ಇಂದು ಬೆಳಿಗ್ಗೆಯಿಂದಲೇ ಅತ್ಯಂತ ಸಂಭ್ರಮದಿಂದ ನಗರದ ಜವಾಹರ ರಸ್ತೆಯಲ್ಲಿನ ಕುರಬರ ಓಣಿಯ ಶ್ರೀದುರ್ಗಾದೇವಿ (ಕಟ್ಟೆದುರ್ಗಮ್ಮ)ದೇವಸ್ಥಾನದಲ್ಲಿ ದುರ್ಗಾದೇವಿಗೆ ಉಡಿ ತುಂಬುವ ಕಾರ್ಯಕ್ರಮ ನೇರವೇರಿತು.
ಬೆಳಿಗ್ಗೆ ೬ ಗಂಟೆಯಿಂದಲೇ ದೇವಿಗೆ ಅಭಿಷೇಕ ಹಾಗೂ ವಿಶೇಷ ಪೂಜೆ ನಡೆಸಲಾಯಿತು. ನಂತರ ಭಕ್ತ ಸುಮಂಗಲೆಯರೆಲ್ಲಾ ದೇವಿಗೆ ಸೀರೆ, ಕಂಕಣ, ಬಳೆ, ಎಲೆ, ಅಡಿಕೆ, ಕೊಬ್ಬರಿ ಉತ್ತತ್ತಿ, ಸೇರಿದಂತೆ ಮುತೈದೆರೆಲ್ಲಾ ಉಡಿ ಸಾಮಗ್ರಿಗಳನ್ನೇಲ್ಲಾ ತಂದು ವಿಶೇಷ ಪ್ರಸಾದ ದೊಂದಿಗೆ ದೇವಿಗೆ ಉಡಿ ತುಂಬಿದರು. ಉಡಿ ತುಂಬುವ ಕಾರ್ಯಕ್ರಮ ಸಂಜೆಯಾದರೂ ಇನ್ನೂ ನಿರಂತರವಾಗಿದ್ದು ಕಂಡು ಬಂತು. ನಂತರ ಮಧ್ಯಾಹ್ನ ೧೨ ಗಂಟೆಗೆ ಆರಂಭಗೊಂಡ ಅನ್ನ ಸಂತರ್ಪಣೆ ಕಾರ್ಯಕ್ರಮ ೩ ಗಂಟೆಯವರೆಗೂ ಜರುಗಿತು. ರಸ್ತೆಯ ಮೇಲೆಯೇ ಕುಳಿತು ಯಾವುದೇ ಭೇದಭಾವವಿಲ್ಲದೇ ಎಲ್ಲಾ ಸಮೂಹದ ಭಕ್ತರು ಪ್ರಸಾದದಲ್ಲಿ ಪಾಲ್ಗೊಂಡಿದ್ದು ವಿಶೇಷವಾಗಿತ್ತು.
ಬೆಳಿಗ್ಗೆ ಉಡಿತುಂಬುವ ಕಾರ್ಯಕ್ರಮದ ವೇಳೆ ವಾರ್ಡಿನ ಸದಸ್ಯ, ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ರಾಮಣ್ಣ ಹದ್ದಿನ, ಓಣಿಯ ಮುಖಂಡರಾದ ಶಂಕ್ರಪ್ಪ ಕನಕಗಿರಿ, ಮುದುಕಪ್ಪ, ಗೋವಿಂದ ಮೊಗ್ಗಿನ, ಚಂದ್ರು ಹದ್ದಿನ, ಬಸವರಾಜ, ಹನುಮಂತ ಸೇರಿದಂತೆ ಇತರರು ದೇವಸ್ಥಾನಕ್ಕೆ ಬೇಟಿ ನೀಡಿ ದೇವಿಯ ಆಶೀರ್ವಾದ ಪಡೆದರು.
0 comments:
Post a Comment