PLEASE LOGIN TO KANNADANET.COM FOR REGULAR NEWS-UPDATES

 ಜಿಲ್ಲಾ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯಿಂದ ಮಾನ್ಯತೆ ಪಡೆದ ಯುವಕ/ಯುವತಿ ಸಂಘಗಳ ಸಂಸ್ಥೆಗಳಿಗೆ ಹಾಗೂ ಯುವಕ/ಯುವತಿ ಪ್ರಶಸ್ತಿಗಳನ್ನು ನೀಡಲು ಅರ್ಹ ಯುವಕ/ಯುವತಿಯರಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ. 
ಈ ಪ್ರಶಸ್ತಿಯನ್ನು ಯುವಕ / ಯುವತಿಯರಿಗಾಗಿ ಹಾಗೂ ಸಂಘ ಸಂಸ್ಥೆಗಳು ಸಮಾಜ ಸೇವೆಯಲ್ಲಿ ಗಣನೀಯ ಸೇವೆ ಸಲ್ಲಿಸಿದ ಅದರಲ್ಲಿ ಸಮಾಜ ಸೇವೆ, ಸಾಂಸ್ಕೃತಿಕ ಕ್ರೀಡೆ ಪರಿಸರ, ಮತ್ತು ಇತರೆ ಕ್ಷೇತ್ರಗಳಲ್ಲಿ ಸೇವೆ ಮಾಡಿದಂತಹ ಯುವಕ ಯುವತಿಯರಿಗೆ ಸಂಘ ಸಂಸ್ಥೆಗಳಿಗೆ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ೧೫ ರಿಂದ ೩೫ ವರ್ಷ ವಯೋಮಿಯೊಳಗಿನ ಯುವಕ ಯುವತಿಯರು ಮತ್ತು ಸಂಘ ಸಂಸ್ಥೆಗಳು ಪ್ರಸಕ್ತ ಸಾಲಿನಲ್ಲಿ ಸೇವೆ ಸಲ್ಲಿಸಿದವರು ಮಾತ್ರ  ಅರ್ಜಿಗಳನ್ನು ಸಲ್ಲಿಸಬಹುದಾಗಿದೆ. ತಾವು ಮಾಡಿದ ಕಾರ್ಯಕ್ರಮಗಳ ಅನುಸಾರವಾಗಿ ಸಂಬಂಧಿಸಿದ ಕಾರ್ಯಕ್ರಮಗಳ ಪೋಟೋ, ದಿನ ಪತ್ರಿಕೆಯಲ್ಲಿ ಪ್ರಕಟವಾದ ವರದಿ, ಆಯಾ ಕಾರ್ಯಕ್ರಮಗಳ ಅನುಸಾರವಾಗಿ ತಿಂಗಳು ಮತ್ತು ದಿನಾಂಕವಾರು ೨೦೧೩-೧೪ ನೇ ಸಾಲಿನಲ್ಲಿ ಸಾದನೆ ಮಾಡಿದ ಮಾತ್ರ ಗಣನೆಗೆ ತೆಗೆದುಕೊಂಡು ಪ್ರಸ್ತಾವನೆ ಮಾತ್ರ ಸಲ್ಲಿಸಲು ಸೂಚಿಸಿದೆ. ಅಂತಹ ಪ್ರಸ್ತಾವನೆಗಳನ್ನು ಎ೪ ಸೈಜ್ ಅಳತೆಯ ಮೂಲ ಪ್ರತಿಯೊಂದಿಗೆ ಎರಡು ಪ್ರತಿಗಳೊಂದಿಗೆ ಫೆ.೨೫ ರ ಒಳಗಾಗಿ ಸಹಾಯಕ ನಿರ್ದೇಶಕರು, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಕೊಪ್ಪಳ ಈ ಕಾರ್ಯಾಲಯದಲ್ಲಿ ಸಲ್ಲಿಸಬಹುದಾಗಿದೆ. ಪ್ರಶಸ್ತಿ ಅರ್ಜಿ ನಮೂನೆಗಳನ್ನು ಈ ಕಾರ್ಯಾಲಯದಿಂದ ಪಡೆಯಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ಸಹಾಯಕ ನಿರ್ದೇಶಕರು, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಕೊಪ್ಪಳ ದೂರವಾಣಿ ಸಂಖ್ಯೆ : ೦೮೫೩೯-೨೦೧೪೦೦ ಗೆ ಸಂಪರ್ಕಿಸಬಹುದಾಗಿದೆ. 

Advertisement

0 comments:

Post a Comment

 
Top