ಕೊಪ್ಪಳದ ಸ್ವರಭಾರತಿ ಗ್ರಾಮೀಣಾಭಿವೃದ್ಧಿ ಮತ್ತು ಸಾಂಸ್ಕೃತಿಕ ಸಂಸ್ಥೆ, ಯುವಚೇತನ ಶ್ರೀ ಶಿವರಾಜ ತಂಗಡಗಿ ಅಭಿಮಾನಿಗಳ ವೇದಿಕೆ, ಕರ್ನಾಟಕ ಚಲನಚಿತ್ರ ಅಕಾಡೆಮಿ ಬೆಳ್ಳಿ ಮಂಡಲ ಹಾಗೂ ಬ್ಲ್ಯೂಸ್ಟಾರ್ ಕ್ರೀಡಾ ಮತ್ತು ಸಾಂಸ್ಕೃತಿಕ ಸಂಘಗಳ ಆಶ್ರಯದಲ್ಲಿ ತೆಲುಗು ಚಿತ್ರರಂಗದ ಸೂಪರಸ್ಟಾರ್ ಮೆಕಾ ಶ್ರೀಕಾಂತರವರ ೪೭ ನೇ ಹುಟ್ಟುಹಬ್ಬ ನಿಮಿತ್ಯ ಉಚಿತ ಆರೋಗ್ಯ ಮತ್ತು ದಂತ ಚಿಕಿತ್ಸೆ ಶಿಬಿರ ಹಮ್ಮಿಕೊಳ್ಳಲಾಗಿದೆ.
ನಗರದ ಭಾಗ್ಯನಗರ ರಸ್ತೆಯ ಶ್ರೀ ತಾಯಮ್ಮದೇವಿ ದೇವಸ್ಥಾನದ ಎದುರುಗಡೆ ಇರುವ ಬಾಲಕರ ಬಾಲಮಂದಿರದಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು ಅಲ್ಲಿನ ಮಕ್ಕಳಿಗೆ ಹಾಗೂ ಸಾರ್ವಜನಿಕರಿಗೆ ಬೆಳಿಗ್ಗೆ ೧೦ ರಿಂದ ಮಧ್ಯಾಹ್ನ ೨ ಗಂಟೆಯವರೆಗೆ ಉಚಿತ ಚಿಕಿತ್ಸೆ ಹಮ್ಮಿಕೊಳ್ಳಲಾಗಿದೆ ಎಂದು ಸಂಘಟಕ ಮಂಜುನಾಥ ಜಿ. ಗೊಂಡಬಾಳ ತಿಳಿಸಿದ್ದಾರೆ.
ಕಾರ್ಯಕ್ರಮವನ್ನು ಮೆಕಾ ಶ್ರೀಕಾಂತರ ಚಿಕ್ಕಮ್ಮ ಶಾಂತಕುಮಾರಿ ಉದ್ಘಾಟಿಸಲಿದ್ದು, ಜಿಲ್ಲಾ ಸರಕಾರಿ ನೌಕರರ ಸಂಘದ ಅಧ್ಯಕ್ಷ ನಾಗರಾಜ ಜುಮ್ಮನ್ನವರ ಅಧ್ಯಕ್ಷತೆ ವಹಿಸುವರು. ವೈದ್ಯರಾದ ಡಾ|| ಜಾಸ್ಮಿನ್ ರಾಜೂರ, ಡಾ|| ಎಸ್. ಕೆ. ರಾಜೂರ ಹಾಗೂ ಡಾ|| ಶ್ರೀನಿವಾಸ ಹ್ಯಾಟಿಯವರು ಚಿಕಿತ್ಸೆ ನೀಡುವರು. ಕಾರ್ಯಕ್ರಮದಲ್ಲಿ ಡಾ|| ಮಹಾಂತೇಶ ಮಲ್ಲನಗೌಡರ, ಧನಂಜಯ ಮಾಲಗಿತ್ತಿ, ವಿಠ್ಠಪ್ಪ ಗೋರಂಟ್ಲಿ, ಡಾ|| ಬಸವರಾಜ ಪೂಜಾರ, ಬಾಲ ನ್ಯಾಯ ಮಂಡಳಿ ಅಧ್ಯಕ್ಷ ಮಹಾಲಿಂಗಪ್ಪ ದೋಟಿಹಾಳ, ಸಿದ್ದಲಿಂಗಯ್ಯ ಹಿರೇಮಠ, ಬಸವರಾಜ ಪುರದ, ರಾಜಶೇಖರ ನಾಯಿನೇಗಿಲಿ, ಬಸವರಾಜ ಮಾಲಗಿತ್ತಿ, ಶ್ರೀಕಾಂತ ರಾಜನಾಳ, ಡಾ|| ಸಿದ್ದಲಿಂಗಪ್ಪ ಕೊಟ್ನೆಕಲ್, ಬಸವರಾಜ ಕೊಪ್ಪಳ ಇತರರು ಭಾಗವಹಿಸುವರು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
0 comments:
Post a Comment