PLEASE LOGIN TO KANNADANET.COM FOR REGULAR NEWS-UPDATES

 ೧೨-೨-೧೪ರ ಶುಕ್ರವಾರದಂದು ಸಿಟಿಜನ್ ಫಾರ ಅಕೌಂಟೆಬಲ್ ಗವರ‍್ನನ್ಸ್ (ಸಿ.ಎ.ಕ್ಯೂ) ವತಿಯಿಂದ ಕೊಪ್ಪಳ ನಗರದ ೩ ಚಹದ ಅಂಗಡಿಗಳಲ್ಲಿ ಬಿಜೆಪಿ ಪಕ್ಷದ ಬಿಂಬಿತ ಪ್ರಧಾನಿ ನರೇಂದ್ರ ಮೋದಿಯವರ ಚಹಾಪೆ ಚರ್ಚಾ ಕಾರ್ಯಕ್ರಮವನ್ನು ಸಂಜೆ ೫ ಗಂಟೆಗೆ ಹಮ್ಮಿಕೊಂಡಿದ್ದು,

 ಸದರಿ ಕಾರ್ಯಕ್ರಮವು ದೇಶದ ಸುಮಾರು ೧೦೦೦ ಕೇಂದ್ರಗಳ ೩೦೦ ನಗರಗಳಲ್ಲಿ ಒಂದೇ ದಿನ ಒಂದೇ ಸಮಯದಲ್ಲಿ ಚಹಾ ಮಾರುವುದೊಂದಿಗೆ ಹಾಗೂ ಉಪಸ್ಥಿತರಿರುವ ನಾಗರಿಕರೊಂದಿಗೆ ವಿಡಿಯೋ ಸಂದರ್ಶನ ಹಾಗೂ ಎಸ್‌ಎಂಎಸ್ ಮತ್ತು ವಾಟ್ಸ್ ಆಫ್ ಮೂಲಕ ನಮ್ಮೊಂದಿಗೆ ಬನ್ನಿ ೨೦೧೪ರ ಚುನಾವಣೆಯ ಕಾಯಕ ಸೂಚಿಯ ವಿಷಯಗಳ ಮತ್ತು ಆಧ್ಯತೆಗಳ ಬಗ್ಗೆ ಚರ್ಚಿಸುವ ವಿಷಯವಾಗಿ ನಗರದ ಬಸ್ ಸ್ಟ್ಯಾಂಡ್ ಎದುರಿಗೆ ಶ್ರೀನಿವಾಸ ಹೋಟೆಲ್, ಗಂಜ್ ಸರ್ಕಲ್‌ನಲ್ಲಿಯ ಧರ್ಮಶಾಸ್ತ್ರ ಹೋಟೆಲ್ ಹಾಗೂ ತಹಶೀಲ್ದಾರ ಕಛೇರಿಯ ಎದುರಿಗೆ ಹೋಟೆಲ್ ಗಾರ್ಡನ್ ಕೇಫೆ ಈ ಮೂರು ಚಹಾ ಅಂಗಡಿಗಳಲ್ಲಿ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಸಮಸ್ತ ಕೊಪ್ಪಳ ನಗರದ ಜನತೆ ಇದರ ಸದುಪಯೋಗ ಪಡೆದುಕೊಳ್ಳಬೇಕು. ಇದರ ನೇತೃತ್ವವನ್ನು ಸಿ.ಎ.ಜಿ ವಲಯ ಸಂಪನ್ಮೂಲ ವ್ಯಕ್ತಿಗಳಾದ ರವಿಕುಮಾರ ಗಾಯಕವಾಡ ವಹಿಸುತ್ತಾರೆ ಹಾಗೂ ಇದರ ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ರಾಜೂ ಬಾಕಳೆ, ಅಮೀತ್ ಕಂಪ್ಲಿಕರ್, ನಗರಸಭಾ ಸದಸ್ಯರಾದ ಪ್ರಾಣೇಶ ಮಾದನೂರ, ಪ್ರಾಣೇಶ ಮಹೇಂದ್ರಕರ ಮತ್ತು ಸಂಕೇತ ಪಟೇಲ್ ಇವರನ್ನು ಸಂಪರ್ಕಿಸಲು ಕೋರಲಾಗಿದೆ. (೮೦೫೦೦೪೫೬೯೯,೯೪೪೮೦೦೬೬೭೭) 

Advertisement

0 comments:

Post a Comment

 
Top