PLEASE LOGIN TO KANNADANET.COM FOR REGULAR NEWS-UPDATES



 ಮೊನ್ನೆ ವಾರ್ತಾ ಇಲಾಖೆಯವರು ನೀವು ಸಮಾಜಿಕ ಸಮಸ್ಯೆ, ಪರಿಸರಕ್ಕೆ ಸಂಬಂಧಿಸಿದ ಲೇಖನ ಬರೆದಿದ್ದರೆ ಅರ್ಜಿ ಹಾಕಿ ನಿಮಗ ಇಲಾಖೆಯಿಂದ ಒಂದ ಪ್ರಶಸ್ತಿ ಕೊಡತ್ತಿವಿ ಎಂದು ಮಾಧ್ಯಮ ಪ್ರತಿನಿಧಿಗಳಿಗೆ ಮನವಿ ಮಾಡಿಕೊಳ್ಳುವ ಪೇಪರ ಸ್ಟೆಟ್‌ಮೆಂಟ್ ಕೊಟ್ಟಿದ್ದರು.  ಅದನ್ನ ನೋಡಿದ ನಮ್ಮ ಕೆಲವು ಪತ್ರಕರ್ತರು ಹಿಂದ ತಾವೇನು ಬರೆದಿವಿ.. ಅದರಾಗ ಪ್ರಶಸ್ತಿ ಬರೊಂತವು ಏನಾದರು ಲೇಖನ ಇವೆ ಅಂತ ಹುಡಕಾಡುತ್ತಿದ್ದರು, ಅದು ಅವರ ಸಾಧನೆಗೆ ಒಂದ್ ಗೌರವ ಸಿಗಲಿ ಎಂಬ ಆಸೆಯಿಂದ.
 ಅದ ರೀತಿ ಇನ್ನ ಕೆಲವು ಗೆಳೆಯರು ತಾವು ಬರೆದಿದ್ದ ಚೋಲೊ ಐತಿ ಅನಕೊಂಡು ತಮ್ಮ ಲೇಖನದ ಜತಗೆ ಸ್ಥಳೀಯ ಎಂಎಲ್‌ಎ. ಹಿರಿಯ ಪತ್ರಕರ್ತರ ಶಿಫಾರಸ್ಸು ಬರೆಸಿಕೊಂಡು ಅರ್ಜಿ ಹಾಕೊದಕ್ಕೆ ತಯಾರಿ ನಡೆಸಿದ್ದರು,  ಆಗ ಅದರಲ್ಲಿ ಕೆಲವರು ನೀವು ಏನೇನ ಬರೆತ್ತಿರಲ್ಲಾ ನೀವು ಅರ್ಜಿ ಹಾಕಿರಿ ಮತ್ತ ಎಂದು ಅಡ್ವೈಜ್ ಮಾಡಿದರು. 
 ಮೇಲಿನ ವಿಷಯ ಹೇಳಿದ್ದರಲ್ಲಿ ಪೂರ್ಣ ಇದೆ ರೀತಿ ಇರಲಿಕ್ಕಿಲ್ಲ ಆದರೆ ಇತ್ತೀಚಿಗೆ ಪ್ರಶಸ್ತಿಗಾಗಿ ನಡೆಯುವ ಲಾಭಿ ಮಾತ್ರ ಇದೆ ರೀತಿ ಇರುತ್ತದೆ. ಅದರಲ್ಲಿಯೂ ಇಂದಿನ ದಿನಗಳಲ್ಲಿ  ತನ್ನನ್ನು ಗುರುತಿಸೊದು ಪ್ರಶಸ್ತಿಗಳಿಂದ, ಈ ಪ್ರಶಸ್ತಿಗಳು ಮನುಷ್ಯನ ಗೌರವವನ್ನು ಹೆಚ್ಚುಸುತ್ತವೆ ಎಂಬಂತೆ ಕೆಲವರು ಪ್ರಶಸ್ತಿಗಾಗಿ ಹಾತೊರೆಯುತ್ತಿರುವದನ್ನು ಕಾಣುತ್ತವೆ.
  ಹಿಂದೆ ರಾಜ ಮಹಾರಾಜ ಕಾಲದಲ್ಲಿ ಅವರ ಆಸ್ಥಾನದಲ್ಲಿದ್ದ ವಿದ್ವಾಂಸರು, ವಿಶಿಷ್ಠ ಸಾಧನೆ ಮಾಡಿದರಿಗೆ ಬಿರುದು ಬಾವಲಿಗಳನ್ನು ನೀಡಿ ಗೌರವಿಸುತ್ತಿದ್ದ ಕಾಲವಿತ್ತು. ಇಂಥ ಗೌರವಕ್ಕೆ ಪಾತ್ರವಾದವರೂ ತಮ್ಮ ಸಾಧನೆಯನ್ನು ಜನಕ್ಕೆ ತೋರಿಸಿ, ಈ ಸಾದನೆಯನ್ನು ಮುಂದುವರೆಸಿಕೊಂಡು ಹೋಗುತ್ತಿದ್ದರು. ಆದರೆ ಈಗ ರಾಜ ಮಹಾರಾಜ ಕಾಲ ಹೋಗಿ ಭಾರತದಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆ ಬಂದಿದೆ. ಈ ಸಂದರ್ಭದಲ್ಲಿ ಅಂದಿನಂತೆ ಆಡಳಿತ ನಡೆಸುವ ವ್ಯವಸ್ಥೆ ಜಾರಿಯಲ್ಲಿದೆ. ಅದಕ್ಕಾಗಿ ಜನ ಏನಾದರೂ ಸಾಧನೆ ಮಾಡಿದವರು ಒಂದಿಷ್ಟು ಗುರುತಿಸಲಿ. ಗೌರವದೊಂದಿಗೆ ಒಂದಿಷ್ಟು ಧನ ಸಹಾಯ ಸಿಗಲಿ ಎಂಬ ಆಸೆಯೂ ಇದೆ. ಅದಕ್ಕಾಗಿ ಸರ್ಕಾರ ಮತ್ತು ವಿವಿಧ ಸಂಘ ಸಂಸ್ಥೆಗಳು ವಿಶಿಷ್ಠ ಸಾಧನೆ ಮಾಡಿದವರಿಗೆ ಗೌರವವನ್ನು ಪ್ರಶಸ್ತಿ ನೀಡಿ ಸಲ್ಲಿಸುತ್ತದೆ. ಇದು ಉತ್ತಮವಾದ ಕೆಲಸವೂ ಕೂಡ ಯಾಕಂದರೆ ಸಾಧನೆ ಮಾಡಿದವನಿಗೆ ಮನ್ನಣೆ ಸಿಗಬೇಕು ಎನ್ನುವುದು ಎಲ್ಲರ ಅಭಿಪ್ರಾಯ.
  ಇಂಥ ಮನ್ನಣೆಯು ಇತ್ತೀಚಿನ ದಿನಗಳಲ್ಲಿ ಮಾರಾಟ, ಲಾಭಿ ವಸ್ತುವಾಗಿದೆ ಎನ್ನುವದರಲ್ಲಿ ಎರಡು ಮಾತಿಲ್ಲ. ನಮ್ಮೂರಿನಲ್ಲಿ ಒಂದು ಸಂಸ್ಥೆಯು ವಿಶಿಷ್ಠ ಸಾಧನೆ ಮಾಡಿದರಿಗೆ ಸನ್ಮಾನ ಮಾಡುವ ಉದ್ದೇಶದಿಂದ ಕೆಲವಷ್ಟು ಸಾಧಕರಿಂದ ಅರ್ಜಿ ಕರೆದಿದ್ದರು ಈ ಸಂದರ್ಭದಲ್ಲಿ ಅರ್ಜಿ ಹಾಕಿದವರಲ್ಲಿ ಕೆಲವೊಂದಿಷ್ಟು ಜನ ಈ ಭಾರಿ ಪ್ರಶಸ್ತಿ ನನಗೆ ಸಿಗಲಿ ಎಂದು ನನ್ನನ್ನು ಇನ್‌ಫ್ಲ್ಯೂನ್ಸ್ ಮಾಡಲು ಹೇಳಿದರು. ಅಲ್ಲದೆ ಏನಾದರೂ ಇದ್ದರೆ ಹೇಳಿ ಕೊಡುತ್ತೇನೆ ಎಂದು ಸಹ ಹೇಳಿದರು. ಅವರ ಮಾಡಿರುವ ಸಾಧನೆಗಿಂತ ಅವರ ಪ್ರಚಾರದ ಅಬ್ಬರ ಮಾತ್ರವಿದ್ದು ನಿಜವಾಗಿ ಸಾಧನೆ ಮಾಡಿದ ಸಾಧಕ ಯಾವದೇ ಪ್ರಶಸ್ತಿ ಹಂಗು ಇಲ್ಲದೆ ತನ್ನ ಕಾರ್ಯವನ್ನು ಮಾಡುತ್ತಾ ಹೋಗುತ್ತಿದ್ದಾನೆ. ಇಂಥವನನ್ನು ಬಿಟ್ಟು ಪ್ರಶಸ್ತಿಗಾಗಿ ಹಾತೋರೆಯುತ್ತಿರುವವರಿಗೆ ಪ್ರಶಸ್ತಿಗೆ ಶಿಫಾರಸ್ಸು ಮಾಡಲು ನನ್ನ ಮನಸ್ಸು ಒಪ್ಪಲಿಲ್ಲ.
  ಪ್ರಶಸ್ತಿ ಅಮಲು ಯಾವ ರೀತಿಯಾಗಿರುತ್ತದೆ ಎಂಬುವುದಕ್ಕೆ ಇತ್ತೀಚಿಗೆ ಬಿಜಾಪುರದಲ್ಲಿ ನಡೆದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಸನ್ಮಾನ ಮಾಡಿಸಿಕೊಳ್ಳಲು ನಮ್ಮ ಜಿಲ್ಲೆಯ ಸಂಗೀತ ಶಿಕ್ಷಕನೊಬ್ಬ ಮಧ್ಯವರ್ತಿಗಳಿಗೆ ದುಂಬಾಲು ಬಿದ್ದಿದ್ದು, ಈ ಮಧ್ಯವರ್ತಿಗಳು ಇದೇ ಚಾನ್ಸು ಎಂದುಕೊಂಡು ಆತನನಿಂದ ಸರಿಸುಮಾರ ೨.೪ ಲಕ್ಷ ರೂಪಾಯಿ ತೆಗೆದುಕೊಂಡಿದ್ದರು. ಹೇಗೊ ಅಲ್ಲಿ ತಾನು ಹಣ ಕೊಟ್ಟ ಈ ವ್ಯಕ್ತಿಗಳಿಂದ ಸನ್ಮಾನ ಮಾಡಿಸುವ ತಾಕತ್ತು ಇಲ್ಲ ಎಂದು ಗೊತ್ತಾದ ತಕ್ಷಣ ಅವರ ಮೇಲೆ ಕೇಸು ಹಾಕಿದ್ದು ಉದಾಹರಣೆ ಇದೆ.
   ಸಂಘ ಸಂಸ್ಥೆಗಳು ಎನಾದರೂ ಮಾಡಲಿ ಎಂದುಕೊಂಡು ಬೇಕೆನಿಸಿದರೆ ಪ್ರಶಸ್ತಿ ತೆಗೆದುಕೊಂಡು ಸುಮ್ಮನೆ ಇರಬಹುದು. ಆದರೆ ಸರ್ಕಾರ ಕೊಡುವ ರಾಜ್ಯೋತ್ಸವ, ಕೃಷಿ ಪಂಡಿತ, ಇಲಾಖೆಗಳಿಂದ ಉತ್ತಮ ಸಾಧನೆ ಮಾಡಿದವರಿಗೆ ನೀಡುವ ಪ್ರಶಸ್ತಿಗೆ ಸರ್ಕಾರ ಅರ್ಜಿ ಕರೆಯುತ್ತಿದೆ. ಇದು ಎಷ್ಟು ಸಾಧು ಎಂಬುವುದು ಇಲ್ಲಿ ಚರ್ಚೆಯ ವಿಷಯವಾಗಿದೆ. ಸರ್ಕಾರದ ಇಲಾಖೆಗಳು ಎಲ್ಲಾ ಜಿಲ್ಲೆ, ತಾಲೂಕಿನಲ್ಲಿವೆ. ಅವುಗಳು ಸಾರ್ವಜನಿಕರೊಂದಿಗೆ ಕೆಲಸ ಮಾಡುತ್ತವೆ. ಅವುಗಳಿಂದ ಮಾಹಿತಿ ಪಡೆದು ಪ್ರಶಸ್ತಿ ನೀಡುವುದು ಸೂಕ್ತವಲ್ಲವೆ.
  ಅರ್ಜಿ ಹಾಕಿ ಪ್ರಶಸ್ತಿ ತೆಗೆದುಕೊಳ್ಳುವದರಿಂದ ಪ್ರಶಸ್ತಿ ತೆಗೆದುಕೊಳ್ಳುವವನು ತಾನೇ ಶ್ರೇಷ್ಠ ಎನ್ನುವಂತೆ ಅರ್ಜಿಯನ್ನು ಹಾಕಬೇಕು. ಆಗ ಆತ ಅಥವಾ ಆಕೆ  ತಮ್ಮ ಬೆನ್ನು ತಾವೇ ಚಪ್ಪರಿಸಿಕೊಂಡಂತಾಗಿದೆ. ಕೃಷಿ ಇಲಾಖೆಯೂ ವಿವಿಧ ಬೆಳೆಗಳಲ್ಲಿ ಸಾಧನೆ ಮಾಡಿದವರಿಗೆ ನೀಡುವ ಪ್ರಶಸ್ತಿಯು ಬಹುತೇಕ ಸರ್ಕಾರಿ ಕಛೇರಿಯಲ್ಲಿ ಪೈರವಿ ಕೆಲಸ ಮಾಡುವವರಿಗೆ ಸಿಗುತ್ತಿದೆ. ನಿಜವಾಗಿ ಮಣ್ಣಿನಲ್ಲಿ ಮಣ್ಣಾಗಿ ದುಡಿದು ಬೀಜ ಗೊಬ್ಬರ ಹಾಕಿ ಬೆಳೆಸಿದ ರೈತನಿಗೆ ಈ ಪ್ರಶಸ್ತಿಯನ್ನು ಹೇಗೆ ತೆಗೆದುಕೊಳ್ಳಬೇಕೆನ್ನುವುದು ಗೊತ್ತಿಲ್ಲದೆ ಪ್ರಶಸ್ತಿಯ ಗೋಜಲಿಗೆ ಹೋಗಲದೆ ತನ್ನ ಕಾಯಕವನ್ನು ಮುಂದುವರಿಸಿಕೊಂಡು ಹೋಗುತ್ತಿದ್ದಾನೆ.
 ಕೆಲವು ಪ್ರಶಸ್ತಿಗಳು ಅತ್ಯಲ್ಪದ ಮೊತ್ತವಾಗಿದ್ದು ಅದಕ್ಕಿಂತ ಪ್ರಶಸ್ತಿಗಾಗಿ ಅರ್ಜಿ ಹಾಕುವದಕ್ಕೆ ಮಾಡುವ ಖರ್ಚು ದ್ವಿಗುಣವಾಗಿರುತ್ತದೆ. ಜಿಲ್ಲಾ ಮಟ್ಟದಲ್ಲಿ ಯುವ ಪ್ರಶಸ್ತಿಗಾಗಿ ಯುವಜನ ಮತ್ತು ಕ್ರೀಡಾ ಇಲಾಖೆಯು ಅರ್ಜಿಯನ್ನು ಕರೆಯುತ್ತದೆ ಅದರ ಮೊತ್ತ ಅತ್ಯಲ್ಪ ಅದಕ್ಕೆ ಅರ್ಜಿದಾರ ಡಬ್ಬಲ್ ಖರ್ಚು ಮಾಡುತ್ತಾನೆ. ಅಲ್ಲದೆ ಅರ್ಜಿ ಹಾಕಿದವನ ಸಾಧನೆ ಏನು, ಈ ಪ್ರಶಸ್ತಿ ಏಕೆ ನೀಡುತ್ತಾರೆ. ಇದರಲ್ಲಿ ಇವರ ಸಾಧನೆ ಏನು ಎಂದು ಗೊತ್ತಿಲ್ಲದೆ ಶಿಫಾರಸ್ಸು ಮಾಡಿದ್ದು  ಇಂತಹವರ ಹತ್ತಿರ ಪತ್ರಕ್ಕಾಗಿ ಅಲೆಯಬೇಕಾಗಿದೆ. ಅಲ್ಲದೆ ಇತ್ತೀಚಿನ ದಿನಗಳಲ್ಲಿ ರಾಜಕಾರಣಿ, ಸಮಾಜದಲ್ಲಿ ಪ್ರತಿಷ್ಠಿತರು ಎನ್ನುವವರು ಪ್ರಶಸ್ತಿಗೆ ಶಿಫಾರಸ್ಸು ಮಾಡುವಾಗ ಸ್ವ ಜಾತಿ, ಸ್ವಹಿತಕ್ಕಾಗಿ ಶಿಫಾರಸ್ಸು ಮಾಡುವುದು ಬಹಿರಂಗವಾಗಿ ನಡೆಯುತ್ತಿದೆ. 
  ಇತ್ತೀಚಿಗೆ ಜ್ಞಾನಪೀಠ, ಭಾರತ ರತ್ನ ಎಂಬಂಥ ಪ್ರಶಸ್ತಿಗಳಲ್ಲಿಯೂ ಶಿಫಾರಸ್ಸಿನ ವಾಸನೆ ಬರುತ್ತಿದೆ. ಪ್ರಶಸ್ತಿಯ ಅಮಲು ಹಚ್ಚಿಕೊಂಡವರು ಪ್ರಶಸ್ತಿ ಬೆನ್ನು ಹತ್ತಿ ಹೋಗಿ ತಮ್ಮ ಸಾಧನೆಗಿಂತ ಪ್ರಶಸ್ತಿಯೇ ಮುಖ್ಯ ಎನ್ನುವಂತೆ ವರ್ತಿಸುತ್ತಿದ್ದಾರೆ. ಆ ರೀತಿ ವರ್ತಿಸದಿದ್ದರೆ ನಮ್ಮ ಜಿಲ್ಲೆಯ ಹಿರಿಯ ಸಾಹಿತಿಯೊಬ್ಬರು ಕಳೆದ ೨೩ ವರ್ಷಗಳಿಂದ ರಾಜ್ಯೋತ್ಸವ ಪ್ರಶಸ್ತಿಗಾಗಿ ಅರ್ಜಿ ಹಾಕುತ್ತಾರೆ. ಅವರು ಅರ್ಜಿ ಹಾಕಿ ಪ್ರಶಸ್ತಿ ಬರುತ್ತದೆ ಎಂದು ಕಾಯಿಯುವದಂತಾಗುತ್ತದೆ. ಇಂತಹವರ ಮಧ್ಯೆ ಅವರ ಮುಂದಿನ ಶಿಷ್ಯರು ಅರ್ಜಿಯೊಂದಿಗೆ ಶಿಫಾರಸ್ಸುಗಳನ್ನು ಹಿಡಿದುಕೊಂಡು ಹೋಗಿ ಪ್ರಶಸ್ತಿ ತರುತ್ತಿರುವದು ಕಾಣುತ್ತಿದ್ದೇವೆ.
 ಒಮ್ಮೆ ನನ್ನ ಆತ್ಮೀಯ ಗೆಳೆಯನೊಬ್ಬ ಜಿಲ್ಲಾ ಮಟ್ಟದ ಯುವ ಪ್ರಶಸ್ತಿಗಾಗಿ ಅರ್ಜಿ ಹಾಕುವ ಸಿದ್ದತೆಯಲ್ಲಿದ್ದ ಆ ಸಂದರ್ಭದಲ್ಲಿ ಸುದ್ದಿಮೂಲ ಸಂಪಾದಕರಾದ ಬಸವರಾಜಸ್ವಾಮಿಯವರಿಂದ ಶಿಫಾರಸ್ಸು ಪತ್ರ ಕೇಳಲು ಆತನೊಂದಿಗೆ ನಾನು ಹೋಗಿದ್ದೆ ಅದಕ್ಕೆ ಅವರ ಹೇಳಿದ ವಾಸ್ತವ ಸಂಗತಿ ನಿಜಕ್ಕೂ ಮಾದರಿಯಾಗಿತ್ತು. ನಿಮ್ಮನ್ನು ಜನ ಗುರುತಿಸುತ್ತಾರೆ ಅದಕ್ಕಿಂತ ಹೆಚ್ಚಿನದು ಏನು ಬೇಕು. ಈ ಪ್ರಶಸ್ತಿಯಿಂದ ನಿಮ್ಮನ್ನು ಗುರುತಿಸಬೇಕು ಎನ್ನುವ ಹಂಬಲ ಬಿಡಿ ಎಂದು ಹೇಳಿದ್ದು ವಯಕ್ತಿಕವಾಗಿ ನನಗೆ ನಿಜವೆನಿಸಿ ಅರ್ಜಿ ಹಾಕಿ ಪಡೆಯುವ ಪ್ರಶಸ್ತಿಯ ಬಗ್ಗೆ ತಿರಸ್ಕಾರ ಭಾವನೆ ಉಂಟಾಯಿತು.
  ಹಾಡು ಹಕ್ಕಿಗೆ ಬೇಕೆ ಬಿರುದು ಸನ್ಮಾನ ಎನ್ನುವಂತೆ ಹಕ್ಕಿ ತನ್ನ ಇಂಪಾದ ಕಂಠವಿದ್ದರೆ ಆ ಇಂಪಾದ ಧ್ವನಿಗೆ ಎಲ್ಲರನ್ನು ಆಕರ್ಷಿಸಿಸುವ ಶಕ್ತಿ ಇದೆ. ಅದೇ ಕಂಠ ಇಂಪು ಇಲ್ಲದಿದ್ದರೂ ನನ್ನದು ಇಂಪಾದ ಕಂಠ ಎಂದು ಸ್ವ ಕುಚ ಮರ್ಧನ ಮಾಡಿಕೊಳ್ಳುವಂತಾಗುತ್ತದೆ. ಇಂಥ ಪರಿಸ್ಥಿತಿಯ ಪ್ರಶಸ್ತಿ ಬೇಕೆ ಎಂಬ ಬಗ್ಗೆ ಈಗ ಚರ್ಚೆಯಾಗಬೇಕಾಗಿದೆ.
                                   ಶರಣಪ್ಪ ಬಾಚಲಾಪುರ,      ಕೊಪ್ಪಳ 

Advertisement

0 comments:

Post a Comment

 
Top