ್ಯಕ್ಕೆ ಅಧಿಕಾರಿಗಳ ನೇಮಕ
ಕೊಪ್ಪಳ,ಮೇ.೦೯ : ಕೊಪ್ಪಳ ಲೋಕಸಭಾ ಕ್ಷೇತ್ರದ ಮತ ಎಣಿಕೆ ಕಾರ್ಯವನ್ನು ಮೇ.೧೬ ರಂದು ಶ್ರೀ ಗವಿಸಿದ್ದೇಶ್ವರ ಕಲಾ, ವಾಣಿಜ್ಯ ಮತ್ತು ವಿಜ್ಞಾನ ಮಹಾವಿದ್ಯಾಲಯದಲ್ಲಿ ನಡೆಸಲಾಗುತ್ತಿದ್ದು, ಮತ ಎಣಿಕೆ ಕಾರ್ಯದ ಗಣಕೀಕರಣ ಹಾಗೂ ಇತರೆ ಕೆಲಸಗಳಿಗಾಗಿ ಅಧಿಕಾರಿ ಹಾಗೂ ಸಿಬ್ಬಂದಿಗಳನ್ನು ನೇಮಿಸಲಾಗಿದೆ ಎಂದು ಅಪರ ಜಿಲ್ಲಾಧಿಕಾರಿಗಳು ಹಾಗೂ ಸಹಾಯಕ ಜಿಲ್ಲಾ ಚುನಾವಣಾಧಿಕಾರಿಗಳಾದ ಡಾ.ಸುರೇಶ ಬಿ.ಇಟ್ನಾಳ ಅವರು ತಿಳಿಸಿದ್ದಾರೆ.

ನೇಮಕಗೊಂಡ ಅಧಿಕಾರಿ ಹಾಗೂ ಸಿಬ್ಬಂದಿಗಳಿಗೆ ಮೇ.೧೨ ರಂದು ಮಧ್ಯಾಹ್ನ ೩.೦೦ ಗಂಟೆಗೆ ಎನ್.ಐ.ಸಿ. ಕೇಂದ್ರ ಜಿಲ್ಲಾಡಳಿತ ಭವನ ಕೊಪ್ಪಳದಲ್ಲಿ ತರಬೇತಿಯನ್ನು ಏರ್ಪಡಿಸಲಾಗಿದ್ದು, ಈ ತರಬೇತಿಗೆ ತಪ್ಪದೇ ಹಾಜರಾಗಬೇಕೆಂದು ಅವರು ತಿಳಿಸಿದ್ದಾರೆ. ತರಬೇತಿಗೆ ಬರುವಾಗ ಕಡ್ಡಾಯವಾಗಿ ಇತ್ತೀಚಿನ ಪಾಸಪೋರ್ಟ ಅಳತೆಯ ಭಾವಚಿತ್ರವನ್ನು ತರುವುದು, ಮೇ.೧೪ ರಿಂದ ೧೬ ರವರೆಗೆ ಮತ ಎಣಿಕೆ ಕೇಂದ್ರದಲ್ಲಿ ಹಾಜರಿದ್ದು, ಡಿಐಓಎನ್‌ಐಸಿ ಅವರ ಮೇಲ್ವಿಚಾರಣೆಯಲ್ಲಿ ಕಾರ್ಯನಿರ್ವಹಿಸಲು ತಿಳಿಸಿದ್ದಾರೆ.
ಚುನಾವಣೆಗೆ ನೇಮಕಗೊಂಡ ಅಧಿಕಾರಿಗಳ ವಿವರ : ಡಿಯುಡಿಸಿಯ ಸೀನಿಯರ್ ಪ್ರೋಗ್ರಾಮರ್ ರಾಘವೇಂದ್ರ, ಡಿಸಿ ಕಛೇರಿಯ ನಾಡ ಕಛೇರಿಯ ಕನ್ಸಲ್‌ಟಂಟ್ ರಾಕೇಶ, ಡಿಸಿ ಕಛೇರಿಯ ಭೂಮಿ ಕನ್ಸಲ್‌ಟಂಟ್ ಅಮರನಾಥ, ಡಿಸಿ ಕಛೇರಿಯ ಸಕಾಲ ಕನ್ಸಲ್‌ಟಂಟ್ ಶಶಿಧರ, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಕನ್ಸಲ್‌ಟಂಟ್ ಪ್ರಸಾದ, ಕೊಪ್ಪಳ ನಗರಸಭೆ ಸಿನಿಯರ ಪ್ರೋಗ್ರಾಮರ್ ಫನಿಬಂಧ, ಗಂಗಾವತಿ ನಗರಸಭೆಯ ಸಿನಿಯರ ಪ್ರೋಗ್ರಾಮರ್ ಗಜಾನನ, ಕುಷ್ಟಗಿ ಪುರಸಭೆಯ ಪ್ರೋಗ್ರಾಮರ್ ಬಸವಲಿಂಗಪ್ಪ, ಜಿ.ಪಂ.ಕಛೇರಿಯ ಡಿಎಸ್‌ಓ ಸಿನಿಯರ ಪ್ರೋಗ್ರಾಮರ್ ಮಂಜುನಾಥ, ಕುಷ್ಟಗಿ ಉಪಖಜಾನೆಯ ಅಕೌಂಟ್ಸ ಸುಪರಿಟೆಂಡೆಂಟ್ ಅಶ್ವಥನಾರಾಯಣ, ಜಿಲ್ಲಾ ಶಿಕ್ಷಕರ ತರಬೇತಿ ಸಂಸ್ಥೆ ಮುನಿರಾಬಾದ್-ಕೊಪ್ಪಳದ ಅಧೀಕ್ಷಕ ಸೋಮಶೇಖರ, ಭಾಗ್ಯನಗರ ಸರಕಾರಿ ಪದವಿ ಪೂರ್ವ ಕಾಲೇಜಿನ ದ್ವಿದಸ ಸಿದ್ದಲಿಂಗಯ್ಯಾ ಅಂಬಾಸ್, ಕುಷ್ಟಗಿ ತಾಲೂಕಿನ ಕೆ.ಗೋನಾಳ ಸ.ಹಿ.ಪ್ರಾ.ಶಾಲೆಯ ಶಿಕ್ಷಕ ಸಂಗಮೇಶ, ಕೊಪ್ಪಳ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯದ ಪ್ರದಸ ಗುರುರಾಜ ಕಟ್ಟಿ, ಭಾಗ್ಯನಗರ ಸರಕಾರಿ ಪದವಿ ಪೂರ್ವ ಕಾಲೇಜಿನ ಪ್ರದಸ ಅಯ್ಯಣ್ಣ, ಜಿಲ್ಲಾ ವಕ್ಫ್ ಕಛೇರಿಯ ಬೆರಳಚ್ಚುಗಾರ ಪಾಷಾ, ಜಿಲ್ಲಾ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಬೆರಳಚ್ಚುಗಾರ ಅಬ್ಬಾಸ ಅಲಿ, ಕೊಪ್ಪಳ ಸಹಾಯಕ ಆಯುಕ್ತರ ಕಛೇರಿಯ ಪ್ರದಸ ಜಿ.ಸತೀಶ, ಬಿಸಿಎಂ ಕಛೇರಿಯ ಬೆರಳಚ್ಚುಗಾರ ಮನೋಜ, ಜಿಲ್ಲಾ ಸಂಖ್ಯಾ ಸಂಗ್ರಹಣಾಧಿಕಾರಿಗಳ ಕಾರ್ಯಾಲಯದ ಅಧೀಕ್ಷಕರಾದ ಎನ್.ಮಂಜುನಾಥ, ಭಾಗ್ಯನಗರ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕ ಗುರುರಾಜ ಕುಲಕರ್ಣಿ, ಡಿಡಿಪಿಐ ಕಛೇರಿಯ ದ್ವಿದಸ ನಾಗರಾಜ ಕೊಪ್ಪಳ, ಇರಕಲ್‌ಗಡ ಸ.ಪ.ಪೂ.ಕಾಲೇಜಿನ ಪ್ರದಸ ಸುಬ್ರಮಣ್ಯ, ಡಿಡಿಪಿಐ ಕಛೇರಿಯ ಪ್ರದಸ ಶಿವಪ್ರಸಾದಸ್ವಾಮಿ, ಜಿಲ್ಲಾ ಪಂಚಾಯತಿಯ ಪ್ರದಸ ಶ್ರೀನಿವಾಸ ಕುಲಕರ್ಣಿ, ಜಿಲ್ಲಾ ಪಂಚಾಯತಿಯ ವ್ಯವಸ್ಥಾಪಕರಾದ ಎನ್.ಪದ್ಮನಾಭ ದೇಸಾಯಿ, ಜಿಲ್ಲಾ ಭೂದಾಖಲೆಗಳ ಕಛೇರಿಯ ಬೆರಳಚ್ಚುಗಾರ ಸಂತೋಷ, ಸಹಾಯಕ ಆಯುಕ್ತರ ಕಾರ್ಯಾಲಯದ ಗ್ರಾ.ಲೆ. ವಿಜಯಕುಮಾರ ಕರೇಹಳ್ಳಿ, ಇರಕಲ್‌ಗಡ ಸ.ಹಿ.ಪ್ರಾ.ಶಾಲೆಯ ಶಿಕ್ಷಕ ಸಂತೋಷ, ಜಂಟಿ ಕೃಷಿ ನಿರ್ದೇಶಕರ ಕಾರ್ಯಾಲಯದ ಪ್ರದಸ ಶ್ರೀನಿವಾಸ ದೇಸಾಯಿ, ಮುನಿರಾಬಾದ ಡಯಟ್ ಪ್ರದಸ ಪ್ರವೀನ ಇವರನ್ನು ನೇಮಿಸಲಾಗಿದೆ ಎಂದು ಅಪರ ಜಿಲ್ಲಾಧಿಕಾರಿಗಳು ಹಾಗೂ ಸಹಾಯಕ ಜಿಲ್ಲಾ ಚುನಾವಣಾಧಿಕಾರಿಗಳಾದ ಡಾ.ಸುರೇಶ ಬಿ.ಇಟ್ನಾಳ ಅವರು ತಿಳಿಸಿದ್ದಾರೆ. 

Advertisement

0 comments:

Post a Comment

 
Top