PLEASE LOGIN TO KANNADANET.COM FOR REGULAR NEWS-UPDATES

ಜಿಲ್ಲಾ ವಾರ್ತಾ ಇಲಾಖೆ ಕೊಪ್ಪಳ ಹಾಗೂ ದ್ವಾರಕಾ ಸಮುದಾಯ ಅಭಿವೃದ್ಧಿ ಸಂಸ್ಥೆ ಕೊಪ್ಪಳ ಇವರ ಸಂಯುಕ್ತ ಆಶ್ರಯದಲ್ಲಿ ಜಿಲ್ಲೆಯ ನಾಲ್ಕು ತಾಲೂಕುಗಳ ಆಯ್ದ ೬೦ ಗ್ರಾಮಗಳಲ್ಲಿ ೩೭೧(ಜೆ) ಕಲಮಿನ ಅನುಷ್ಠಾನದಿಂದ ಹೈ. ಕ. ೬ ಜಿಲ್ಲೆಗಳ ಅಭಿವೃದ್ಧಿಗೆ ವಿಶೇಷ ಸೌಲಭ್ಯ ಕುರಿತಂತೆ ಉದ್ಯೋಗ ಹಾಗೂ ಶಿಕ್ಷಣದಲ್ಲಿ ಮೀಸಲಾತಿ ಬಗ್ಗೆ ಜಾಗೃತಿ ಮೂಡಿಸುವ ತೀವ್ರ ಪ್ರಚಾರಾಂದೋಲನದ ಭಾಗವಾಗಿ ಬೀದಿ ನಾಟಕ ಹಾಗೂ ಜಾಗೃತಿ ಗೀತೆಗಳ ಕಾರ್ಯಕ್ರಮವನ್ನು ಫೆ. ೦೧ ರಿಂದ ಮಾ. ೦೨ರ ವರೆಗೆ ಹಮ್ಮಿಕೊಳ್ಳಲಾಗಿದೆ.
ದ್ವಾರಕಾ ಸಮುದಾಯ ಅಭಿವೃದ್ಧಿ ಸಂಸ್ಥೆಯ ಅಧ್ಯಕ್ಷ ಹಾಗೂ ಜಾನಪದ ಕಲಾವಿದ ವೈ. ಬಿ. ಜೂಡಿ ಅವರ ನಿರ್ದೇಶನದಲ್ಲಿ ಸರಕಾರದ ಜನಪರ ಯೋಜನೆಗಳಾದ ಅನ್ನ ಭಾಗ್ಯ, ಕ್ಷೀರ ಬಾಗ್ಯ, ವಸತಿ ಭಾಗ್ಯ, ಮನಸ್ವಿನಿ, ಮೈತ್ರಿ ಸೇರಿದಂತೆ ಮುಂತಾದ ಯೋಜನೆಗಳ ಕುರಿತು ಕಲಾವಿದರಾಗಿ ತಿಪ್ಪೇಸ್ವಾಮಿ ಮಡಿವಾಳರ, ಲಲಿತಾ ಪೂಜಾರ, ಚಿರಂಜವ್ವ, ಗ್ಯಾನೇಶ ಬಡಿಗೇರ, ಮಲ್ಲೇಶ, ಪ್ರಕಾಶ ಗಡಗಿ, ವಲಿಸಾಬ ಹೊಸಪೇಟೆ, ಕೊಟ್ರೇಶ ಲೆಕ್ಕಿಮರದ ಬೀದಿ ನಾಟಕ ಪ್ರದರ್ಶನ ನೀಡಿದರು.

Advertisement

0 comments:

Post a Comment

 
Top