PLEASE LOGIN TO KANNADANET.COM FOR REGULAR NEWS-UPDATES

  ಪತ್ರಿಕೊಧ್ಯಮದಲ್ಲಿ ಯುವ ಉತ್ಸಾಹಕನಾಗಿ ಕೆಲಸ ನಿರ್ವಹಿಸಿದ ಹೊಸ ದಿಗಂತ ಜಿಲ್ಲಾ ವರದಿಗಾರ ತಿಪ್ಪನಗೌಡ ಪಾಟೀಲ್ ಗುರುತಿಸಿ  ಅವರಿಗೆ ಶ್ರೀ ಗವಿಸಿದ್ಧೇಶ್ವರ  ಯುವ ಪ್ರಶಸ್ತಿ ನೀಡಿ ಗೌರವಿಸಲಾಯಿತು.
 ರವಿವಾರ ನಗರದ ಸಾಹಿತ್ಯ ಭವನದಲ್ಲಿ ಸ್ವರಭಾರತಿ  ಗ್ರಾಮೀಣಾಭಿವೃದ್ದಿ ಮತ್ತು ಸಾಂಸ್ಕೃತಿಕ ಸಂಸ್ಥೆ ಆಯೋಜಿಸಿದ್ದ ಜಿಲ್ಲಾ ಪ್ರಥಮ ಯುವ ಸಮ್ಮೇಳನದ ಕಾರ್ಯಕ್ರಮದಲ್ಲಿ ಶಾಸಕ ಕೆ.ರಾಘವೇಂದ್ರ ಹಿಟ್ನಾಳ, ಭಾಗಲಕೋಟೆ-ಚಿತ್ರದುರ್ಗಾ ಭೋವಿ ಗುರುಪೀಠದ ಜ.ಶ್ರೀ,  ಇಮ್ಮಡಿ ಸಿದ್ಧರಾಮೇಶ್ವರ ಮಹಾಸ್ವಾಮಿಗಳು ಸಮ್ಮೇಳನಾಧ್ಯಕ್ಷ  ವೀರಣ್ಣ ಮಡಿವಾಳ, ಹಿರಿಯ ಕವಿ,ಚಲನಚಿತ್ರ ನಿರ್ಧೆಶಕ ಹಾಗೂ ನಿರ್ಮಾಪಕ  ಸಿ.ವಿ.ಶಿವಶಂಕರ್ ಅವರು ಸನ್ಮಾನಿಸಿ ಪ್ರಶಸ್ತಿ ನೀಡಿ ಗೌರವಿಸಲಾಯಿತು.
 ಈ ಪ್ರಶಸ್ತಿಗೆ ಕೊಪ್ಪಳ ಪತ್ರಕರ್ತರ ಬಳಗಮತ್ತು ಹೊಸದಿಗಂತ ಬಳಗ,  ಸಾಹಿತಿಗಳು ಹಾಗೂ ಸ್ನೇಹಿತರ ಬಳಗ  ಹರ್ಷ ವ್ಯಕ್ತಪಡಿಸಿದರು.

Advertisement

0 comments:

Post a Comment

 
Top