ಯು.ಪಿ.ಎ. ಸರಕಾರ ಕೊನೆಯ ಅಧಿವೇಶನದಲ್ಲಾದರೂ ಸಾಚಾರ ವರದಿ ಮಂಡಿಸಿ ಜಾರಿಗೆ ತರುತ್ತದೆ ಎಂದು ನಂಬಿದ್ದ ೨೦ ಕೋಟಿ ಮುಸ್ಲಿಮರನ್ನು ಯು.ಪಿ.ಎ.-೨ ಸರಕಾರ ಮೋಸ ಮಾಡಿದೆ ಎಂದು ಸಿ.ಪಿ.ಐ.ಎಂ.ಎಲ್. ಲಿಬರೇಷನ್ ಹೈದ್ರಾಬಾದ್ - ಕರ್ನಾಟಕ ಕಾರ್ಯದರ್ಶಿ ಭಾರದ್ವಾಜ್ತಿ ಳಿಸಿದ್ದಾರೆ.
ಯು.ಪಿ.ಎ-೨ ಸರಕಾರ ತನ್ನ ಕಡೆಯ ಸಂಸತ್ತ್ ಸಮಾವೇಶದಲ್ಲಿ ಪ್ರತ್ಯೇಕ ತೆಲಂಗಾಣ ಮಸೂದೆ ಮತ್ತು ಬೀದಿಬದಿಯ ವ್ಯಾಪಾರಿಗಳ ರಕ್ಷಣಾ ಮಸೂದೆಗಳಂತಹ ಅನೇಕ ಜನಪರ ಮಸೂದೆಗಳನ್ನು ಮಂಡಿಸಿ, ಸಾಚಾರ ವರದಿ ಮಂಡಿಸದೇ ಇರುವುದು ಖಂಡನೀಯವೆಂದಿದ್ದಾರೆ.
ಕಾಂಗ್ರೇಸ್ ಪಕ್ಷಕ್ಕೆ ಮುಸ್ಲಿಮರ ಜೀವನದ ಬಗ್ಗೆ ಅನುಕಂಪವಿದ್ದರೆ ಕೂಡಲೇ ಸುಗ್ರಿವಾಜ್ಞೆ ಮೂಲಕ ಸಾಚಾರ ವರದಿಯನ್ನು ಜಾರಿಗೊಳಿಸಬೇಕೆಂದು ಸಿ.ಪಿ.ಐ.ಎಂ.ಎಲ್ ಲಿಬರೇಷನ್ ಪಕ್ಷ ಒತ್ತಾಯಿಸಿದೆ.
0 comments:
Post a Comment