PLEASE LOGIN TO KANNADANET.COM FOR REGULAR NEWS-UPDATES

ಕೊಪ್ಪಳ ೨೬ : ಕೊಪ್ಪಳ ಸಮೀಪದ ಭಾಗ್ಯನಗರದ ಜ್ಞಾನ ಬಂಧು ಕಿರಿಯ ಪ್ರಾಥಮಿಕ ಶಾಲೆಯಲ್ಲಿ ೬೫ನೇ ಗಣರಾಜ್ಯೋತ್ಸವನ್ನು ಸಂಸ್ಥೆಯ ಅಧ್ಯಕ್ಷರಾದ ದಾನಪ್ಪ ಜಿ. ಕವಲೂರ ಹಾಗೂ ಮುಖ್ಯೋಪಾಧ್ಯಾಯರಾದ ಪ್ರಶಾಂತ ಕುಲಕರ್ಣಿ ಗಾಂಧೀಜಿ ರವರ ಭಾವಚಿತ್ರಕ್ಕೆ ಪೂಜೆ ಮಾಡುವದರ ಮೂಲಕ ಧ್ವಜಾರೋಹಣ ಆಚರಿಸಲಾಯಿತು.
ಸಂಸ್ಥೆಯ ಅಧ್ಯಕ್ಷರಾದ ದಾನಪ್ಪ ಜಿ. ಕವಲೂರ ರವರು ಈ ೬೫ನೇ ಗಣರಾಜ್ಯೋತ್ಸವದ ಹಿನ್ನೇಲೆಯ ಬಗ್ಗೆ ಶಾಲೆಯ ಮಕ್ಕಳಿಗೆ ಡಾ. ಅಂಬೇಡ್ಕರ್ ರವರು ಸಂವಿದಾನದ ರಚನೆಯ ಮಾಡಿದರ ಬಗ್ಗೆ ಸವಿವರವಾಗಿ ಮಕ್ಕಳಿಗೆ ತಿಳಿಹೇಳಿದರು.  ಮಕ್ಕಳಿಗೆ ಹಾಗೂ ಶಾಲಾವೃಂದಕ್ಕೆ ಗಣರಾಜ್ಯೋತ್ಸವದ ಶುಭಾಷಯ ಹೇಳಿದರು.  
ಗಣರಾಜ್ಯೋತ್ಸವ ದಿನಾಚರಣೆಯ ವಿಶೇಷವೆಂದರೆ ಹಲವಾರು ರಾಷ್ಟ್ರ ನಾಯಕರ ಪಾತ್ರಧಾರಿಗಳಾಗಿ ಹತ್ತು ವಿದ್ಯಾರ್ಥಿಗಳ ಸ್ಥಬ್ಧ ಚಿತ್ರಗಳು ಶಾಲಾ ಆವರಣದಿಂದ ಟ್ರ್ಯಾಕ್ಟರ್‌ನ್ನು ಅಲಂಕರಿಸಿ ನಗರದ ಪ್ರಮುಖ ಬೀದಿಗಳಲ್ಲಿ ಪ್ರದರ್ಶನಗೊಂಡು ನಂತರ ಮೈದಾನ ಪ್ರವೇಶಗೊಂಡು ಊರಿನ ಗಣ್ಯರಿಂದ ಉತ್ತಮ ಪ್ರದರ್ಶನ ವೆಂದು ಹೊಗಳಿದರು.  ನಂತರ ಗ್ರಾಮ ಪಂಚಾಯತಿ ವತಿಯಿಂದ ಉತ್ತಮ ಸ್ಥಬ್ಧ ಚಿತ್ರಕ್ಕೆ ಬಹುಮಾನಕ್ಕೆ ಪಾತ್ರವಾಯಿತು.






Advertisement

0 comments:

Post a Comment

 
Top