PLEASE LOGIN TO KANNADANET.COM FOR REGULAR NEWS-UPDATES

 ಕೆ.ಎಫ್.ಸಿ.ಎಸ್.ಸಿ. ಭಾರತ ಗ್ಯಾಸ್ ಏಜೆನ್ಸಿ ಕೊಪ್ಪಳ ವ್ಯಾಪ್ತಿಯಲ್ಲಿನ ಪಟ್ಟಣ ಮತ್ತು ಗ್ರಾಮಾಂತರ ಪ್ರದೇಶದಲ್ಲಿ ಬರುವ ಎಲ್ಲಾ ಗೃಹ ಬಳಕೆ ಅನಿಲ ಸಿಲೆಂಡರ್ ಗ್ರಾಹಕರು ನಿಯಮಾವಳಿ ಪ್ರಕಾರ ಪ್ರತಿ ಎರಡು ವರ್ಷಗಳಿಗೆ ಒಮ್ಮೆ ಎಲ್ಲಾ ಗೃಹಬಳಕೆ ಅನಿಲ ಸಿಲೆಂಡರ್ ಸಂಪರ್ಕದಲ್ಲಿನ ಸುರಕ್ಷತಾ ವ್ಯವಸ್ಥೆ ಕುರಿತಂತೆ ಕಡ್ಡಾಯವಾಗಿ ತಪಾಸಣೆ ಮಾಡಬೇಕಾಗಿದ್ದು, ಗ್ರಾಹಕರು ಈ ಸೌಲಭ್ಯದ ಉಪಯೋಗವನ್ನು ತಪ್ಪದೆ ಪಡೆದುಕೊಳ್ಳಬೇಕು ಎಂದು ಕೆ.ಎಫ್.ಸಿ.ಎಸ್. ಭಾರತ ಗ್ಯಾಸ್‌ನ ಜಿಲ್ಲಾ ವ್ಯವಸ್ಥಾಪಕರು ಸೂಚನೆ ನೀಡಿದ್ದಾರೆ.  
    ಸುರಕ್ಷಿತ ಅನಿಲ ಸಿಲೆಂಡರ್ ಸಂಪರ್ಕಗಳಿಗೆ ಮಾತ್ರ ಸಿಲೆಂಡರ್ ಪೂರೈಕೆ ಮಾಡಲು ಹಾಗೂ ಅಸುರಕ್ಷಿತ ಸಂಪರ್ಕಕ್ಕೆ ಸಿಲಿಂಡರ್ ಪೂರೈಕೆ ಸ್ಥಗಿತಗೊಳಿಸಲು ಭಾರತ ಗ್ಯಾಸ್ ಕಂಪನಿಯಲ್ಲಿ ನಿಯಮ ರೂಪಿಸಿರುವುದರಿಂದ ಎಲ್ಲಾ ಗೃಹ ಬಳಕೆ ಅನಿಲ ಸಿಲೆಂಡರ್ ಗ್ರಾಹಕರು ತಪಾಸಣೆ ಮಾಡಿಸುವಂತೆ ಸೂಚನೆ ನೀಡಲಾಗಿದೆ. ಈಗಾಗಲೆ ಕೆ.ಎಫ್.ಸಿ.ಎಸ್.ಸಿ. ಭಾರತ ಗ್ಯಾಸ್ ಏಜೆನ್ಸಿ ಕೊಪ್ಪಳ ವ್ಯಾಪ್ತಿಯ ಎಲ್ಲಾ ಗೃಹಬಳಕೆ ಅನಿಲ ಸಂಪರ್ಕಗಳ ತಪಾಸಣೆ ಕಾರ್ಯನಿರ್ವಹಿಸಲು ಸಿಬ್ಬಂದಿಯವರನ್ನು ಅಧಿಕೃತವಾಗಿ ನಿಯೋಜಿಸಿದ್ದು, ಸಿಬ್ಬಂದಿಯವರಿಗೆ ಗುರುತಿನ ಪತ್ರ ಮತ್ತು ತಪಾಸಣಾ ಆದೇಶ ಪತ್ರ ನೀಡಲಾಗಿದೆ.  ಈ ತಪಾಸಣೆ ಸಿಬ್ಬಂದಿಯವರು ಪ್ರತಿ ಮನೆಗಳಿಗೆ ಭೇಟಿ ನೀಡಿ ಅನಿಲ ಸಿಲೆಂಡರ್ ಬಳಕೆಯ ಸುರಕ್ಷತಾ ನಿಯಮಗಳ ಕುರಿತು ಮಾಹಿತಿ ನೀಡುವುದರ ಜೊತೆಗೆ ಅನಿಲ ಸಿಲೆಂಡರ್ ಸಂಪರ್ಕವು ಸುರಕ್ಷಿತ ಅಥವಾ ಅಸುರಕ್ಷಿತ ಎಂಬುದರ ಬಗ್ಗೆ ಚಕ್‌ಲಿಸ್ಟ್‌ನಲ್ಲಿ ಗ್ರಾಹಕರಿಗೆ ವರದಿ ನೀಡುತ್ತಾರೆ. ಇದಕ್ಕೆ ಗ್ರಾಹಕರು ರೂ.೭೫/- ಶುಲ್ಕ ನೀಡಿ ರಶೀದಿ ಪಡೆಯಬೇಕು.   ಗ್ರಾಹಕರ ಸ್ಟೋವ್ ಮತ್ತು ರಬ್ಬರ್‌ಟ್ಯೂಬ ಪರಿಶೀಲಿಸಿ, ನಿಷೇದಿಸಲ್ಪಟ್ಟಿರುವ ಹಸಿರು ಬಣ್ಣದ ರಬ್ಬರ್‌ಟ್ಯೂಬ್ ಅಥವಾ ಪ್ಲಾಸ್ಟಿಕ್ ಟ್ಯೂಬ್‌ಗಳಿದ್ದಲ್ಲಿ ಅವುಗಳನ್ನು ಬದಲಾಯಿಸಿ ಕಂಪನಿಯಿಂದ ಶಿಫಾರಸ್ಸು ಮಾಡಿರುವ ಸುರಕ್ಷ ರಬ್ಬರ ಟ್ಯೂಬ್ ಅಳವಡಿಸಿ ಕೊಡುತ್ತಾರೆ. ಇದರ ಬೆಲೆ ರೂ.೧೯೦/- ಇದ್ದು ಗ್ರಾಹಕರು ಇದನ್ನು ಪಾವತಿಸಬೇಕು. ಗ್ರಾಹಕರ ಸ್ಟೋವ್ ದುರಸ್ಥಿ ಇದ್ದಲ್ಲಿ ಗ್ರಾಹಕರು ಒಪ್ಪಿಗೆ ಸೂಚಿಸಿದಲ್ಲಿ ಸ್ಟವ್ ದುರಸ್ಥಿ ಮಾಡಿಕೊಡಲಾಗುವುದು. ಇದಕ್ಕೆ ಪ್ರತ್ಯೇಕ ಶುಲ್ಕ ನೀಡಬೇಕಾಗುತ್ತದೆ.   ಗ್ರಾಹಕರಿಗೆ ಈ ಸಂಬಂಧ ಯಾವುದೇ ಅನುಮಾನ ಅಥವಾ ದೂರುಗಳಿದ್ದಲ್ಲಿ ದೂರವಾಣಿ ಸಂಖ್ಯೆ: ೦೮೫೩೯-೨೨೨೭೭೦, ಮೊ.೯೪೮೩೫೪೭೯೯೯, ೯೦೬೦೮೬೮೬೮೪ ಕ್ಕೆ ಸಂಪರ್ಕಿಸಬಹುದಾಗಿದೆ .

Advertisement

0 comments:

Post a Comment

 
Top