ಕೊಪ್ಪಳ : ಕರ್ನಾಟಕದಾದ್ಯಂತ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಹಾಲಿ ಕಾರ್ಯನಿರ್ವಹಿಸುತ್ತಿರುವ ೧೦೬೫೩ ಅತಿಥಿ ಉಪನ್ಯಾಸಕರನ್ನು ಮುಂದಿನ ಶೈಕ್ಷಣಿಕ ಸಾಲಿಗೂ ಮುಂದುವರೆಸಲಾಗುವದು ಹಾಗೂ ಅವರ ವೇತನವನ್ನು ಸಹ ಹೆಚ್ಚಿಸಲಾಗಿದೆಯೆಂದು ಇತ್ತೀಚಿಗೆ ಮಾನ್ಯ ಉನ್ನತ ಶಿಕ್ಷಣ ಸಚಿವ ಆರ್.ವಿ.ದೇಶಪಾಂಡೆಯವರು ರಾಜ್ಯ ಅತಿಥಿ ಉಪನ್ಯಾಸಕರ ಸಂಘ ಹಾಗೂ ಭಾರತ ಪ್ರಜಾಸತ್ತಾತ್ಮಕ ಫೆಡರೇಶನ್ ಪದಾಧಿಕಾರಿಗಳ ನಿಯೋಗಕ್ಕೆ ಆಶ್ವಾಸನೆ ನೀಡಿದ್ದೂ ಸ್ವಾಗತಾರ್ಹ.
ಬೇಗನೇ ಈ ಮೌಖಿಕ ಆದೇಶ ಲಿಖಿತ ರೂಪವಾಗಿ ಜಾರಿಗೆ ಬರಬೇಕು. ಪ್ರತಿ ತಿಂಗಳು ಸಂಬಳ ಬರುವಂತಹ ವ್ಯವಸ್ಥೆ ಆಗಬೇಕು. ಹಾಗೇಯೇ ೮-೧೦ ವರ್ಷಗಳಿಂದಲೂ ಸೇವೆಸಲ್ಲಿಸಿದವರಿಗೆ ಖಾಯಾಂತಿ ಮಾಡುವ ಚಿಂತನೆಯನ್ನು ಸಹ ಮಾನ್ಯ ಸಚಿವರು ಮಾಡಬೇಕಾಗಿದೆ. ಹಲವು ದಿನಗಳಿಂದ ನಡೆಸುತ್ತಿರುವ ಹೋರಾಟಕ್ಕೆ ಸ್ಪಂಧಿಸಿದ ಉನ್ನತ ಶಿಕ್ಷಣ ಸಚಿವ ಆರ್.ವಿ.ದೇಶಪಾಂಡೆಯವರಿಗೆ ಕೊಪ್ಪಳ ಜಿಲ್ಲಾ ಅತಿಥಿ ಉಪನ್ಯಾಸಕ ಸಂಘದ ಜಿಲ್ಲಾಧ್ಯಕ್ಷ ಹಾಗೂ ರಾಜ್ಯ ಸಂಚಾಲಕ ವೀರಣ್ಣ ಸಜ್ಜನ, ಪದಾಧಿಕಾರಿಗಳಾದ ಕಲ್ಲೇಶ ಅಬ್ಬಿಗೇರಿ, ರವಿಹಿರೇಮಠ, ಅಶೋಕ ಎಕಲಾಸಪುರ, ಜ್ಞಾನೇಶಪತ್ತಾರ, ಪ್ರಕಾಶ ಜಡಿಯವರ, ಕೆಂಚಪ್ಪ ಹಾಲವರ್ತಿ, ಶಿವಮೂರ್ತಿ, ಮಂಜಪ್ಪ ಹೊಸುರು, ಡಾ.ಪ್ರಕಾಶ ಬಳ್ಳಾರಿ, ದೇವೆಂದ್ರಪ್ಪ ಅರ್ಕಸಾಲಿ, ಡಾ.ಗಿರಿಜಾತುರಮುರಿ, ಸಂತೋಷಿಬೆಲ್ಲದ ಅಬಿನಂಧಿಸಿದ್ದಾರೆ.
0 comments:
Post a Comment