PLEASE LOGIN TO KANNADANET.COM FOR REGULAR NEWS-UPDATES

 ಸಾರ್ವಜನಿಕ ಶಿಕ್ಷಣ ಇಲಾಖೆಯಿಂದ ಕೊಪ್ಪಳ ಜಿಲ್ಲೆಯಲ್ಲಿ ಪ್ರಾಥಮಿಕ ಶಾಲೆಗಳಲ್ಲಿನ ಹೆಚ್ಚುವರಿ ಶಿಕ್ಷಕರ ಮತ್ತು ಖಾಲಿ ಹುದ್ದೆಗಳ ಸ್ಥಳಾಂತರ ಪ್ರಕ್ರಿಯೆಯನ್ನು ಪೂರ್ಣಗೊಳಿಸಲು ವೇಳಾಪಟ್ಟಿ ನಿಗದಿಪಡಿಸಿದ್ದು, ನಿಗದಿತ ವೇಳಾಪಟ್ಟಿಯಂತೆ ಪ್ರಕ್ರಿಯೆಯನ್ನು ಪೂರ್ಣಗೊಳಿಸುವಂತೆ ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಜಿ.ಹೆಚ್.ವೀರಣ್ಣ ಅವರು ಆಯಾ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. 
ವೇಳಾಪಟ್ಟಿ ಇಂತಿದೆ : ಮೇ.೦೫ ಹಾಗೂ ೦೬ ರಂದು ೨೦೧೩-೧೪ರ ದಾಖಲಾತಿಯಂತೆ ಹೆಚ್ಚುವರಿ ಹಾಗೂ ಅಗತ್ಯವಿರುವ ಶಿಕ್ಷಕರ ಹುದ್ದೆ, ಶಾಲೆ ಗುರುತಿಸುವುದು.  ಮೇ.೦೭ ರಂದು ಹೆಚ್ಚುವರಿ, ಖಾಲಿಹುದ್ದೆ, ಶಿಕ್ಷಕರ ಪಟ್ಟಿ, ಅವಶ್ಯವಿರುವ ಹುದ್ದೆಗಳ ಪಟ್ಟಿಯನ್ನು ಉಪನಿರ್ದೇಶಕರ ಕಛೇರಿಯಲ್ಲಿ ಅನುಮೋದಿಸುವುದು. ಮೇ.೦೮ ರಂದು ಹೆಚ್ಚುವರಿ ಇರುವ ಖಾಲಿ ಹುದ್ದೆಗಳ ಪ್ರಕಟಣೆ, ಹೆಚ್ಚುವರಿ ಶಿಕ್ಷಕರ ಅವಶ್ಯಕತೆ ಇರುವ ಶಾಲೆಗಳ ಪಟ್ಟಿ ಪ್ರಕಟಿಸುವುದು.  ಮೇ.೦೯ ರಂದು ಹೆಚ್ಚುವರಿ ಶಿಕ್ಷಕರ ತಾತ್ಕಾಲಿಕ ಪಟ್ಟಿ ಪ್ರಕಟಪಡಿಸುವುದು.  ಮೇ.೧೨ ರಂದು ಸಂಬಂಧಿಸಿದ ಶಿಕ್ಷಕರು ಆಕ್ಷೇಪಣೆಗಳನ್ನು ಸಲ್ಲಿಸುವುದು.  ಮೇ.೧೩ ಹಾಗೂ ೧೪ ರಂದು ಆಕ್ಷೇಪಣೆಗಳ ಪರಿಶೀಲನೆ ಹಾಗೂ ಹೆಚ್ಚುವರಿ ಶಿಕ್ಷಕರ ಅಂತಿಮ ಪಟ್ಟಿ ಪ್ರಕಟಣೆ ಮತ್ತು ಖಾಲಿ ಹುದ್ದೆಗಳ ಸ್ಥಳಾಂತರ. ಮೇ.೧೫ ರಂದು ಹೆಚ್ಚುವರಿ ಶಿಕ್ಷಕರಿಗೆ ಕೌನ್ಸಲಿಂಗ್ ನಡೆಸಿ ಆದೇಶ ನೀಡುವುದು, ಕೌನ್ಸಲಿಂಗ್ ಗೈರು ಹಾಜರಾದ ಶಿಕ್ಷಕರಿಗೆ ಡಮ್ಮಿ ಕೌನ್ಸಲಿಂಗ್ ಮಾಡಿ ಆದೇಶ ಹೊರಡಿಸುವುದು.  ಮೇ.೧೯ ರಂದು ಅಂತಿಮವಾಗಿ ಉಪನಿರ್ದೇಶಕರ ಕಛೇರಿಗೆ ಸಮಗ್ರ ವರದಿ ಸಲ್ಲಿಸುವಂತೆ ಡಿಡಿಪಿಐ ಜಿ.ಹೆಚ್. ವೀರಣ್ಣ  ಆದೇಶದಲ್ಲಿ ತಿಳಿಸಿದ್ದಾರೆ.

Advertisement

0 comments:

Post a Comment

 
Top