PLEASE LOGIN TO KANNADANET.COM FOR REGULAR NEWS-UPDATES

 ನಗರದ ರೈಲ್ವೆ ನಿಲ್ದಾಣದಲ್ಲಿ ನವೀಕರಣಗೊಂಡ ವಿಶ್ರಾಂತಿ ಗೃಹ ಪಾರ್ಕಿಂಗ್ ಮುಂತಾದ ಉದ್ಘಾಟನೆಗೆ ಆಗಮಿಸಿದ್ದ, ಹುಬ್ಬಳ್ಳಿಯ ನೈರುತ್ಯ ರೈಲ್ವೆ ಪ್ರಧಾನ ವ್ಯವಸ್ಥಾಪಕ ಪ್ರದೀಪಕುಮಾರ ಸಕ್ಸೇನಾ ಅವರಿಗೆ ಈ ಮಾರ್ಗದಲ್ಲಿ ಸಂಚರಿಸುವ ಎಕ್ಸಪ್ರೇಸ್ ರೈಲುಗಳಿಗೆ ಹೆಚ್ಚು ಜನರಲ್ ಬೋಗಿಗಳನ್ನು ಅಳವಡಿಸುವಂತೆ ರೈಲ್ವೆ ಜನಪರ ಹೋರಾಟ ಸಮಿತಿಯಿಂದ ಮನವಿ ಅರ್ಪಿಸಲಾಯಿತು. 
ರೈಲ್ವೆ ನಿಲ್ದಾಣದಲ್ಲಿ ಎರಡನೇ ಪ್ಲಾಟ ಫಾರ್ಮ ನಿರ್ಮಾಣ, ಮೇಲುಸೇತುವೆ (ಫುಟ್ ಓವರ ಬ್ರಿಡ್ಜ್) ಎರಡನೇ ಟಿಕೇಟ ಕೌಂಟರ, ಹೆಚ್ಚುವರಿ ಸಿಬ್ಬಂದಿ ನೇಮಕ, ಕುಡಿಯುವ ಶುದ್ದ ಸಿಹಿ ನೀರು ಪೂರೈಕೆ, ಹೊಸದಾಗಿ ಸ್ಥಾಪನೆಯಾದ ಪಾರ್ಕಿಂಗ್ ಜಾಗೆ ಪಕ್ಕದಲ್ಲಿ ಪ್ರಿ ಪೇಡ್ ಆಟೋ ರೀಕ್ಷಾ ನಿಲ್ದಾಣ, ಸಿ.ಟಿ.ಬಸ್ ನಿಲ್ದಾಣ ವಿಸ್ತರಣೆ, ಡಿಜಿಟಲ್ ಕೋಚ್ ಪೊಜಿಶನ್ (ಯಾವ ಗಾಡಿಯ ಬೋಗಿ ಎಲ್ಲಿಬಂದು ನಿಲ್ಲುತ್ತದೆಂದು ಸೂಚಿಸುವ ವ್ಯವಸ್ಥೆ). ಪ್ರಯಾಣೀಕರು ಕುಳಿತುಕೊಳ್ಳಲು ಹೆಚ್ಚಿನ ಆಸನಗಳನ್ನು ಅಳವಡಿಸುವದು, ರೈಲ್ವೆ ನಿಲ್ದಾಣದ ಮುಂಭಾಗದಲ್ಲಿ ಸ್ವಾಗತ ಕಮಾನ ಫಲಕ ನಿರ್ಮಿಸುವದು. ಹುಬ್ಬಳ್ಳಿ ಬಳಿಯ ಹೆಬಸೂರು ಹೊಸಪೇಟೆ ರೈಲು ಜೋಡಿ ಮಾರ್ಗ ನಿರ್ಮಾಣ ಕಾಮಗಾರಿ ತೀವ್ರವಾಗಿ ಮುಗಿಸುವಂತೆ, ಕೊಪ್ಪಳ ನಗರದ ಗೇಟ್ ಸಂಖ್ಯೆ: ೬೨ ಮತ್ತು ೬೪, ಭಾನಾಪೂರ ಗೇಟ್, ಗಿಣಿಗೇರಾ ಗೇಟ್‌ಗಳನ್ನು ಮೇಲು/ಕೆಳ ಸೇತುವೆಗಳನ್ನು ತ್ವರಿತವಾಗಿ ನಿರ್ಮಿಸಬೇಕೆಂದು ರೈಲ್ವೆ ಜನಪರ ಹೋರಾಟ ಸಮಿತಿಯ ಅಧ್ಯಕ್ಷ ಎಸ್.ಎ.ಗಫಾರ್ ಮನವಿ ಅರ್ಪಿಸಿದರು.
ಮನವಿ ಸ್ವೀಕರಿಸಿದ ಪ್ರದೀಪಕುಮಾರ ಸಕ್ಸೇನಾ ಅವರು ಆದಷ್ಟು ಬೇಗ ಜೋಡಿ ರೈಲು ಮಾರ್ಗ ಪೂರ್ಣಗೊಳಿಸುತ್ತೇವೆ. ನಂತರ ಹೆಚ್ಚಿನ ರೈಲುಗಳನ್ನು ಓಡಿಸುತ್ತೇವೆ. ಆಗ ಪುಟ್ ಓವರ ಬ್ರೀಡ್ಜ್ ಮತ್ತು ಎರಡನೇ ಪ್ಲಾಟ ಫಾರ್ಮ ನಿರ್ಮಿಸುತ್ತೇವೆ ಎಂದು ಹೇಳಿ ಯಾವ ಎಕ್ಸಪ್ರೇಸ್ ಗಾಡಿಗಳಿಗೆ ಹೆಚ್ಚಿನ ಜನರಲ್ ಬೋಗಿಗಳು ಅಳವಡಿಸಬೇಕೆಂದು ಕೇಳಿದಾಗ ಹಂಪಿ ಎಕ್ಸಪ್ರೇಸ್, ವಿಜಯವಾಡ ಎಕ್ಸಪ್ರೇಸ್, ಅಮರಾವತಿ ಎಕ್ಸಪ್ರೇಸ್ ಇನ್ನೂ ಮುಂತಾದ ಈ ಮಾರ್ಗದಲ್ಲಿ ಸಂಚರಿಸುವ ರೈಲುಗಳಿಗೆ ಹೆಚ್ಚಿನ ಬೋಗಿಗಳು ಅಳವಡಿಸುವಂತೆ ಮನವಿ ಮಾಡಿದರು. 

ಈ ಸಂದರ್ಭದಲ್ಲಿ ಅಖಿಲ ಭಾರತ ಕೃಷಿ ಕೂಲಿ ಕಾರ್ಮಿಕರ ಸಂಘದ ರಾಜ್ಯ ಸಂಘಟನಾ ಕಾರ್ಯದರ್ಶಿ ಡಾ|| ಕೆ.ಎಸ್.ಜನಾರ್ಧನ, ಅಖಿಲ ಭಾರತ ಕಾರ್ಮಿಕ ಸಂಘಟನೆಗಳ ಒಕ್ಕೂಟದ ಜಿಲ್ಲಾಧ್ಯಕ್ಷ ಬಸವರಾಜ ಶೀಲವಂತರ್, ದಲಿತ ವಿಮೋಚನೆಯ ಮಾನವ ಹಕ್ಕುಗಳ ವೇದಿಕೆ ಜಿಲ್ಲಾ ಸಂಘಟನಾ ಸಂಚಾಲಕ ಮೈಲಪ್ಪ ಬಿಸರಳ್ಳಿ, ಕರ್ನಾಟಕ ರಾಜ್ಯ ಕಟ್ಟಡ ಕಟ್ಟುವ ಮತ್ತು ಕಲ್ಲು ಒಡೆಯುವ ಕ್ವಾರಿ ಕಾರ್ಮಿಕರ ಸಂಘದ ಜಿಲ್ಲಾಧ್ಯಕ್ಷ ರಮೇಶ ಪಿ. ಚಿಕೇನಕೊಪ್ಪ, ಆದರ್ಶ ಕುಸ್ತಿ ಕ್ರೀಡಾಪಟುಗಳ ಸಂಘದ ಅಧ್ಯಕ್ಷ ಜಾಫರ ಅಲಿ ಪೈಲ್ವಾನ್, ಅಖಿಲ ಭಾರತ ಕಾರ್ಮಿಕ ಸಂಘಟನೆಗಳ ಒಕ್ಕೂಟದ ಮುಖಂಡರಾದ ಮಖಬೂಲ್ ರಾಯಚೂರ, ಶಿವಪ್ಪ ಹಡಪದ, ನನ್ನುಸಾಬ ನೀಲಿ, ಈರಪ್ಪ ಡೊಳ್ಳಿನ್ ಮುಂತಾದವರು ಭಾಗವಹಿಸಿದರು.  

Advertisement

0 comments:

Post a Comment

 
Top