PLEASE LOGIN TO KANNADANET.COM FOR REGULAR NEWS-UPDATES

ಗುಜರಾತ್ ರಾಜ್ಯದ ಅಭಿವೃದ್ಧಿಯಂತೆ ಇತರೆ ರಾಜ್ಯಗಳಲ್ಲಿ ಅಭಿವೃದ್ಧಿ ಯಾಗಬೇಕಾದರೆ ಮೋದಿ ಪ್ರಧಾನಿಯಾಗಬೇಕು : ಸಂಗಣ್ಣ ಕರಡಿ
ಕೊಪ್ಪಳ,ಮಾ,೨೧: ದೇಶದಲ್ಲಿಯೇ
ಗುಜರಾತ ರಾಜ್ಯವನ್ನು ಅಭಿವೃದ್ಧಿ ಪಥದಲ್ಲಿ ಮಂಚೂಣಿಯಲ್ಲಿರುವ ರಾಜ್ಯದ ಅಭಿವೃದ್ಧಿಯನ್ನು ದೇಶದ ಇತರ ರಾಜ್ಯಗಳಲ್ಲಿಯೂ ಗುಜರಾತನಂತೆ ಅಭಿವೃದ್ಧಿ ಹೊಂದಬೇಕಾದರೆ ಈ ದೇಶಕ್ಕೆ ಬಿಜೆಪಿ ಘೋಷಿತ ಪ್ರಧಾನಮಂತ್ರಿ ನರೇಂದ್ರ ಮೋದಿಯವರಂತಹ ನಾಯಕರು ಈ ದೇಶಕ್ಕೆ ಪ್ರಧಾನಿಯಾದಾಗ ಮಾತ್ರ ಇತರೆ ರಾಜ್ಯಗಳು ಅಭಿವೃದ್ಧಿ ಹೊಂದಲು ಸಾಧ್ಯವೆಂದು ಕೊಪ್ಪಳ ಲೋಕಸಭಾ ಬಿಜೆಪಿ ಅಭ್ಯರ್ಥಿ ಸಂಗಣ್ಣ ಕರಡಿ ಹೇಳಿದರು.
    ಅವರು ನಗರದ ಪ್ರಮೋದ ಮಂದಿರದಲ್ಲಿ ಕೊಪ್ಪಳ ಲೋಕಸಭಾ ವ್ಯಾಪ್ತಿಯ ಮಹಿಳಾ ಘಟಕದ ಕಾರ್ಯಕಾರಿಣಿ ಮಂಡಳಿಯ ಸಭೆಯಲ್ಲಿ ಪಾಲ್ಗೊಂಡು ಮಾತನಾಡುತ್ತಾ. ದೇಶದಲ್ಲಿ ಮುಂಬರುವ  ಲೋಕಸಭಾ ಚುನಾವಣೆಯಲ್ಲಿ ಮೋದಿಯವರ ನೇತೃತ್ವದಲ್ಲಿ ಎನ್.ಡಿ.ಎ. ಅದಿಕಾರಕ್ಕೆ ತರಲು ದೇಶದ ಜನ ನಿರೀಕ್ಷೆ ಮೀರಿ ಸ್ಪಂದನೆ ನೀಡುತ್ತಿದ್ದಾರೆ ಇದನ್ನು ಕಂಡು ಕಾಂಗ್ರೆಸ್ ನಾಯಕರಲ್ಲಿ ನಡುಕ ಉಂಟಾಗಿ ಸೋಲಿನ ಭಯ ಆವರಿಸಿದೆ. ಕಳೆದ ಬಾರಿ ರಾಜ್ಯದಲ್ಲಿ ಆಡಳಿತ ನಡೆಸಿದ ಬಿಜೆಪಿ ಸರ್ಕಾರದ ಕಾಮಗಾರಿಗಳನ್ನೆ ಈಗಿನ ಕಾಂಗ್ರೆಸ್ ಸರ್ಕಾರ ಮುಂದುವರೆಸಿಕೊಂಡು ಹೋಗಲು ಆಗುತ್ತಿಲ್ಲ. ಇನ್ನು ಹೊಸ ಯೋಜನೆಗಳನ್ನು ಜಾರಿಗೆ ತರಲು ಸಂಪೂರ್ಣ ನಿರ್ಲಕ್ಷವಹಿಸಿದ್ದಾರೆ. ರಾಜ್ಯ ಕಾಂಗ್ರೆಸ್ ಸರ್ಕಾರದ ಏಕಾಧಿಪತ್ಯ ಆಡಳಿತದಿಂದಾಗಿ ಜನರು ಬೇಸತ್ತಿದ್ದು ಚುನಾವಣೆಯ ನಂತರ ರಾಜ್ಯದಲ್ಲಿ ಭಾರೀ ಬದಲಾವಣೆಯಾಗಲಿದೆ ಎಂದ ಅವರು ಚುನಾವಣೆಯಲ್ಲಿ ಬಿಜೆಪಿ ಪಕ್ಷದ ಗೆಲುವಿಗಾಗಿ ಕಾರ್ಯಕರ್ತರು ಒಗ್ಗಟ್ಟಿನಿಂದ ಕೆಲಸ ಮಾಡಬೇಕಾಗಿದೆ ಕಾರ್ಯಕರ್ತರೆ ಪಕ್ಷದ ನಿಜವಾದ ನಾಯಕರು. ನಾನು ಕೇವಲ ಪಕ್ಷದ ಅಭ್ಯರ್ಥಿ ಮಾತ್ರ ನರೇಂದ್ರ ಮೋದಿ ಪ್ರಧಾನಿಯಾಗಲು ಎಲ್ಲ ಕಾರ್ಯಕರ್ತರು ಕೂಡಿ ಕೆಲಸಮಾಡಬೇಕು ಎಂದರು.
  ಮತ್ತೋರ್ವ ಬಿಜೆಪಿ ಮಹಿಳಾ ಧುರೀಣೆ ಶಿವಲೀಲಾ ದಳವಾಯಿ ಮಾತನಾಡಿ ದೇಶದಲ್ಲಿ ಮಹಿಳೆಯರ ಮೇಲಿನ ಅತ್ಯಾಚಾರ. ದೌರ್ಜನ್ಯಗಳು  ತಡೆಯುವಲ್ಲಿ ಸಂಪೂರ್ಣ ವಿಫಲವಾದ ರಾಜ್ಯ ಸರ್ಕಾರ. ಕೇಂದ್ರ ಯುಪಿಎ ಸರ್ಕಾರವನ್ನು ಬೇರು ಸಮೇತ ಕಿತ್ತೊಗೆಯಲು ಬಿಜೆಪಿ ಮಹಿಳಾ ಕಾರ್ಯಕರ್ತರು ಕಂಕಣ ಬದ್ಧರಾಗಿ ಶ್ರಮಿಸಬೇಕು. ಮಹಿಳೆಗೆ ಭದ್ರತೆ, ರಕ್ಷಣೆ ಹಾಗೂ ಸರ್ವರಂಗಗಳಲ್ಲಿ ಸಮಾನ ಅವಕಾಶ ನೀಡುವ ನಿಟ್ಟಿನಲ್ಲಿ ನರೇಂದ್ರ ಮೋದಿಯವರ ನೇತೃತ್ವದ ಬಿಜೆಪಿ ಸರ್ಕಾರ ದೇಶದಲ್ಲಿ ಇಂದಿನ ಅಗತ್ಯವಾಗಿದೆ ಶೇ.೫೦ ರಷ್ಟು ಮಹಿಳೆಯರು ದೇಶದಲ್ಲಿ ಬದಲಾವಣೆ ತರಲು ಮಹತ್ವದ ಪಾತ್ರವಹಿಸಲಿದ್ದಾರೆ.  ಮನೆ-ಮನೆಗೆ ಹೋಗಿ ಬಿಜೆಪಿಯ ಹಾಗೂ ನರೇಂದ್ರ ಮೋದಿ ಯವರ ಜನಪರ ದೃಷ್ಟಿಯ ವಿಚಾರಗಳನ್ನು ತಿಳಿಸುವ ಕೆಲಸ ಮಾಡಿ ಕೊಪ್ಪಳ ಲೋಕಸಭಾ ಕ್ಷೇತ್ರದಲ್ಲಿ ಸಂಗಣ್ಣ ಕರಡಿ ಪರ ಆಶೀರ್ವಾದ ಕೊರಬೇಕು ಎಂದು ಹೇಳಿದರು.
   ಕಾರ್ಯಕ್ರಮದಲ್ಲಿ ಜಿಲ್ಲಾ ಬಿಜೆಪಿ ಮಹಿಳಾ ಘಟಕದ ಅಧ್ಯಕ್ಷೆ ಹೇಮಲತಾ ನಾಯಕ್ ಪ್ರಾರಂಭದಲ್ಲಿ ಸರ್ವರನ್ನು ಸ್ವಾಗತಿಸಿ ಪ್ರಾಸ್ಥಾವಿಕವಾಗಿ ಮಾತನಾಡಿದರು.
  ಕಾರ್ಯಕಾರಣಿ ಸಭೆಯ ವೇದಿಕೆಯಲ್ಲಿ ಕೊಪ್ಪಳ ಲೋಕಸಭಾ ಉಸ್ತುವಾರಿ ಗಿರೇಗೌಡ್ರ ಪಾಟೀಲ್, ಜಿಲ್ಲಾ ಪ್ರಧಾನಕಾರ್ಯದರ್ಶಿಗಳಾದ ನರಸಿಂಗ್‌ರಾವ್ ಕುಲಕರ್ಣಿ, ರಾಜು ಬಾಕಳೆ, ಚಂದ್ರಶೇಖರ ಕವಲೂರ, ರಾಜ್ಯ ಕಾರ್ಯಕಾರಣಿ ಸದಸ್ಯೆ ಶಾಮಲಾ ಕೋನಾಪುರ್,  ಜಿಲ್ಲಾಪ್ರಧಾನ ಕಾರ್ಯದರ್ಶಿ ಮಧುರಾ ಕರುಣಂ, ನಗರ ಘಟಕದ ಅಧ್ಯಕ್ಷೆ ಹೇಮಕ್ಕ ಮಂಗಳೂರ, ವಿಜಯಲಕ್ಷ್ಮಿ ಜಾಲಗಾರ, ಶೋಭಾ ನಗರಿ, ವರಲಕ್ಷ್ಮಿ ಚಿಂತಾಪಲ್ಲಿ, ಅಕ್ಕಮ್ಮ, ನಗರಸಭಾ ಸದಸ್ಯರಾದ ಸುವರ್ಣಾ ಬಸವರಾಜ ನೀರಲಗಿ, ಜನ್ನಾ ಬಾಯಿ ಜಕ್ಕಲಿ, ಲಲಿತಾ ನಾಯಕ್, ಪ್ರಾಣೇಶ ಮಾದನೂರ, ಹಾಲೇಶ ಕಂದಾರಿ, ಪ್ರಾಣೇಶ್ ಮಹೇಂದ್ರಕರ್, ಪರಮಾನಂದ ಯಾಳಗಿ ಸೇರಿದಂತೆ ಇತರರು ಉಪಸ್ಥಿತರಿದ್ದರು.

Advertisement

0 comments:

Post a Comment

 
Top