PLEASE LOGIN TO KANNADANET.COM FOR REGULAR NEWS-UPDATES

ಆಧ್ಯಾತ್ಮ ಮತ್ತು ಧರ್ಮಕ್ಕೆ ಸಂಬಂಧಿಸಿದ ಪುಸ್ತಕಗಳನ್ನು ರಾಜ್ಯದ ಫ್ರೌಢಶಾಲಾ ಗ್ರಂಥಾಲಯಗಳಿಗೆ ಸರಬರಾಜು ಮಾಡುವ ರಾಜ್ಯಸರ್ಕಾರದ ತೀರ್ಮಾನವನ್ನು ಭಾರತ ವಿದ್ಯಾರ್ಥಿ ಫೆಡರೇಷನ್(ಎಸ್.ಎಫ್.ಐ) ಕೊಪ್ಪಳ ಜಿಲ್ಲಾ ಸಮಿತಿಯು ತೀವ್ರವಾಗಿ ಖಂಡಿಸುತ್ತದೆ.
ಮನುವಿನ ವಿಚಾರಧಾರೆ, ಮನುಸ್ಮೃತಿಯಲ್ಲಿನ ಮುತ್ತಿನ ಮಾತುಗಳು, ವೈದಿಕ ಧರ್ಮದಲ್ಲಿ ಆತ್ಮ, ಬ್ರಹ್ಮ ಆಧ್ಯಾತ್ಮಿಕ ಚಿಂತನಧಾರೆ, ಅಗ್ನಿ ಸಹಸ್ರನಾಮ ಹಾಗೂ ಶ್ರೀಮದ್ ಭಗವದ್ಗೀತೆ ಸೇರಿದಂತೆ ಇನ್ನಿತರ ಸುಮಾರು ೮೪೯ ಪುಸ್ತಕಗಳನ್ನು ಪ್ರೊ.ಹಂಪಣ್ಣ ನೇತೃತ್ವದ ಸಮಿತಿಯು ಆಯ್ಕೆ ಮಾಡಿದೆ. ಡಾ.ಬಿ.ಆರ್ ಅಂಬೇಡ್ಕರ್, ಸಾವಿತ್ರಿ ಬಾ ಪುಲೆರವರಂತಹ ಮಹಾತ್ಮರು ಶತಮಾನದಲ್ಲಿ ಸುಟ್ಟುಹಾಕಿದಂತಹ ಮನುಸ್ಮೃತಿಯನ್ನು ವಿದ್ಯಾರ್ಥಿಗಳಿಗೆ ಭೋಧಿಸಲು ಮುಂದಾಗಿರುವುದು ನಾಚಿಕೆ ಕೇಡಿನ ಸಂಗತಿಯಾಗಿದೆ. ಬಿಜೆಪಿ ಅವಧಿಯಲ್ಲಿ ಆರ್.ಎಸ್.ಎಸ್. ಹಿನ್ನಲೆ ಇರುವ ಪ್ರೋ| ಹಂಪಯ್ಯರವರನ್ನು ನೇಮಿಸಿ ರಾಷ್ಟ್ರೋತ್ಥಾನದ ಪುಸ್ತಕಗಳನ್ನು ಬಿಜೆಪಿ ಸರಕಾರ ವಿತರಣೆ ಮಾಡಿತ್ತು. ಈಗ ಕಾಂಗ್ರೆಸ್ ಸರಕಾರ ಅದೇ ಮಾದರಿ ಅನುಸುತ್ತಿರುವುದು ಅಪಾಯಕಾರಿ ಬೆಳವಣಿಗೆಯಾಗಿದೆ.
ಶಿಕ್ಷಣ ಕ್ಷೇತ್ರದಲ್ಲಿ ಈ ಹಿಂದೆ ಬಿ.ಜೆ.ಪಿ ಸರ್ಕಾರ ೫ ಮತ್ತು ೮ನೇ ತರಗತಿಯ ಪಠ್ಯಪುಸ್ತಕಗಳನ್ನು ಪರಿಷ್ಕರಿಸುವ ಹೆಸರಿನಲ್ಲಿ ಧರ್ಮಾಂಧ ವಿಷಯಗಳನ್ನು ಭಿತ್ತುವ ಪ್ರಯತ್ನ ಮಾಡಿತ್ತು, ವೈಜ್ಞಾನಿಕ ವಿಷಯಗಳ ಬದಲಾಗಿ ಕೋಮುದ್ವೇಷದ ವಿಚಾರಗಳನ್ನು ಸೇರ್ಪಡೆ ಮಾಡಲಾಗಿತ್ತು. ಅಷ್ಟೇ ಅಲ್ಲದೇ ರಾಜ್ಯದ ಶಾಲೆಗಳಲ್ಲಿ ಭಗವದ್ಗೀತೆ ಕಂಠಪಾಠ ಅಭಿಯಾನದ ಮೂಲಕ ಶಾಲೆಗಳಲ್ಲಿ ಆರ್.ಎಸ್.ಎಸ್ ನ ವಿಚಾರಧಾರೆಗಳನ್ನು ವಿದ್ಯಾರ್ಥಿಗಳಿಗೆ ತುರುಕಲು ಮುಂದಾಗಿತ್ತು.
 ಬಿ.ಜೆ.ಪಿ ಸರ್ಕಾರದ ಅವಧಿಯಲ್ಲಾದ ತಪ್ಪುಗಳನ್ನು ಸರಿಪಡಿಸಿ ಶಿಕ್ಷಣ ಕ್ಷೇತ್ರವನ್ನು ಶುದ್ಧೀಕರಿಸಿ ವೈಚಾರಿಕ ಸಾಹಿತ್ಯಗಳನ್ನು ಗ್ರಂಥಾಲಯಗಳಿಗೆ ಸರಬರಾಜು ಮಾಡುವ ಬದಲು ಕೋಮುದ್ವೇಷವನ್ನು ಬಿತ್ತುವ ಪುಸ್ತಕಗಳನ್ನು ಸರಬರಾಜು ಮಾಡಲು ಮುಂದಾಗಿರುವುದು ಕಾಂಗ್ರೇಸ್ ಸರ್ಕಾರದ ಜಾತ್ಯಾತೀತ ನಿಲುವು ಏನೆಂಬುದು ಸಾಬೀತಾಗಿದೆ. ಶಿಕ್ಷಣ ಕ್ಷೇತ್ರದಲ್ಲಿ ಕೇಸರೀಕರಣದ ಪ್ರಕ್ರಿಯೆ ಮುಂದುವರೆದಿದ್ದು ಕಾಂಗ್ರೇಸ್ ಸರ್ಕಾರದ ಅವಧಿಯಲ್ಲೂ ವೈಚಾರಿಕ ಸಾಹಿತ್ಯಗಳನ್ನು ಮೂಲೆಗುಂಪು ಮಾಡುವ, ಮರೆ ಮಾಚುವ ಪ್ರಯತ್ನ ಮಾಡಲಾಗಿದೆ.
ಎಸ್.ಎಫ್.ಐ ನ ಬೇಡಿಕೆಗಳು:
ರಾಜ್ಯಸರ್ಕಾರ ಪ್ರೌಢಶಾಲಾ ಗ್ರಂಥಾಲಯಗಳಿಗೆ ಆರ್.ಎಸ್.ಎಸ್‌ನ ವಿಚಾರಧಾರೆಗಳಿರುವ ಪುಸ್ತಕಗಳನ್ನು ಸರಬರಾಜು ಮಾಡುವ ನಿರ್ಧಾರದಿಂದ ಹಿಂದೆ ಸರಿಯಬೇಕು.
ಮಕ್ಕಳಲ್ಲಿ ವೈಜ್ಞಾನಿಕ, ವೈಚಾರಿಕ, ಸ್ವಾಮರಸ್ಯ, ಸೌಹಾರ್ದತೆ ಮತ್ತು ಐಕ್ಯತೆಯನ್ನು ಗಟ್ಟಿಗೊಳಿಸುವಂತಹ ಪುಸ್ತಕಗಳನ್ನು ಗ್ರಂಥಾಲಯಗಳಿಗೆ ಸರಬರಾಜು ಮಾಡಬೇಕು.
ಆರ್.ಎಸ್.ಎಸ್ ನ ಹಿನ್ನಲೆಯಿರುವ ಪ್ರೊ. ಹಂಪಣ್ಣ ಸಮಿತಿಯನ್ನು ವಜಾಗೊಳಿಸಿ.
ಈ ಮೇಲಿನ ಬೇಡಿಕೆಗಳನ್ನು ಈಡೇರಿಸಬೇಕೆಂದು ಭಾರತ ವಿದ್ಯಾರ್ಥಿ ಫೆಡರೇಷನ್(ಎಸ್.ಎಫ್.ಐ) ಕೊಪ್ಪಳ ಜಿಲ್ಲಾ ಸಮಿತಿಯು ಪ್ರತಿಭಟನೆಯ ಮೂಲಕ ಆಗ್ರಹಿಸಿದೆ

ಶಿವಕುಮಾರ, ಶ್ರೀನಿವಾಸ, ಚನ್ನಪ್ಪ, ಶಾಂತಕುಮಾರ, ಸಂತೋಷ, ಮಾಬುಸಾಬ್, ಬಸವಾರಾಜ,ಶೌಕತ್‌ಅಲಿ, ಅಮರಪ್ಪ ಇನ್ನಿತರರು ಪ್ರತಿಭಟನೆಯಲ್ಲಿ ಪಾಲ್ಗೋಂಡಿದ್ದರು ಪ್ರತಿಭಟನೆಯು ಬಾಲಕ ಪದವಿ ಪೂರ್ವ ಕಾಲೇಜಿನಿಂದ ಅಶೋಕ್ ಸರ್ಕಲ್ ಮೂಲಕ ಬಿ.ಇ.ಒ. ಆಫೀಸ್ ಮುಂದೆ ಪ್ರತಿಭಟನೆ ಮಾಡಿ ಮನವಿ ಸಲ್ಲಿಸಲಾಯಿತು. 

Advertisement

0 comments:

Post a Comment

 
Top