ಕೊಪ್ಪಳ ನಗರದ ವಿವಿಧ ಕಡೆಗಳಲ್ಲಿ ಕೆಲಸ ಮಾಡುತ್ತಿದ್ದ ಐವರು ಬಾಲಕಾರ್ಮಿಕರನ್ನು ಜಿಲ್ಲಾ ಬಾಲ ಕಾರ್ಮಿಕ ಯೋಜನಾ ಸಂಘ ಬುಧವಾರದಂದು ಪತ್ತೆ ಮಾಡಿದೆ.
ಸಮೀರ್ ಇಂಜಿನೀಯರಿಂಗ್ ವರ್ಕ್ಸ್‌ನಲ್ಲಿ ಅಲ್ತಾಫ್ ಖಾಸೀಂಸಾಬ ಚಿತ್ತಾರ (೧೪), ಮರ್ದಾನ ವೆಲ್ಡಿಂಗ್ ವರ್ಕ್ಸ್‌ನಲ್ಲಿ ಮಹಮ್ಮದ ಖಾಸೀಂಪಿರಸಾಬ ಬೂದಿಹಾಳ (೧೪), ತುಳಜಾ ಬಿ.ಮುರ್ತುಜಾ ಬಿಲ್ಡಿಂಗ್‌ನಲ್ಲಿ ದ್ಯಾಮನಗೌಡ ಬಸನಗೌಡ ಹುಚ್ಚನಗೌಡ ಪೊ|ಪಾ| (೧೪), ರೇಣುಕಾ ಪೌಲ್ಟ್ರೀ ಫಾರಂನಲ್ಲಿ ಕಾರ್ಯನಿರ್ವಹಿಸುತ್ತಿದ್ದ ಮಾರ್ಕಂಡೆಪ್ಪ ಕುಂಟೆಪ್ಪ ಮ್ಯಾಗೇರಿ (೧೪) ಮತ್ತು ಯಮನಮ್ಮ ಮಲ್ಲಪ್ಪ ಚೌಡಿ (೧೩) ಈ ಐದು ಮಕ್ಕಳನ್ನು ಕೆಲಸ ಮಾಡುತ್ತಿದ್ದ ವೇಳೆಯಲ್ಲಿ ಪತ್ತೆ ಮಾಡಲಾಗಿದೆ.
ಮಕ್ಕಳ ನಿಖರವಾದ ವಯಸ್ಸಿನ ದೃಢೀಕರಣ ಪಡೆದು ಮುಂದಿನ ಕ್ರಮ ತೆಗೆದುಕೊಳ್ಳಲಾಗುವುದು, ಮಾಲೀಕರಿಗೆ ಬಾಲಕಾರ್ಮಿಕತೆ ಕುರಿತು ಮಾಹಿತಿ ಇರುವ ಭಿತ್ತಿಪತ್ರಗಳನ್ನು ವಿತರಿಸಲಾಯಿತು. ಅಲ್ಲದೇ ಮುಂದೆ ಬಾಲಕಾರ್ಮಿಕರನ್ನು ನೇಮಿಸಿಕೊಳ್ಳದಂತೆ ಎಚ್ಚರಿಕೆ ನೀಡಲಾಯಿತು. ಈ ದಾಳಿಯಲ್ಲಿ ಕಾರ್ಮಿಕ ಇಲಾಖೆ, ಜಿಲ್ಲಾ ಬಾಲಕಾರ್ಮಿಕ ಯೋಜನಾ ಸಂಘ, ಮಕ್ಕಳ ರಕ್ಷಣಾ ಯೋಜನೆ, ಜಿಲ್ಲಾ ಮಕ್ಕಳ ವಿಶೇಷ ಪೊಲೀಸ್ ಘಟಕ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಹಾಗೂ ಮಕ್ಕಳ ಸಹಾಯವಾಣಿ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಭಾಗವಹಿಸಿದ್ದರು.

0 comments:
Post a Comment