PLEASE LOGIN TO KANNADANET.COM FOR REGULAR NEWS-UPDATES

 ಭಾರತ ವಿದ್ಯಾರ್ಥಿ ಫೆಡರೇಷನ್ ಎಸ್.ಎಫ್.ಐ ಕೊಪ್ಪಳ ಜಿಲ್ಲಾ ಸಮಿತಿಯು ಪತ್ರಿಭಟನೆಯ ಮೂಲಕ  ಸ್ನಾತಕೋತ್ತರ ಇಂಜಿನೀಯರಿಂಗ್ ಮತ್ತು ಮೆಡಿಕಲ್ ಕೊರ್ಸ್‌ಗಳಿಗೆ ಸರಕಾರವೇ ಮೊದಲು ಕೌನ್ಸಿಂಗ್ ನಡೆಸಲಿ ಮತ್ತು ಸುಪ್ರಿಮ್ ಕೋರ್ಟಿನ ಆದೇಶದ ಗೊಂದಲ ದಿಂದಾಗಿ ಕಾಲೇಜುಗಳ ಮಾನ್ಯತೆ ನವೀಕರಣ ವಿಳಂಬವಾಗುತ್ತದೆ. ಇದರಿಂದಾಗಿ ಕೌನ್ಸಿಂಗ್ ತಡವಾಗಿ ಆರಂಭವಾಗುವ ಲಕ್ಷಣಗಳು ಕಾಣುತ್ತವೆ. ಮೊದಲು ಮಾನ್ಯತೆ ನವೀಕರಣವನ್ನು ಎ.ಐ.ಸಿ.ಟಿ.ಸಿ (ಅಖಿಲ ಭಾರತ ತಾಂತ್ರಿಕ ಶಿಕ್ಷಣ ಮಂಡಳಿ) ಮಾಡುತ್ತಿತ್ತು. ಆದರೆ ಸುಪ್ರಿಮ್ ಕೋರ್ಟ ೬ತಿಂಗಳ ಹಿಂದೆ ಮಾನ್ಯತೆ ನವೀಕರಣವನ್ನು ವಿಶ್ವವಿದ್ಯಾಲಯಗಳಿಗೆ ನೀಡಿತು. ಈಗ ಅದೆ ಸುಪ್ರಿಮ್ ಕೋರ್ಟ ಎಪ್ರೀಲ್ ೧೭ ರಂದು ತಿರ್ಪು ನೀಡಿ ಮಾನ್ಯತೆ ನವೀಕರಣವನ್ನು ಎ.ಐ.ಸಿ.ಟಿ.ಸಿ. ೧೦ ದಿನಗಳಲ್ಲಿ ಮಾಡಬೇಕೆಂದು ಹೇಳಿದೆ ಇದನ್ನು ಪೂರ್ಣಗೊಳಿಸಲು ಎ.ಐ.ಸಿ.ಟಿ.ಸಿಗೆ ೧೦ ದಿನಗಳಲ್ಲಿ ಈಡಿ ರಾಜ್ಯಾಧ್ಯಾಂತ ಕಾಲೇಜುಗಳ ನವೀಕರಣವನ್ನು ಮಾಡಲು  ಸಾಧ್ಯವಾಗುವುದಿಲ್ಲ ಆ ಕಾರಣದಿಂದಾಗಿ ಕೌನ್ಸಿಂಗ್ ವಿಳಂಬವಾಗುವ ಸಾಧ್ಯತೆಗಳು ಹೆಚ್ಚಿವೆ. ಹಾಗೂ ಸರಕಾರಿ ಕೋಟಾದ ಸೀಟುಗಳನ್ನು ಭರ್ತಿಮಾಡುವವರಿಗೂ ಇತರೆ ಕೋಟಾಗಳಿಗೆ ಕೌನ್ಸಿಂಗ್ ನಡೆಸಬಾರದೆಂದು ಎಸ್.ಎಫ್.ಐ ಜಿಲ್ಲಾ ಸಮಿತಿಯು  ಒತ್ತಾಯಿಸಿದೆ

ಬೇಡಿಕೆಗಳು 
೧. ಇಂಜಿನಿಯರಿಂಗ್ ಮತ್ತು ಮೆಡಿಕಲ್ ಸೇರಿದಂತೆ ಇತರೆ ಕೊರ್ಸುಗಳಿಗೆ ಸರಕಾರವೇ ಮೊದಲು ಕೌನ್ಸಿಂಗ್ ನಡೆಸಲಿ.
೨. ಪ್ರತಿ ಜಿಲ್ಲೆಗಳಲ್ಲಿ ಇಂಜಿನಿಯರಿಂಗ್ ಮತ್ತು ಮೆಡಿಕಲ್ ಕಾಲೇಜುಗಳನ್ನು ಪ್ರಾರಂಭಿಸಬೇಕು.
೩. ಕೊಪ್ಪಳ ಜಿಲ್ಲೆಗೆ ಮಂಜೂರಾದ ಮೆಡಿಕಲ್ ಮತ್ತು ಇಂಜಿನಿಯರಿಂಗ್ ಕಾಲೇಜುಗಳನ್ನು ಇದೆ ಶೈಕ್ಷಣಿಕ ವರ್ಷದಿಂದ ಪ್ರಾರಂಭಿಸಿ.
೪. ಮಾನ್ಯತೆ ನವೀಕರಣದ ಗೊಂದಲ ಬೇಗನೆ ಬಗೆಹರಿಸಿ.
೫. ಎಲ್ಲಾ ವಿಭಾಗದಲ್ಲಿ ಶೇಕಡ ೭೫% ಸರಕಾರಿ ಸೀಟುಗಳು ೨೫ ಖಾಸಗಿ ಸೀಟುಗಳಿಗೆ ಬಿಟ್ಟುಕೊಡಬೇಕು.
ಪ್ರತಿಭಟನೆ ಮೆರವಣಿಗೆ ಪದಕಿ ಲೇಜೌಟನಿಂದ ಪ್ರಾರಂಭಿಸಿ ಸಿಂಪಿಲಿಂಗಣ್ಣ ರಸ್ತೆ ಮೂಲಕ ಕೇಂದ್ರಿಯ ಬಸ್ ನಿಲ್ದಾಣದ ಎದುರುಗಡೆ ಪ್ರತಿಭಟನೆ ಮಾಡಲಾಯಿತು ಪ್ರತಿಭಟನೆಯಲ್ಲಿ ಪಾಲ್ಗೊಂಡವರು ಗೌರಮ್ಮ, ಸಂತೋಷ, ಹನುಂತರಾವ್, ಮಾಬುಸಾಬ್, ಅನಿತಾ, ಸಂತೋಷ, ಸುಂಕಪ್ಪ ಗದಗ, ಪಕೀರಮ್ಮ, ಶಾಂತಮ್ಮ ಇತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು. 

Advertisement

0 comments:

Post a Comment

 
Top