PLEASE LOGIN TO KANNADANET.COM FOR REGULAR NEWS-UPDATES

 ೨೬ ರಂದು ಸಂಚಾರಿ ಪೊಲೀಸ್ ಠಾಣೆ ಹೊಸಪೇಟೆ, ಜಿ.ಎಂ.ಆರ್. ವರಲಕ್ಷ್ಮೀ ಫೌಂಡೇಶನ್ ಹೊಸಪೇಟೆ ಮತ್ತು ಶ್ರೀ ಕಾರ್ಗಿಲ್ ಮಲ್ಲಯ್ಯ ಅಂಗವಿಕಲರ ಸಂಘ ಅಳವಂಡಿ ಸಹಯೋಗದಲ್ಲಿ ೨೫ನೇ ರಾಷ್ಟ್ರೀಯ ರಸ್ತೆ ಸುರಕ್ಷತಾ ಸಪ್ತಾಹ ನಿಮಿತ್ಯ ಹೊಸಪೇಟೆ ನಗರದ ಬಸ್ ನಿಲ್ದಾಣದ ಹತ್ತಿರ ಮತ್ತು ಮೂರು ಅಂಗಡಿ ಸರ್ಕಲ್ ಹತ್ತಿರ ಜನಜಾಗೃತಿ ಬೀದಿ ನಾಟಕ ಕಲಾವಿದರಾದ ಸಿದ್ದಲಿಂಗಯ್ಯ ಗೊರ್ಲೆಕೊಪ್ಪ, ಹನುಮಂತಪ್ಪ ಎಲಿಗಾರ, ವೀರೇಶ ಹಾಲಗುಂದಿ, ಶೇಖಪ್ಪ ಶೆಟ್ಟರ್, ಬಸಪ್ಪ ಪಾಗಳಿ, ಈಶ್ವರಯ್ಯ ಹಿರೇಮಠ, ಗ್ಯಾನೇಶ ಬಡಿಗೇರ, ಮತ್ತು ನಿಂಗಮ್ಮ ನಿಲಣ್ಣನವರ ಇವರುಗಳು ಲೈಸನ್ಸ್ ಇಲ್ಲದೆ ವಾಹನ ಚಲಾಯಿಸುವುದು, ಹೆಲ್ಮೆಟ್ ಇಲ್ಲದೆ ದ್ವಿಚಕ್ರವಾಹನ ಓಡಿಸುವು

ದು, ಮೂರು ಜನರು ಒಂದೆ ದ್ವಿಚಕ್ರವಾಹನದಲ್ಲಿ ಪ್ರಯಾಣಿಸುವುದು ಮತ್ತು ರಸ್ತೆಯ ನಿಯಮಗಳನ್ನು ಉಲ್ಲಂಘಿಸಿ ವಾಹನ ಚಲಯಿಸುವುದು ಕಾನೂನಿನ ಪ್ರಕಾರ ಅಪರಾಧ ಹಾಗೂ ಕಾನೂನಿನ ನೀತಿ ನಿಯಮಗಳನ್ನು ಸರಿಯಾಗಿ ಪಾಲಿಸಿದರೆ ಅಪಘಾತದಿಂದ ಪಾರಾಗಿ ಉತ್ತಮ ಜೀವನ ನಡೆಸಬಹುದು ಎಂಬುದರ ಬಗ್ಗೆ ಬೀದಿ ನಾಟಕ ಪ್ರದರ್ಶನ ಮಾಡಲಾಯಿತು. ಈ ಕಾರ್ಯಕ್ರಮದಲ್ಲಿ ಸಲೀಂಪಾಷಾ ಪೊಲೀಸ್ ಇನ್ಸೆಪೆಕ್ಟರ್ ಸಂಚಾರಿ ಪೊಲೀಸ್ ಠಾಣೆ ಹೊಸಪೇಟೆ, ಮತ್ತು ಸಿಬ್ಬಂಧಿಗಳು ಹಾಗೂ ವೀರೇಶ.ಎಮ್.ಯು., ಹನುಮೇಶ, ಜಿ.ಎಂ.ಆರ್. ಸಿಬ್ಬಂಧಿಗಳು ಭಾಗವಹಿಸಿದ್ದರು.

Advertisement

0 comments:

Post a Comment

 
Top