PLEASE LOGIN TO KANNADANET.COM FOR REGULAR NEWS-UPDATES

 ಸಯ್ಯದ್ ಫೌಂಡೇಶನ್ ಮತ್ತು ಚಾರಿಟೇಬಲ್ ಟ್ರಸ್ಟ್‌ನ ಅಧ್ಯಕ್ಷ ಇಲ್ಲಿನ ಸಮಾಜ ಸೇವಕ ಕೆಜೆಪಿ ಪಕ್ಷದ ಮುಖಂಡ ಕೆ.ಎಂ.ಸಯ್ಯದ್ ಮಾ.೨೫ ರ ಮಂಗಳವಾರ ಕೆ.ಪಿ.ಸಿ.ಸಿ. ಅಧ್ಯಕ್ಷ ಡಾ|| ಜಿ.ಪರಮೇಶ್ವರ ಅವರ ಸಮ್ಮುಖದಲ್ಲಿ ಕೊಪ್ಪಳದಲ್ಲಿ ಜರುಗಲಿರುವ ಕಾಂಗ್ರೆಸ್ ಬೃಹತ್ ಸಮಾವೇಶದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ವಿದ್ಯುಕ್ತವಾಗಿ ಸೇರ್ಪಡೆಗೊಳ್ಳಲಿದ್ದಾರೆ.
ಇತ್ತೀಚಿಗಷ್ಟೆ ಸಯ್ಯದ್ ಫೌಂಡೇಶನ್ ಕಛೇರಿ ಸಭಾಂಗಣದಲ್ಲಿ ಜರುಗಿದ ಕೆ.ಎಂ.ಸಯ್ಯದ್ ಬೆಂಬಲಿಗರ ಸಭೆಯಲ್ಲಿ ಉಪಸ್ಥಿತ ಅವರ ಬೆಂಬಲಿಗ ಕಾರ್ಯಕರ್ತರು ಮತ್ತು ಅಭಿಮಾನಿಗಳು ಸೇರಿ ವಿವಿಧ ಸಂಘಟನೆಗಳ ಮುಖ್ಯಸ್ಥರೊಂದಿಗೆ ಜರುಗಿದ ಸಭೆಯಲ್ಲಿ ಎಲ್ಲರೂ ಒಮ್ಮತದ ನಿರ್ಧಾರ ಕೈಗೊಂಡು ಕೆ.ಎಂ.ಸಯ್ಯದ್‌ರವರು ಕಾಂಗ್ರೆಸ್ ಪಕ್ಷ ಸೇರಬೇಕೆಂಬ ನಿರ್ಣಯ ಕೈಗೊಂಡರು.
ಸಭೆಯಲ್ಲಿ ಉಪಸ್ಥಿತರಿದ್ದ ಕೆ.ಎಂ.ಸಯ್ಯದ್‌ರವರು ಬೆಂಬಲಿಗ ಕಾರ್ಯಕರ್ತರ ಅಭಿಪ್ರಾಯ ಸಂಗ್ರಹಣೆ ಮಾಡಿ ಮಾತನಾಡಿ, ಈಗಾಗಲೇ ಕಾಂಗ್ರೆಸ್  ಪಕ್ಷದ ಮುಖಂಡರಿಂದ ಪಕ್ಷ ಸೇರಲು ಆಹ್ವಾನ ಬಂದಿರುವ ಹಿನ್ನಲೆಯಲ್ಲಿ ಬೆಂಬಲಿಗರ ಅಭಿಪ್ರಾಯ ಸಂಗ್ರಹಣೆಗಾಗಿ ಕರೆದಿರುವ ಈ ಸಭೆಯಲ್ಲಿ ಬೆಂಬಲಿಗರ ನಿರ್ಣಯದಂತೆ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಳ್ಳುವುದಾಗಿ ತಮ್ಮ ನಿರ್ಧಾರ ಪ್ರಕಟಿಸಿದರು.
೧೬ನೇ ಲೋಕಸಭೆಯ ಸಾರ್ವತ್ರಿಕ ಚುನಾವಣೆ ಪ್ರಯುಕ್ತ ಕಾಂಗ್ರೆಸ್ ಪಕ್ಷದ ಅಧಿಕೃತ ಅಭ್ಯರ್ಥಿಯಾಗಿ ಕೆ.ಬಸವರಾಜ ಹಿಟ್ನಾಳರವರು ಇದೇ ದಿ.೨೫ ರ ಮಂಗಳವಾರ ತಮ್ಮ ನಾಮಪತ್ರ ಸಲ್ಲಿಸಲಿದ್ದು, ಅದೇ ದಿನ ಕೆಪಿಸಿಸಿ ಅಧ್ಯಕ್ಷ ಡಾ|| ಜಿ.ಪರಮೇಶ್ವರ ಅವರು ಕೊಪ್ಪಳಕ್ಕೆ ಭೇಟಿ ಮಾಡಿ ಕಾಂಗ್ರೆಸ್ ಅಭ್ಯರ್ಥಿಪರ ಬಹಿರಂಗ ಮತಯಾಚನೆ ಮಾಡುವ ಕಾರ್ಯಕ್ರಮದಲ್ಲಿ ಕೆ.ಎಂ.ಸಯ್ಯದ್‌ರವರು ತಮ್ಮ ಅಪಾರ ಬೆಂಬಲಿಗರೊಂದಿಗೆ ವಿದ್ಯುಕ್ತವಾಗಿ ಕಾಂಗ್ರೆಸ್ ಪಕ್ಷ ಸೇರುವುದಾಗಿ ತಿಳಿಸಿದ ಅವರು, ಈ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯ ಗೆಲುವಿಗಾಗಿ ಸಚಿವ ಶಿವರಾಜ ತಂಗಡಗಿ ಜಿಲ್ಲೆಯ ಶಾಸಕರಾದ ಕೆ.ರಾಘವೇಂದ್ರ ಹಿಟ್ನಾಳ, ಬಸವರಾಜ ರಾಯರೆಡ್ಡಿ, ಮುಖಂಡರಾದ ಅಂದಾನಪ್ಪ ಅಗಡಿ, ಎಸ್.ಬಿ.ನಾಗರಳ್ಳಿ ಸೇರಿದಂತೆ ಸಮಾಜದ ಪ್ರಮುಖ ಮುಖಂಡರಾದ ಸಯ್ಯದ್ ಜುಲ್ಲು ಖಾದ್ರಿ, ಮರ್ಧಾನ ಅಲಿ ಅಡ್ಡೇವಾಲೆ, ಅಮ್ಜದ್ ಪಟೇಲ್, ಜಾಕೀರ ಹುಸೇನ್ ಕಿಲ್ಲೇದಾರ, ಎಂ.ಪಾಷಾ ಕಾಟನ್, ಖತೀಬ್ ಬಾಷು ಮತ್ತಿತರರ ಸಹಯೋಗದೊಂದಿಗೆ ಕಾಂಗ್ರೆಸ್ ಅಭ್ಯರ್ಥಿ ಗೆಲುವಿಗಾಗಿ ಫಣತೊಟ್ಟು ಶ್ರಮಿಸುವುದಾಗಿ ಕೆ.ಎಂ.ಸಯ್ಯದ್ ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಬೆಂಬಲಿಗ ಕಾರ್ಯಕರ್ತ ಪದಾಧಿಕಾರಿಗಳಾದ ದೇವಪ್ಪ ಮಾಗಳದ್, ಸಯ್ಯದ್ ಹಜರತ್ ಪಾಷಾ ಖಾದ್ರಿ, ಈಶ್ವರ ನಿಂಗಾಪುರ, ಲಕ್ಷ್ಮಣ ಕವಲೂರು, ಪರಸಪ್ಪ ಲಮಾಣಿ, ಹನುಮಂತಪ್ಪ ಕಲಕೇರಿ, ರಾಮಣ್ಣ ಕುರಿ, ಮಹೆಬೂಬ ಅಳವಂಡಿ, ಮೈನುಸಾಬ ಕವಲೂರು, ಅಬ್ದುಲ್ ಅಜೀಜ್ ಮಾನ್ವಿಕರ್, ನಜೀರ ಭಾಗ್ಯನಗರ ಅಲ್ಲದೇ ಸಾಹಿತಿ ಮೆಹಬೂಬ ಮುಲ್ಲಾ ಹನುಮಸಾಗರ ಸೇರಿದಂತೆ ಜಿಲ್ಲೆಯ ಕೊಪ್ಪಳ, ಗಂಗಾವತಿ, ಕುಷ್ಟಗಿ, ಯಲಬುರ್ಗಾ ತಾಲೂಕಿನ ಕಾರ್ಯಕರ್ತರು ಮತ್ತು ಅಭಿಮಾನಿಗಳು ಉಪಸ್ಥಿತರಿದ್ದರು.

Advertisement

0 comments:

Post a Comment

 
Top