PLEASE LOGIN TO KANNADANET.COM FOR REGULAR NEWS-UPDATES

 ಮರಳಿ ಹೋಬಳಿಯನ್ನು ನಿಯೋಜಿತ ಕಾರಟಗಿ ತಾಲೂಕಿಗೆ ಸೇರಿಸಲು ಹುನ್ನಾರ ನಡೆದಿರುವುದು ಖಂಡನೀಯವೆಂದು ಸಿ.ಪಿ.ಐ.ಎಂ.ಎಲ್., ಎ.ಐ.ಸಿ.ಸಿ.ಟಿ.ಯು. ಮತ್ತು ಅಖಿಲ ಭಾರತ ಕೃಷಿ ಕಾರ್ಮಿಕ ಸಂಘಟನೆಗಳ ಮುಖಂಡರಾದ ಎಂ.ವಿರುಪಾಕ್ಷಪ್ಪ, ಬಸನಗೌಡ ಸುಳೆಕಲ್ ಮತ್ತು ಎಂ.ಯೇಸಪ್ಪ ಹೊಸ್ಕೇರಾ   ತಿಳಿಸಿದ್ದಾರೆ. 
ಗಂಗಾವತಿ ನಗರಕ್ಕೆ ಹೊಂದಿಕೊಂಡಿರುವಂತಹ ಮರಳಿ ಹೋಬಳಿ ಕಾರಟಗಿಗೆ ಸೇರಿಸದೆ ಡಾಣಾಪುರ ಪಂಚಾಯತ್, ಹೊಸ್ಕೇರಾ ಪಂಚಾಯತ್, ಶ್ರೀರಾಮನಗರ ಪಂಚಾಯತ್‌ಗಳಿಗೆ ಗಂಗಾವತಿ ತಾಲೂಕು ಸಂಪರ್ಕ ಕಡಿದು ಹೋಗಿ ಕಂದಾಯ ಮತ್ತು ಇನ್ನೀತರೇ ಇಲಾಖೆಗಳಲ್ಲಿ ಕೆಲಸ ಮಾಡಿಕೊಳ್ಳಲು ಜನರಿಗೆ ತೊಂದರೆಯಾಗುತ್ತದೆ. ಗಂಗಾವತಿ ನಗರಕ್ಕೆ ಒಂದು ಕಿ.ಮೀ. ವ್ಯಾಪ್ತಿ ಮರಳಿ ಹೋಬಳಿ ಹೊಂದಿರುವುದು ಗಂಗಾವತಿ ನಗರದ ಮೇಲೆ ಇಲ್ಲಿನ ಜನ ಅವಲಂಬಿಸಿದ್ದಾರೆ. ಸರಕಾರ ಯಾವುದೇ ಕುತಂತ್ರದಿಂದ ಮರಳಿ ಹೋಬಳಿಯನ್ನು ನಿಯೋಜಿತ ಕಾರಟಗಿ ತಾಲೂಕಿಗೆ ಸೇರಿಸಿದರೆ ಸಿ.ಪಿ.ಐ.ಎಂ.ಎಲ್. ಪಕ್ಷ ಮತ್ತು ಅದರ ಅಂಗ ಸಂಘಟನೆಗಳು ಉಗ್ರವಾದ ಹೋರಾಟಗಳನ್ನು ಮಾಡುತ್ತವೆ ಎಂದು  ತಿಳಿಸಿದ್ದಾರೆ.

Advertisement

0 comments:

Post a Comment

 
Top