ಕೊಪ್ಪಳ :
ಕರ್ನಾಟಕ ರಕ್ಷಣಾ ವೇದಿಕೆ (ಪ್ರವೀಣ ಶೆಟ್ಟಿ ಬಣ) ದ ಕೊಪ್ಪಳ ನಗರ ಘಟಕದ ಪೂರ್ವಬಾವಿ ಸಭೆಯನ್ನು ನಗರದ ಸಾರ್ವಜನಿಕ ಮೈದಾನದ ಬಯಲು ರಂಗ ಮಂದಿರದಲ್ಲಿ ದಿನಾಂಕ ೦೭-೦೨-೨೦೧೪ ರಂದು ಬೆಳಗ್ಗೆ ೧೧ ಗಂಟೆಗೆ ಕರೆಯಲಾಗಿತ್ತು ಸಭೆಯ ಅಧ್ಯಕ್ಷತೆಯನ್ನು ಕರವೇ ಹಿರಿಯ ಮುಖಂಡರಾದ ವಿರೇಶ ಹಾಲಸಮುದ್ರ ವಹಿಸಿದ್ದರು. ಮುಖ್ಯ ಅತಿಥಿಯಾಗಿ ಕರವೇ ತಾಲುಕ ಅಧ್ಯಕ್ಷರಾದ ಬಿ ಗಿರೀಶಾನಂದ ಜ್ಞಾನಸುಂದರ, ಹನಮೇಶ ಮ್ಯಾಗಳಮನಿ, ಆಗಮಿಸಿದ್ದರು. ಸಭೆಯಲ್ಲಿ ನಗರ ಘಟಕಕ್ಕೆ ಪಧಾದಿಕಾರಿಗಳನ್ನು ಆಯ್ಕೆ ಮಾಡಲಾಯಿತು.
ನಗರ ಅಧ್ಯಕ್ಷರಾಗಿ ರಿಯಾಜ್ ಕೊಪ್ಪಳ, ಉಪಾಧ್ಯಕ್ಷರಾಗಿ ಪ್ರಶಾಂತ ಶೇಳ್ಳಿ, ಮನ್ಸೂರ ಅಲಿ ಬೆಟಗೇರಿ, ಪ್ರಧಾನ ಕಾರ್ಯದರ್ಶಿಯಾಗಿ ಹನಮೇಶ ಬೂದಗುಂಪಾ, ಪ್ರಕಾಶ ಬೇಳೂರ, ಸಂಘಟನಾ ಕಾರ್ಯದರ್ಶಿಯಾಗಿ ಅಜರುದ್ದೀನ್ ಕುದರಿಮೋತಿ, ಕೃಷ್ಣಾ ಚೌಡಕಿ, ಖಜಾಂಚಿಯಾಗಿ ಫಕೀರಪ್ಪ ವಾಲ್ಮೀಕಿ, ಸದಸ್ಯರುಗಳಾಗಿ ಮಂಜುನಾಥ ಗುದಗಿ, ಗೌಸ ಹುಬ್ಬಳ್ಳಿ, ಗವಿಸಿದ್ದಪ್ಪ ಮೂಗಿನ್, ದತ್ತು ಕಿತ್ತೂರ, ಹೈದರಲಿ ಕುದರಿಮೋತಿ, ಬಿ. ಮದುಪ್ರಸಾದ, ಮಂಜು ಚೌಡ್ಕಿ, ಆಯ್ಕೆಯಾದರು. ನೂತನ ಪದಾಧಿಕಾರಿಗಳಿಗೆ ಕೊಪ್ಪಳ ತಾಲೂಕಾ ಅಧ್ಯಕ್ಷರಾದ ಬಿ ಗಿರೀಶಾನಂದ ಜ್ಞಾನಸುಂದರ ಸಂಘಟನೆಯ ಶಾಲು ಹಾಕಿ ಕನ್ನಡದ ದ್ವಜವನ್ನು ನೀಡುವ ಮುಖಾಂತರ ಪದಾಧಿಕಾರಿಗಳನ್ನು ಘೋಷಣೆ ಮಾಡಿದರು. ಸಭೆಯನ್ನುದ್ದೇಶಿಸಿ ಬಿ ಗಿರೀಶಾನಂದ ಜ್ಞಾನಸುಂದರ ಮಾತನಾಡಿ, ಕನ್ನಡ ನಾಡು ನುಡಿ ಬಾಷೆ ಬೆಳವಣಿಗೆಯ ಬಗ್ಗೆ ಎಲ್ಲ ಕನ್ನಡ ಮನಸುಗಳು ಒಗ್ಗೂಡಿಕೊಂಡು ಶ್ರಮಿಸಬೇಕು. ಯುವಕರಲ್ಲಿ ಹೆಚ್ಚಾಗಿ ದೇಶಾಭಿಮಾನ, ಕನ್ನಡಾಭಿಮಾನ ಬೆಳೆಸುವಲ್ಲಿ ಸಕ್ರೀಯವಾಗಿ ಸಂಘಟನೆಯಲ್ಲಿ ತೊಡಗಿಸಿಕೊಳ್ಳಬೇಕು. ತಾಯ್ನಾಡಿಗೆ, ಬಾಷೆಗೆ ದಕ್ಕೆಯಾದಾಗ ತತಕ್ಷಣ ಪ್ರತಿಭಟಿಸುವ ಮನೋಭಾವ ಎಲ್ಲರೂ ಬೆಳಸಿಕೊಳ್ಳಬೇಕು ಎಂದು ಕರೆ ನೀಡಿದರು.
ಕಾರ್ಯಕ್ರಮವನ್ನು ಬಿ ಮದುಪ್ರಸಾದ ನಿರೂಪಿಸಿದರು. ಹನಮೇಶ ಬೂದಗುಂಪಾ ವಂದಿಸಿದರು,
0 comments:
Post a Comment