ಕೇಂದ್ರಿಯ ಮೀಸಲು ಪೋಲೀಸ್ ದಳದಲ್ಲಿ ಸೇವೆ ಸಲ್ಲಿಸುತ್ತಿರುವ ಕೊಪ್ಪಳದ ತೆಗ್ಗಿನಕೇರಿಯ ಪೀರಸಾಬ್ ಹ್ಯಾಟಿಯವರ ಜೇಷ್ಠ ಸುಪುತ್ರ ಮೌಲಾಹುಸೇನ ತನ್ನ ಕರ್ತವ್ಯ, ನಿಷ್ಠೆ ಮತ್ತು ಪರಾಕ್ರಮಕ್ಕಾಗಿ ವಿಶಿಷ್ಟ ಗೌರವ ಹಾಗೂ ಪ್ರಶಸ್ತಿ ಪಡೆದು ಕೊಪ್ಪಳ ನಾಡಿಗೆ ಕೀರ್ತಿ ತಂದಿದ್ದಾನೆ.
ಶ್ರೀ ಗವಿಸಿದ್ದೇಶ್ವರ ಪ್ರೌಢಶಾಲೆಯಲ್ಲಿ ಶಿಕ್ಷಣ ಪೂರೈಸಿ ೨೦೦೩ರಲ್ಲಿ ಬೆಂಗಳೂರದಲ್ಲಿ ಕೇಂದ್ರಿಯ ಮೀಸಲು ಪೋಲೀಸ್ ದಳದಲ್ಲಿ ಸಿಪಾಯಿಯಾಗಿ ನೇಮಕಗೊಂಡನು. ಹರಿಯಾಣದಲ್ಲಿ
ವಿಶೇಷ ತರಬೇತಿ ಪಡೆದು, ಕಾಶ್ಮೀರದ ಬಾರಾಮುಲ್ಲಾದಲ್ಲಿ, ಶ್ರೀನಗರದಲ್ಲಿ, ಬಿಹಾರದ ಮೋತಿಹರಿದಲ್ಲಿ ಸೇವೆ ಸಲ್ಲಿಸಿ ಈಗ ಜಾರ್ಖಂಡ ರಾಜ್ಯದ ಲೋಹರ ನಗರದಲ್ಲಿ ಕರ್ತವ್ಯದಲ್ಲಿರುವನು. ತನ್ನ ಪ್ರಮಾಣೀಕತೆ, ವಿಧೇಯತೆ ಮತ್ತು ಕಠಿಣ ಶ್ರಮದ ಮೂಲಕ ಸಹದ್ಯೋಗಿಗಳ ಮತ್ತು ಹಿರಿಯ ಅಧಿಕಾರಿಗಳ ಮೆಚ್ಚುಗೆ ಪಡೆದಿರುವನು. ಶ್ರೀನಗರದಲ್ಲಿ ಶಾಂತಿ ರಕ್ಷಣೆಗಾಗಿ ಉಗ್ರರ ವಿರುದ್ಧ ಹೋರಾಟದಲ್ಲಿದ್ದಾಗ, ಗುಂಡು ಬಡಿದ ಸಹದ್ಯೋಗಿಯೊಬ್ಬನು ಗಾಯಗೊಂಡಾಗ ಮೌಲಾಹುಸೇನನು ಆತನನ್ನು ಎತ್ತಿಕೊಂಡು ಹೋಗಿ ಪ್ರಾಣ ಉಳಿಸಿದ್ದರಿಂದ ಸಂತೋಷಿತರಾದ ಉನ್ನತ ಅಧಿಕಾರಿಗಳು ಇತನಿಗೆ, ಪೋಲೀಸ್ ಕಠಿಣ ಸೇವಾ ಪದಕ ನೀಡಿ ಗೌರವಿಸಿದರು. ಬಿಹಾರದ ಪೂರ್ವ ಚಂಪಾರಣ್ಯ ಪ್ರದೇಶದಲ್ಲಿ ಅಟ್ಟಹಾಸಗೈಯುತ್ತಿದ್ದ ನಕ್ಸಲ್-ಮಾವೋ ವಾದಿಗಳ ಉಪಟಳ ನಿವಾರಿಸುವುದರಲ್ಲಿ ಅನುಪಮ ಸೇವೆ ಸಲ್ಲಿಸಿರುವನು. ೧೭ನೇ ನವ್ಹಂಬರ್ ೨೦೦೮ರಂದು ಈ ಭಾಗದ ಮೋತಿಹರಿ ಜಿಲ್ಲೆಯ ಮಠೀಯಾ ಗ್ರಾಮದಲ್ಲಿ ನೂರಾರು ಸಂಖ್ಯೆಯಲ್ಲಿ ನಕ್ಸಲ್-ಮಾವೋ ವಾದಿಗಳ ವಿಶೇಷ ಗುಪ್ತ ಕಾರ್ಯಾಚರಣೆಯನ್ನು ನಿಗ್ರಹಿಸುವದಕ್ಕಾಗಿ ಕೇಂದ್ರಿಯ ಮೀಸಲು ಪೋಲೀಸ್ ದಳ ದಾವಿಸಿತು. ಇದರಲ್ಲಿದ್ದ ಮೌಲಾಹುಸೇನ ಪ್ರಾಣದ ಹಂಗುತೊರೆದು, ಮುನ್ನುಗ್ಗಿ ೪ ನಕ್ಸಲ್‌ರನ್ನು ಕೊಂದು ಹಾಕಿದನು. ೮ ಜನರು ಸೆರೆ ಸಿಕ್ಕರು, ಉಳಿದವರು ಪಲಾಯನಗೈದರು. ನಕ್ಸಲ್‌ರು ವಿಫಲರಾದರು ಅನೇಕ ಉನ್ನತ ಅಧಿಕಾರಿಗಳು ವಿಶೇಷವಾಗಿ ಕೇಂದ್ರ ಸರ್ಕಾರದ ಗೃಹ ಖಾತೆಯ ಮಾನ್ಯ ಪ್ರಧಾನ ಕಾರ್ಯದರ್ಶಿಗಳು ಹಾಗೂ ಕೇಂದ್ರ ಮೀಸಲು ಪೋಲೀಸ್ ದಳದ ಮಹಾನಿರ್ದೇಶಕರು ಮೌಲಾಹುಸೇನನ ಪರಾಕ್ರಮವನ್ನು ಪ್ರಶಂಸಿಸಿರುವುದು ಹೆಮ್ಮೆಯ ಸಂಗತಿ.
ಕೇಂದ್ರ ಸರ್ಕಾರವು ಆಲ್-ಪ್ಯಾರಾ ಮೆಡಿಕಲ್‌ದಲ್ಲಿ ಕೊಡುವ ಉನ್ನತ ಪ್ರಶಸ್ತಿಯಾದ ಪೋಲೀಸ್ ಮೆಡಲ್ ಫಾರ್ ಗ್ಯಾಲಂಟ್ರಿ ಪ್ರಶಸ್ತಿಯನ್ನು ೩೦ ನವ್ಹಂಬರ್ ೨೦೧೧ರಂದು ಪ್ರಕಟಿಸಿತು. ಅಂದಿನ ರಾಷ್ಟ್ರಪತಿಯವರಾಗಿದ್ದ ಶ್ರೀಮತಿ ಪ್ರತಿಭಾ ಪಾಟೀಲ್‌ರು ಈ ಪ್ರಶಸ್ತಿಯನ್ನು ಮೌಲಾಹುಸೇನನಿಗೆ ದಯಪಾಲಿಸಿದರು. ಮೌಲಾಹುಸೇನ ಹ್ಯಾಟಿಯವರ ವ್ಯಕ್ತಿತ್ವ ಯುವ ಜನಾಂಗಕ್ಕೆ ಮಾದರಿಯಾಗಿರುವುದರಿಂದ ೧೩ ಮೇ ೨೦೧೪ರಂದು ಕೊಪ್ಪಳದ ಶ್ರೀ ಬಸವೇಶ್ವರ ಕಲ್ಯಾಣ ಮಂಟಪದಲ್ಲಿ ಆರ್ಟ ಆಫ್ ಲೀವಿಂಗ್ ಶಾಖೆಯ ವತಿಯಿಂದ ಜರುಗುವ ಶ್ರೀ ರವಿಶಂಕರ ಗುರೂಜೀಯವರ ಜನ್ಮದಿನಾಚರಣೆಯ ಸಮಾರಂಭದಲ್ಲಿ ಸನ್ಮಾನಿಸುತ್ತಿರುವುದು ಅಭಿಮಾನ ಪೂರ್ವ ಸಂಗತಿಯಾಗಿದೆ.
0 comments:
Post a Comment