PLEASE LOGIN TO KANNADANET.COM FOR REGULAR NEWS-UPDATES

     ಇಂದು ಬೆಳಿಗ್ಗೆ  ೨೦/೦೫/೨೦೧೪/ ನಗರದ ಕಾವ್ಯನಂದ ಪಾರ್ಕನಲ್ಲಿ ಟಿ.ಯು.ಸಿ.ಐ. ರಾಷ್ಟ್ರಧ್ಯಕ್ಷರು ಹಾಗೂ ಗುಜರಾತಿನ ಖ್ಯಾತ ವಕೀಲರಾದ ಕಾಂ|| ಮುಖಲ್ ಸೇನಾ ಇವರ ಸ್ಮರಣ ಸಭೆ ನಡೆಯಿತು.
          ೬೨ ವಯಸ್ಸಿನ ದಿವಂಗತ ಮುಖಲ್ ಸೇನಾ ಕಳೆದ ಒಂದು ವರ್ಷದಿಂದ ಕ್ಯಾನ್ಸರ್ ಕಾಯಿಲೆಗೆ  ಚಿಕಿತ್ಸೆ ಪಡೆಯುತಿದ್ದರು. ೧೩/೦೫/೨೦೧೪/ ಮಂಗಳವಾರ ರಂದು ಬೆಳಿಗ್ಗೆ ೬ ಗಂಟೆಗೆ ಗುಜರಾತ್ ರಾಜ್ಯದ ಆಮದಬಾದ್ ನಗರದಲ್ಲಿ ಮೃತರಾಗಿದ್ದಾರೆ. ಗೋದ್ರ ಘಟನೆ ಪ್ರಕರಣದ ಎಲ್ಲಾ ಕೇಸಗಳನ್ನು ದಿವಂಗತರು ನಡೆಸುತ್ತಿದ್ದರು. ಸಾಚಾರ ಸಮಿತಿ ವರದಿ ಜಾರಿಗಾಗಿ ಅನೇಕ ರಾಜ್ಯಗಳಲ್ಲಿ ಹೋರಾಟವನ್ನು ನಡೆಸಿದ್ದರು. ಕಳೆದ ೪೦ ವರ್ಷಗಳಿಂದ ಕಾರ್ಮಿಕ ಚಳುವಳಿ ನಾಯಕತ್ವ ವಹಿಸಿದ್ದರು. ಸ್ಮರಣ ಸಭೆಯಲ್ಲಿ ಮಾತನಾಡಿದ ಟಿಯುಸಿಐ ರಾಜ್ಯಾಧ್ಯಕ್ಷರಾದ ಡಿ.ಎಚ್.ಪೂಜಾರ ಮಾತನಾಡಿ ವೈಯಕ್ತಿಕ ಬದುಕನ್ನು ಕಡೆಗಣಿಸಿ ಕಾರ್ಮಿಕರು ಹಕ್ಕುಗಳಿಗಾಗಿ ನಿರಂತರ ಹೋರಾಟ ನಡೆಸಿ ಜೀವ ಸವಿಸಿಕೊಂಡ ಕಾಂ||ಮುಖಲ್ ಸೇನಾ ಆದರ್ಶಗಳನ್ನು ಮುನ್ನಡೆಸಬೇಕಾಗಿದೆ. ವಿಶ್ರಾಂತಿ ಇಲ್ಲದೆ ದಿನದ ೧೮ ಘಂಟೆವರೆಗೆ ಕೆಲಸ  ಮಾಡುತ್ತಿದ್ದ ದಿವಂಗತ ಸೇನಾರವರು ಆರೋಗ್ಯದ ಕಡೆಗೆ ಗಮನ ಕೊಡದೆ. ಕಾರ್ಮಿಕ ಚಳವಳಿಗಾಗಿ ತಮ್ಮ ಜೀವನವನ್ನು ತ್ಯಾಗ ಮಾಡಿದರು. ಆಳುವ ವರ್ಗದ ದಲ್ಲಾಳಿ ರಾಜಕಾರಣಿಗಳೂ ಕೂಡ ಅಧಿಕಾರ ಹಾಗೂ ವಿದೇಶಿ ಕಂಪನಿಗಳ ಸೇವೆಗಾಗಿ ಜೀವ ಸವಿಸಿಕೊಳ್ಳುತ್ತಾರೆ. ಅದು ಇತಿಹಾಸಕ್ಕೆ ದ್ರೋಹ ಮಾಡಿದಂತೆ. ದೇಶದ ನೆಲ ಜಲ ಮಾನವ ಸಂಪನ್ಮೂಲದ ರಕ್ಷಣೆಗಾಗಿ ಹೋರಾಡಿ ಪ್ರಾಣ ಕಳೆದುಕೊಂಡರೆ ಅವರು ಹಿಮಾಲಯ ಪರ್ವತದಷ್ಟು ದೊಡ್ಡದು. ವೈಯಕ್ತಿಕ ಸ್ವಾರ್ಥ, ಅಧಿಕಾರಕ್ಕಾಗಿ ಜೀವ ಸವಿಸಿಕೊಂಡವರ ಸಾವು ಹಕ್ಕಿ ಪಕ್ಷಿಗಳ ಪುಕ್ಕದಷ್ಟು ಹಗುರವಾಗಿರುತ್ತದೆ ಎಂದು ಹೇಳಿದರು. ಸಿಪಿಐ(ಎಂಎಲ್) ಜಿಲ್ಲಾ ಕಾರ್ಯದರ್ಶಿ ಕೆ.ಬಿ.ಗೋನಾಳ, ಮಂಜುನಾಥ ಚಕ್ರಸಾಲಿ ವಕೀಲರು, ಮಾತನಾಡಿದರು. ಕಾರ್ಮಿಕರಾದ ಲಿಂಗಯ್ಯ ಶಶಿಮಠ, ಶಂಕರ ನಾಯಕ್, ಪಂಪಯ್ಯ ಹೀರೆಮಠ, ಇತರರು ಭಾಗವಹಿಸಿದ್ದರು. 

Advertisement

0 comments:

Post a Comment

 
Top