ಕೊಪ್ಪಳ,ಜ.೨೯ ನಗರದ ೨೫ ನೇ ವಾರ್ಡಿನಲ್ಲಿ ಸುಮಾರು ೧೦-೧೨ ಸಿ.ಸಿ.ರಸ್ತೆಗಳು ಎರಡು ರಸ್ತೆಗಳ ಅಗಲಿಕರಣ ಹೊಸದಾಗಿ ಬೊರೆವೆಲ್ ಕೊರೆಯಿಸಿ ಪೈಪ್‌ಲೈನ್ ಅಳವಡಿಕೆ ಮತ್ತು ಶುದ್ಧ ಕುಡಿಯುವ ನೀರಿನ ಘಟಕಗಳು ಸೇರಿದಂತೆ ವಿವಿಧ ಕಾಮಗಾರಿಗಳ ಅಂದಾಜು ಪಟ್ಟಿ ತಯಾರಿಗೆ ಇದಕ್ಕೆ ತಗಲುವ ಸುಮಾರು ೧ ಕೋಟಿ ರೂ.ಗಳನ್ನು ಯು.ಆರ್.ಡಿ.ಸಿ ಯೋಜನೆಯಲ್ಲಿ ಕಾಮಗಾರಿಗಳನ್ನು ಪ್ರಾರಂಭಿಸಲು ಜಿಲ್ಲಾಧಿಕಾರಿಗಳಿಗೆ ಮತ್ತು ನಗರಸಭೆಯ ಪೌರಾಯುಕ್ತರಿಗೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ೨೫ ನೇ ವಾರ್ಡಿನ ನಗರಸಭಾ ಸದಸ್ಯೆ ವಿಜಯಾ ಎಸ್. ಹಿರೇಮಠ ತಿಳಿಸಿದ್ದಾರೆ.
ಅವರು ನಗರದ ವಾರ್ಡಿನ ವಿವಿದ ಸ್ಥಳಗಳಲ್ಲಿ ಸಂಚರಿಸಿ
ನಗರೋತ್ಥಾನದ ಬಾಕಿ ಇರುವ ಕಾಮಗಾರಿಗಳ ಪರಿಶೀಲಿಸಿದ ನಂತರ ಮಾತನಾಡಿದರು.
ಅತಿ ಅವಶ್ಯವಿರುವ ಕಾಮಗಾರಿಗಳನ್ನು ಸದರಿ ವಾರ್ಡಿನಲ್ಲಿ ಪರಿಶೀಲಿಸಲಾಗಿದ್ದು, ಕಾಮಗಾರಿಗಳನ್ನು ಅತೀ ತುರ್ತಾಗಿ ಪ್ರಾರಂಭಿಸಲು ಮನವಿ ಮಾಡಿಕೊಳ್ಳಲಾಗಿದೆ ಎಂದ ಅವರು, ಮರ್ದಾನಸಾಬ ಮನೆಯಿಂದ ಭಾಗ್ಯನಗರ ಕೂಡು ರಸ್ತೆವರೆಗೆ ಸಿ.ಸಿ. ರಸ್ತೆ ನಿರ್ಮಾಣ, ಭಾಗ್ಯನಗರ ರಸ್ತೆಯಿಂದ ಬುಜಂಗರಾವು ಮನೆಯಿಂದ ರಾಜ ಕಾಲುವೆವರೆಗೆ ಸಿ.ಸಿ.ರಸ್ತೆ ಮತ್ತು ಚರಂಡಿ ನಿರ್ಮಾಣ, ಆರ್. ಎಂ. ಬಾರ ಪಕ್ಕಕ್ಕೆ ಬುಜಂಗರಾವು ಮನೆವರೆಗೆ ನೂತನ ರಸ್ತೆ ನಿರ್ಮಾಣ, ಪವಾರ ಹಾರ್ಡವೇರ್‌ನಿಂದ ಭಾಗ್ಯನಗರ ಕೂಡು ರಸ್ತೆವರೆಗೆ, ಚರಂಡಿ, ಸಿಸಿ ರಸ್ತೆ ನಿರ್ಮಾಣ, ಕಿನ್ನಾಳ ರೈಲ್ವೆಗೇಟ್ ಟ್ರಾಕ್ ಮಾರ್ಗವಾಗಿ ರೈಲ್ವೆ ಸ್ಟೇಶನವರೆಗೆ ಜಂಗಲ್ ಕಟಿಂಗ್ ಕಾಮಗಾರಿ, ಮೆನರೋಡ್ (ಎನ್.ಎಚ್.೬೩) ಸ್ವಾತಿ ಬಾರ ಮಾರ್ಗವಾಗಿ ಮುಸ್ಲಿ ಪ್ರಾರ್ಥನಾ ಮಂದಿರದವರೆಗೆ ಚರಂಡಿ ಮತ್ತು ಸಿಸಿ. ರಸ್ತೆ, ನೀಲಂಲಾಡ್ಜ ಗೋಡೆಯಿಂದ ರಾಜಕಾಲುವೆಯರೆಗೆ ಚರಂಡಿ ಸಿ.ಸಿ.ರಸ್ತೆ ನಿರ್ಮಾಣ, ವೈದ್ಯರ ಮನೆಯಿಂದ ಮಡಿವಾಳ ಗವಿಸಿದ್ದಪ್ಪ ಮನೆವರೆಗೆ ಸಿಸಿ.ರಸ್ತೆ ನಿರ್ಮಾಣ, ಎನ್ ಜಿ.ಓ ಕಾಲೋನಿಗೆ ಹೋಗುವ ರಸ್ತೆಯಲ್ಲಿ ಸಿ.ಡಿ. ನಿರ್ಮಾಣ ಎನ್.ಜಿ.ಓ ಕಾಲೋನಿಯ ಒಳಗೆ ಸಿಸಿ.ರಸ್ತೆ ಚರಂಡಿ ನಿರ್ಮಾಣ ಅಲ್ಲದೆ ಸಿಂಡಿಕೇಟ್ ಬ್ಯಾಂಕ ನಿಂದ ಸ್ವಾತಿ ಭಾರವರೆ ಎನ್.ಎಚ್.೬೩ ಮುಖ್ಯರಸ್ತೆಯಿಂದ ಕ್ಲಬ್ ರಸ್ತೆವರೆಗೆ ರಸ್ತೆ ಅಗಲಿಕರಣ ಗೊಳಿಸುವುದು. ಬುಜಂಗರಾವು ಮನೆಯ ಹತ್ತಿರ ಹಾಗೂ ಭಾಗ್ಯನಗರ ರೋಡ ಪಕ್ಕದ ಮಾರುತೆಪ್ಪ ಮನೆ ಪಕ್ಕ ಹೊಸ ಬೋರಗಳನ್ನು ಕೊರೆಯಿಸಿ ಮೊಟರ ಅಳವಡಿಸಿ ಪೈಪ್‌ಲೈನ್ ಕಾಮಗಾರಿ ಕೈಗೆತ್ತಿಕೊಳ್ಳವುದು ಮತ್ತು ರೈಲ್ವೆ ಕ್ವಾಟರ್ಸ್ ಹತ್ತಿರ ಹಾಗೂ ರಾಂಪೂರ ದವಾಖಾನೆ ಹತ್ತಿರ ಎರಡು ಶುದ್ಧ ಕುಡಿಯುವ ನೀರಿನ ಘಟಕಗಳನ್ನು ಪ್ರಾರಂಭಿಸುವುದು ಸೇರಿದಂತೆ ವಾರ್ಡಿನಲ್ಲಿ ಅನೇಕ ಕಾಮಗಾರಿಗಳನ್ನು ಪ್ರಾರಂಭಿಸಲಾಗುವುದೆಂದು ಸದಸ್ಯೆ ವಿಜಯಾ ಹಿರೇಮಠ ಹೇಳಿದರು.ಈ ಸಂದರ್ಭದಲ್ಲಿ ವಾರ್ಡಿನ ನಾಗರಿಕರಾದ ಖಾಸಿಂಸಾಬ್ ಮೇಸ್ತ್ರಿ, ಉದಯನಂದ ಬಣಗಾರ, ನಾಗರಾಜ ಚಿತ್ರಗಾರ, ಪರಮಾನಂದ ಯಾಳಗಿ, ಅಮರೇಗೌಡರ್, ಮರ್ದಾನಸಾಬ್ ಕಾತರಕಿ, ಮುನ್ನಾ, ಹನುಮಂಗಪ್ಪ ಹೊಸಳ್ಳಿ, ಶಿವರಾಜ ಮ್ಯಾಗಳಮನಿ, ರಾಜುನಾಯಕ, ರೌಫ್‌ಖಾದ್ರಿ ಮುಂತಾದವರು ಉಪಸ್ಥಿತರಿದ್ದರು.
0 comments:
Post a Comment