PLEASE LOGIN TO KANNADANET.COM FOR REGULAR NEWS-UPDATES

      ಸಿಪಿಐ(ಎಂಎಲ್) ಕಮ್ಯೂನಿಸ್ಟ್ ಪಕ್ಷದ ಅಭ್ಯರ್ಥಿ ಕಾಂ|| ಡಿ.ಎಚ್.ಪೂಜಾರ್ ಕೊಪ್ಪಳ ತಾಲೂಕಿನ ಕುಣಿಕೇರಿ, ಕುಣಿಕೇರಿ ತಾಂಡ, ಹೂವಿನಾಳ, ನರೇಗಲ್ ಮಾದಿನೂರು ಹಾಗೂ ಇತರ ಗ್ರಾಮಗಳಲ್ಲಿ ಮನೆ-ಮನೆಗೆ ತೆರಳಿ ಮತಯಾಚನೆ ಮಾಡಿದರು. ಪಕ್ಷದ ಕಾರ್ಯಕರ್ತರು ದೇಶದ ಸಂಪತ್ತನ್ನು ಮಾರುವ ಪಕ್ಷಗಳಿಗೆ ಪಾಠ ಕಲಿಸಲು ಈ ಭಾರಿ ಸಿಪಿಐ(ಎಂಎಲ್) ಪಕ್ಷದ ’ಗರಗಸ’ ಗುರುತಿಗೆ ಮತ ನೀಡಿ ಗೆಲ್ಲಿಸಿ ಎಂದು ಜನರಿಗೆ ತಿಳಿಸಿ ಹೇಳಿದರು. ಹಣ, ಹೆಂಡ ಮದ್ಯ ಕೂಡುವವರನ್ನು ಗ್ರಾಮಗಳಲ್ಲಿ ಬಿಟ್ಟುಕೊಳ್ಳಬೇಡಿ ಎಂದು ಹೇಳಿದಾಗ ಕೆಲವರು ಆಶ್ಚರ್ಯ ಪಟ್ಟುಕೊಂಡರೆ, ಕೆಲವರು ಮಹಿಳೆಯರು ತಮ್ಮ ಗ್ರಾಮಗಳಲ್ಲಿ ಅನಧಿಕೃತ ಮದ್ಯ ಮಾರಾಟದ ಹಾವಳಿಯಿಂದ ತಮ್ಮ ಕುಟುಂಬ ನಿರ್ವಹಣೆ ಕಷ್ಟವಾಗಿದೆ ಮತ್ತು ನಮ್ಮ ಗಂಡಂದಿರ ಆರೋಗ್ಯ ಹಾಳಾಗುತ್ತಿದೆ ಎಂದು ಇದನ್ನು  ತಡೆಗಟ್ಟಲು ಪಕ್ಷದ ಅಭ್ಯರ್ಥಿಯಾದ ಕಾಂ|| ಡಿ.ಎಚ್.ಪೂಜಾರ್ ಇವರಿಗೆ ವಿನಂತಿಸಿದರು. ಮಧ್ಯೆ ಪ್ರವೇಶಿಸಿದ ಕಾರ್ಯಕರ್ತರು ಮಹಿಳಾ ಸಂಘಟನೆ ನೇತೃತ್ವದಲ್ಲಿ ಮದ್ಯ ಮಾರಾಟ ತಡೆಗಟ್ಟಲು ಚುನಾವಣಾ ನಂತರ ಹೋರಾಟ ಹಮ್ಮಿಕೊಳ್ಳುವುದಾಗಿ ತಿಳಿಸಿದರು.
        ನರೇಗಲ್ ಗ್ರಾಮದ ಮನೆ-ಮನೆಗೆ ತೆರಳಿ ಮತ ಯಾಚನೆ ಮಾಡುವ ಸಂದರ್ಭದಲ್ಲಿ ಆ ಗ್ರಾಮದ ಜನರು ಅಜೀಂ ಪ್ರೇಮಜೀ ವಿಫ್ರೋ ಕಂಪನಿಯವರು ನಿರ್ಮಾಣ ಮಾಡಿರುವ ೪೮೦ ಮನೆಗಳು ಬಿದ್ದು ಹೋಗಿವೆ, ಬೀಳುವ ಸ್ಥಿತಿಯಲ್ಲಿರುವ ಮನೆಗಳು ವಾಸಿಸಲು ಯೋಗ್ಯವಿಲ್ಲ! ಸರ್ಕಾರಕ್ಕೆ ಒತ್ತಾಯಿಸಿ ಮನೆಗಳನ್ನು ಪುನರ್ ನಿರ್ಮಾಣ ಮಾಡಬೇಕೆಂದು ವಿನಂತಿಸಿದರು ಆಗ ಪಕ್ಷದ ಕಾರ್ಯಕರ್ತರು ಮನೆಗಳ ಗುಣಮಟ್ಟ ಕಳಪೆಯಾಗಿಸಲು ಎರಡು ಪಕ್ಷಗಳ ಅಭ್ಯರ್ಥಿಗಳು ಕಾರಣರಾಗಿದ್ದಾರೆ ಅವರನ್ನು ಪ್ರಶ್ನೆ ಮಾಡಿರಿ?  ನಾವು ಚುನಾವಣಾ ಮುಗಿದ ನಂತರ ಹೋರಾಟ ರೂಪಿಸೋಣ ಎಂದು ವಿಶ್ವಾಸ ತುಂಬಿದರು. 
        ಈ ಸಂದರ್ಭದಲ್ಲಿ ಪ್ರಚಾರ ಸಮಿತಿ ಅಧ್ಯಕ್ಷರಾದ ಕೆ.ಬಿ.ಗೋನಾಳ, ಸಮಿತಿ ಪ್ರಧಾನ ಕಾರ್ಯದರ್ಶಿ ಮಂಜುನಾಥ ಚಕ್ರಸಾಲಿ ವಕೀಲರು, ಸಿಪಿಐ(ಎಂಎಲ್) ಜಿಲ್ಲಾ ಸಂಘಟಕರಾದ ಬಸವರಾಜ್.ನರೇಗಲ್, ಹನುಮೇಶ.ಪೂಜಾರ್, ಯಮನೂರಪ್ಪ, ಹನುಮೇಶ.ಕವಿತಾಳ, ಸುರೇಶ ಲಿಂಗಲಬಂಡಿ, ಎಚ್.ಬಿ.ರೆಡ್ಡಿ ಹಾಗೂ ಇತರರು ಪಾಲುಗೊಂಡಿದ್ದರು. 

Advertisement

0 comments:

Post a Comment

 
Top