PLEASE LOGIN TO KANNADANET.COM FOR REGULAR NEWS-UPDATES

 ಗಂಗಾವತಿ:- ನಗರದ ಐ.ಎಂ.ಎ. ಸಭಾಂಗಣ, ಗಂಗಾವತಿಯಲ್ಲಿ ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ ನಿ, ಬೆಂಗಳೂರು ಕೊಪ್ಪಳ ಜಿಲ್ಲಾ ಸಹಕಾರ ಯೂನಿಯನ್ ನಿ, ಕೊಪ್ಪಳ ಹಾಗೂ ಸಹಕಾರ ಇಲಾಖೆ, ಕೊಪ್ಪಳ ಹಾಗೂ ಹಾಲು ಒಕ್ಕೂಟ, ಬಳ್ಳಾರಿ. ಇವರುಗಳ ಸಂಯುಕ್ತ ಆಶ್ರಯದಲ್ಲಿ ಸನ್-೨೦೧೩-೧೪ ನೇ ಸಾಲಿನಲ್ಲಿ ಚುನಾವಣೆ ಜರುಗಲಿರುವ ಸಹಕಾರ ಸಂಘಗಳ ಕಾರ್ಯದರ್ಶಿಗಳಿಗೆ ಹಾಗೂ ಚುನಾವಣಾಧಿಕಾರಿಗಳಿಗೆ ಚುನಾವಣಾ ಪ್ರಕ್ರಿಯೆಗಳ ಪೂರ್ವ ಸಿದ್ಧತೆ ಕುರಿತು ಒಂದು ದಿನದ ತರಬೇತಿ ಕಾರ್ಯಗಾರವನ್ನು ಏರ್ಪಡಿಸಲಾಗಿತ್ತು.
ಕಾರ್ಯಕ್ರಮವನ್ನು ಉದ್ಘಾಟಿಸಿದ   ಎಂ. ಸತ್ಯನಾರಾಯಣ. ಅಧ್ಯಕ್ಷರು, ಹಾಲು ಒಕ್ಕೂಟ ನಿ., ಬಳ್ಳಾರಿ. ಇವರು ಮಾತನಾಡುತ್ತಾ ೯೭ನೇ ಸಂವಿಧಾನ ತಿದ್ದುಪಡಿ ಹಿನ್ನಲೆಯಲ್ಲಿ ಸಹಕಾರ ಕಾಯ್ದೆಗೆ ಬದಲಾವಣೆಯಾಗಿದ್ದು, ಬದಲಾದ ಕಾಯೆಗೆ ಅನುಗುಣವಾಗಿ ಸಹಕಾರ ಸಂಘಗಳ ಚುನಾವಣಾ ಪ್ರಕ್ರಿಯೆಯಲ್ಲಿ ಸಾಕಷ್ಟು ಬದಲಾವಣೆಯಾಗಿದ್ದು. ಬದಲಾದ ಕಾಯ್ದೆಗೆ ಅನುಗುಣವಾಗಿ ಸಹಕಾರ ಸಂಘಗಳ ಚುನಾವಣಾಧಿಕಾರಿಗಳು ಹಾಗೂ ಕಾರ್ಯದರ್ಶಿಗಳು ದಕ್ಷತೆಯಿಂದ ಕಾರ್ಯನಿರ್ವಹಿಸಿ ಚುನಾವಣೆಗಳನ್ನು ಯಶಸ್ವಿಗೊಳಿಸಲು ಈ ದಿನದ ತರಬೇತಿಯ ಅಂಶಗಳನ್ನು ಚುನಾವಣಾ ಪ್ರಕ್ರಿಯೆಯಲ್ಲಿ ಅಳವಡಿಸಿಕೊಂಡು ಚುನಾವಣೆಗಳನ್ನು ಯಶಸ್ವಿಯಾಗಿ ಜರುಗಿಸಲು ಕರೆ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಂ. ಚನ್ನನಗೌಡ್ರು. ನಿರ್ದೇಶಕರು, ಜಿಲ್ಲಾ ಸಹಕಾರ ಯೂನಿಯನ್ ನಿ., ಕೊಪ್ಪಳ ಇವರು ವಹಿಸಿದ್ದರು. ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ ಜಿಲ್ಲಾ ಸಹಕಾರ ಯೂನಿಯನ್ ಜಿಲ್ಲೆಯ ಸಹಕಾರ ಕ್ಷೇತ್ರದ ಅಭಿವೃದ್ಧಿಗಾಗಿ ಇಲ್ಲಿಯವರೆಗೆ ಅನೇಕ ರೀತಿಯ ತರಬೇತಿ ಕಾರ್ಯಕ್ರಮವನ್ನು ಜರುಗಿಸುತ್ತಾಬಂದಿದ್ದು, ೯೭ನೇ ತಿದ್ದುಪಡಿ ಹಿನ್ನಲೆಯಲ್ಲಿ ಸಹಕಾರ ಕಾಯ್ದೆಗೆ ಸಾಕಷ್ಟು ಬದಲಾವಣೆಯಾಗಿದ್ದು, ಬದಲಾದ ಕಾಯ್ದೆಗೆ ಅನುಗುಣವಾಗಿ ಈ ಸಾರಿಯ ಚುನಾವಣೆಗಳನ್ನು ಏರ್ಪಡಿಸಬೇಕಾಗಿದೆ. ಆ ನಿಟ್ಟಿನಲ್ಲಿ ತರಬೇತಿ ಕಾರ್ಯಕ್ರಮವನ್ನು ಏರ್ಪಡಿಸಲಾಗಿದ್ದು, ಇದರ ಸದುಪಯೋಗ ಪಡೆದುಕೊಳ್ಳಲು ಕರೆ ನೀಡಿದರು.
ಕಾರ್ಯಕ್ರಮದ ಮುಖ್ಯತಿಥಿಗಳಾದ   ಕೆ. ಮುನಿಯಪ್ಪ. ಉಪನಿಬಂಧಕರು, ಸಹಕಾರ ಸಂಘಗಳು ಕೊಪ್ಪಳ, ಇವರು ಸಹಕಾರ ಸಂಘಗಳ ಚುನಾವಣೆಗಳನ್ನು ಯಾವುದೇ ಲೋಪದೋಷಗಳಿಲ್ಲದಂತೆ ಸಹಕಾರ ಕಾಯ್ದೆಗೆ ಅನುಗುಣವಾಗಿ ವ್ಯವಸ್ಥಿತವಾಗಿ ಜರುಗಿಸಬೇಕೆಂದು ತಿಳಿಸಿದರು. ಕಾರ್ಯಕ್ರಮದಲ್ಲಿ   ಎಸ್.ಕೆ. ಸಿದ್ನೆಕೊಪ್ಪ. ಸಹಾಯಕ ನಿಬಂಧಕರು, ಸಹಕಾರ ಸಂಘಗಳು ಕೊಪ್ಪಳ. ಇವರು ಮಾತನಾಡಿದರು. 
ಕಾರ್ಯಕ್ರಮದ ವೇದಿಕೆಯಲ್ಲಿ ಜಿಲ್ಲಾ ಸಹಕಾರ ಯೂನಿಯನ್ ನಿ., ಕೊಪ್ಪಳ ಇದರ ನಿರ್ದೇಶಕರಾದ   ಹೆಚ್. ವೀರೇಶಪ್ಪ ಮಲ್ಲಪ್ಪ. ಜಿಲ್ಲಾ ಸಹಕಾರ ಯೂನಿಯನ್ನಿನ ಮುಖ್ಯಕಾರ್ಯನಿರ್ವಹಣಾಧಿಕಾರಿಗಳಾದ ಶ್ರೀ ಶರಣಬಸಪ್ಪ ಕಾಟ್ರಳ್ಳಿ. ಹಾಗೂ ಎಲ್ಲಾ ತಾಲೂಕುಗಳ ಸಹಕಾರ ಅಭಿವೃದ್ಧಿ ಅಧಿಕಾರಿಗಳು,   ಜಿ.ಆಯ್. ಪಡಸಲಗಿ. ಏರಿಯಾ ಮ್ಯನೇಜರ್ ಹಾಲು ಒಕ್ಕೂಟ ಹಾಗೂ ಒಕ್ಕೂಟದ ಕೊಪ್ಪಳ ಜಿಲ್ಲೆಯ ವಿಸ್ತರಣಾಧಿಕಾರಿಗಳು, ಚುನಾವಣಾ ಜರುಗುವ ಸಹಕಾರ ಸಂಘಗಳ ಕಾರ್ಯದರ್ಶಿಗಳು ಹಾಗೂ ಚುನಾವಣಾ ಅಧಿಕಾರಿಗಳು   ದಸ್ತಗಿರಿ ಅಲಿ.  ಉಪಸ್ಥಿತರಿದ್ದರು. 
ನಂತರ ಜರುಗಿದ ಉಪನ್ಯಾಸ ಕಾರ್ಯಕ್ರಮಗಳಲ್ಲಿ   ಶಶಿಧರ ಎಲೆ. ನಿವೃತ್ತ ಅಪರ ನಿಬಂಧಕರು, ಬೆಂಗಳೂರು ಹಾಗೂ  ಎಸ್.ಕೆ. ಸಿದ್ನೆಕೊಪ್ಪ. ಸಹಾಯಕ ನಿಬಂಧಕರು, ಸಹಕಾರ ಸಂಘಗಳು ಕೊಪ್ಪಳ ಹಾಗೂ  ಎಲ್.ಬಿ. ವಿವೇಕಿ. ನಿವೃತ್ತ ಸಹಕಾರ ಅಭಿವೃದ್ಧಿ ಅಧಿಕಾರಿಗಳು, ಕೊಪ್ಪಳ ರವರು ಉಪನ್ಯಾಸ ನೀಡಿದರು.
ಪ್ರಾರಂಭದಲ್ಲಿ   ಎಸ್.ಎಲ್. ಕುಲಕರ್ಣಿ. ಎಂ.ಪಿ.ಸಿ.ಎಸ್., ಮರಳಿ. ಪ್ರಾರ್ಥಿಸಿದರು. ಜಿಲ್ಲಾ ಸಹಕಾರ ಯೂನಿಯನ್ ನಿ., ಕೊಪ್ಪಳ ಮುಖ್ಯಕಾರ್ಯನಿರ್ವಹಣಾಧಿಕಾರಿಗಳಾದ   ಶರಣಬಸಪ್ಪ ಕಾಟ್ರಳ್ಳಿ ರವರು ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ಕೊನೆಯಲ್ಲಿ  ಗವಿಸಿದ್ದಯ್ಯ ಹಿರೇಮಠ. ದ್ವಿ.ದ.ಸ. ವಂದಿಸಿದರು.

Advertisement

0 comments:

Post a Comment

 
Top