PLEASE LOGIN TO KANNADANET.COM FOR REGULAR NEWS-UPDATES

 ಜಿಲ್ಲಾ ಬಾಲಕಾರ್ಮಿಕ ಯೋಜನಾ ಸಂಘದ ವತಿಯಿಂದ ಜಿಲ್ಲಾಧಿಕಾರಿಗಳ ಸೂಚನೆ ಮೇರೆಗೆ ತಾಲೂಕಿನ ವಿವಿಧ ಕೋಳಿ ಫಾರಂಗಳ ಮೇಲೆ  ದಾಳಿ ನಡೆಸಿದ ತಂಡ ಒಟ್ಟು ೧೯ ಮಕ್ಕಳನ್ನು ಪತ್ತೆ ಮಾಡಿದೆ.

  ತಾಲೂಕಿನ ಬಸಾಪುರ ಬಳಿಯ ಕರ್ನಾಟಕ ಕೋಳಿ ಫಾರಂನ ಯುನಿಟ್-೨ ರಲ್ಲಿ ೦೪, ರಾಮಾರಾವ್ ಕೋಳಿ ಫಾರಂನಲ್ಲಿ ೦೫, ಗಿಣಿಗೇರಾದ ರೇಣುಕಾ ಕೋಳಿ ಫಾರಂನಲ್ಲಿ ೦೩, ಚಿಕ್ಕಬಗನಾಳದ ಮೋನಿಷಾ ಕೋಳಿ ಫಾರಂನಲ್ಲಿ ೦೪ ಮತ್ತು ಕಾಸನಕಂಡಿಯ ಕಾಳೇಶ್ವರಿ ಕೋಳಿ ಫಾರಂನಲ್ಲಿ ೦೩ ಹೀಗೆ ಒಟ್ಟು ೧೯ ಮಕ್ಕಳನ್ನು ಪತ್ತೆ ಮಾಡಲಾಗಿದೆ.  ಕರ್ನಾಟಕ ಕೋಳಿ ಫಾರಂನಲ್ಲಿ ಹನುಮಂತಿ ಮ್ಯಾದ್ನೇರಿ (೧೪), ನಿಂಗಮ್ಮ ಬಂಡಿ (೧೭), ಶರಣಮ್ಮ ಪಿನ್ನೇರ(೧೪), ಮಾರುತಿ ಹೊಸಳ್ಳಿ (೧೫).  ರಾಮಾರಾವ್ ಕೋಳಿ ಫಾರಂನಲ್ಲಿ ತಾಯಮ್ಮ ಇಂದ್ರಿಗಿ (೧೭), ಹನುಮಂತಿ ಓಲೇಕಾರ (೧೩), ಸುಮಿತ್ರಾ ಸಿಂಧನೂರ (೧೪), ಮಹಾದೇವಿ ವಾಲ್ಮೀಕಿ (೧೪), ಕವಿತಾ ಹಾಲವರ್ತಿ (೧೪).  ರೇಣುಕಾ ಕೋಳಿ ಫಾರಂನಲ್ಲಿ ವಿಶಾಲ (೧೭), ಮಂಜುಳಾ (೧೮), ರಾಧಾ (೧೫).  ಮೋನಿಷಾ ಕೋಳಿ ಫಾರಂನಲ್ಲಿ ಮಂಜುಳಾ ಭಜಂತ್ರಿ (೧೪), ಸವಿತಾ ಭಜಂತ್ರಿ (೧೬), ರತ್ನಾ ಅಬ್ಬಿಗೇರಿ (೧೪), ಸುನಿತಾ ಅಬ್ಬಿಗೇರಿ (೧೬).  ಕಾಳೇಶ್ವರಿ ಕೋಳಿ ಫಾರಂನಲ್ಲಿ ಅಜಿತ್ ಹುಣಸಿಹಾಳ (೯), ಪರ್ವೀನ್ ಚಿತ್ತವಾಡಗಿ (೧೪), ಯಮನೂರ ವಡ್ಡರ್ (೧೭) ಇವರನ್ನು ಕೋಳಿ ಫಾರಂಗಳಲ್ಲಿ ಕೆಲಸ ಮಾಡುತ್ತಿದ್ದ ವೇಳೆ ಪತ್ತೆ ಮಾಡಲಾಗಿದೆ.  ಈ ಕುರಿತ ಸಮಗ್ರ ವರದಿಯನ್ನು ಜಿಲ್ಲಾಧಿಕಾರಿಗಳಿಗೆ ಸಲ್ಲಿಸಲಾಗಿದ್ದು, ಅವರ ಸೂಚನೆಯಂತೆ ಕೋಳಿ ಫಾರಂ ಮಾಲೀಕರ ವಿರುದ್ಧ ಕ್ರಮ ಕೈಗೊಂಡು, ಮಕ್ಕಳಿಗೆ ಪುನರ್ವಸತಿ ಕಲ್ಪಿಸಲಾಗುವುದು.  ದಾಳಿ ತಂಡದಲ್ಲಿ ಜಿಲ್ಲಾ ಬಾಲಕಾರ್ಮಿಕ ಯೋಜನಾ ಸಂಘದ ಯೋಜನಾ ನಿರ್ದೇಶಕ ಬಸವರಾಜ ಹಿರೇಗೌಡರ, ಕ್ಷೇತ್ರಾಧಿಕಾರಿ ವೀರಣ್ಣ ಕುಂಬಾರ, ಮಾರುತಿ ನಾಯ್ಕರ್, ಪರಿಚಾರಕ ಹುಸೇನ್ ಭಾಗವಹಿಸಿದ್ದರು.

Advertisement

0 comments:

Post a Comment

 
Top