ಕೊಪ್ಪಳ : ದಿನಾಂಕ ೨೧-೦೩-೨೦೧೪ ರಂದು ಸಿ.ಐ.ಟಿ.ಯು ಸಂಯೋಜಿತ ಕಿರ್ಲೂಸ್ಕರ್ ಫೆರಸ್ ಕಾರ್ಮಿಕರ ಸಂಘ ವು ವಿವಿಧ ಬೇಡಿಕೆಗಳನ್ನು ಇಡೇರಿಸುವಂತೆ ಒತ್ತಾಯಿಸಿ ನಗರಸಭೆ ಪೌರಾಯುಕ್ತರಿಗೆ ಮನವಿ ಸಲ್ಲಿಸಿದರು.
ಕೊಪ್ಪಳ ನಗರಸಭೆಯಲ್ಲಿ ಸುಮಾರು ವರ್ಷಗಳಿಂದ ಪೌರ ಕಾರ್ಮಿಕರಾಗಿ ಕೆಲಸ ನಿರ್ವಹಿಸುತ್ತಿದ್ದು ಈಗ ಒಂದು ವರ್ಷದಿಂದ ಗುತ್ತಿಗೆ ಆಧಾರದಲ್ಲಿ ಸುಮಾರು ೬೨ ಜನ ಕಾರ್ಮಿಕರು ಕಾರ್ಯನಿರ್ವಹಿಸುತ್ತಾ ಬಂದಿದ್ದಾರೆ. ಆದರೆ ಈಗ ಏಕಾ ಏಕಿ ಕೆಲಸಕ್ಕೆ ಬೇಡವೆಂದು ಹೇಳುತ್ತಿದ್ದೀರಿ ಹಾಗೂ ಕೆಲಸ ನಿರ್ವಹಿಸಿದ ನಾಲ್ಕು ತಿಂಗಳ ವೇತನ ನೀಡಿರುವುದಿಲ. ಇದರಿಂದ ಪೌರ ಕಾಮೀಕರ ೬೨ ಕುಟುಂಬಗಳ ಜೀವನ ಬೀದಿ ಪಾಲಾಗಿದೆ. ಈ ಇಷಯವಾಗಿ ಈಗಾಗಲೇ ನಗರಸಭೆ ಮುಂದೆ ಧರಣಿ ನಡೆಸುತ್ತಿದ್ದಾರೆ. ಪೌರ ಕಾರ್ಮಿಕರ ನ್ಯಾಯಯುತವಾದ ಹೋರಾಟಕ್ಕೆ ನಮ್ಮ ಸಂಘವು ಸಂಪೂರ್ಣ ಬೆಂಬಲವನ್ನು ನೀಡುತ್ತದೆ. ಈ ಎಲ್ಲಾ ವಿಷಯಗಳಿಗೆ ಕೂಡಲೇ ಪೌರಾಯುಕ್ತರು ಸ್ಪಂದಿಸಬೇಕೆಂದು ಮನವಿ ಸಲ್ಲಿಸಲಾಯಿತು.
0 comments:
Post a Comment