ಕೊಪ್ಪಳ,ನ.೧೬: ಮುಸ್ಲಿಂ ಮಹಿಳೆಯರ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿ ಮುಸ್ಲಿಂ ಜನಾಂಗದ ಮತೀಯ ನಂಬಿಕೆಗಳನ್ನು ಅಪಮಾನಗೊಳಿಸಿ ಮತೀಯ ಭಾವನೆಗಳಿಗೆ ಅಘಾತವನ್ನುಂಟು ಮಾಡಿದ ಅಖಿಲ ಭಾರತ ಹಿಂದೂ ಮಹಾಸಭಾದ ಗೌರವ ಅಧ್ಯಕ್ಷ ಪ್ರಣವಾನಂದ ಸ್ವಾಮಿಜೀಯವರ ಹೇಳಿಕೆಗೆ ಇಲ್ಲಿನ ಮುಸ್ಲಿಂ ಸಮುದಾಯ ಉಗ್ರವಾಗಿ ಖಂಡಿಸಿ ಅವರ ವಿರುದ್ಧ ಸೂಕ್ತ ಕಾನೂನು ಕ್ರಮಕೈಗೊಳ್ಳುವಂತೆ ಶನಿವಾರ ಸಂಜೆ ಸಹಸ್ರಾರು ಸಂಖ್ಯೆಯಲ್ಲಿ ಮುಸ್ಲಿಂ ಸಮುದಾಯ ಬಾಂಧವರು ನಗರ ಪೊಲೀಸ್ ಠಾಣೆಗೆ ಭೇಟಿ ಮಾಡಿ ದೂರು ದಾಖಲಿಸಿದ್ದಾರೆ.
ರಾಜ್ಯ ಮುಖ್ಯಮಂತ್ರಿ ಅಲ್ಪಸಂಖ್ಯಾತ ಮುಸ್ಲಿಂ ಹೆಣ್ಣು ಮಕ್ಕಳಿಗೆ ಮದುವೆಗಾಗಿ ಅನುಕೂಲವಾಗಲು ೫೦ ಸಾವಿರ ರೂ. ಸಹಾಯಧನ ಘೋಷಣೆ ಮಾಡಿ ಶಾದಿಭಾಗ್ಯ ಯೋಜನೆ ಜಾರಿಗೆ ತಂದಿದೆ. ಇದರ ಬಗ್ಗೆ ಸ್ವಾಮಿಜಿಯವರು ಅವಹೇಳನಕಾರಿ ಹೇಳಿಕೆ ನೀಡುವುದರ ಮೂಲಕ ನಮ್ಮ ಮುಸ್ಲಿಂ ಸಮಾಜಕ್ಕೆ ಅಘಾತವನ್ನುಂಟುಮಾಡಿದ್ದಾರೆ. ಮುಸ್ಲಿಂ ಶರೀಯತ್ ಪ್ರಕಾರ ಮುಸ್ಲಂ ಯುವಕ-ಯುವತಿ ಬೇರೆ ಜಾತಿಯವರೊಂದಿಗೆ ಮದುವೆ ಮಾಡಿಕೊಳ್ಳಲು ಆಸ್ಪಧವಿರುವುದಿಲ್ಲ ಒಂದು ವೇಳೆ ಬೇರೆ ಜಾತಿಯ ಯುವಕ-ಯುವತಿಯರು ಮುಸ್ಲಿಂ ಯುವಕ-ಯುವತಿರೊಂದಿಗೆ ವಿವಾಹ (ನಿಖಾಃ) ಮಾಡಿಕೊಳ್ಳಬೇಕಾದರೆ ಮೊದಲು ಇಸ್ಲಾಂ ಧರ್ಮಕ್ಕೆ ಮತಾಂತರಗೊಳ್ಳುವುದು ಕಡ್ಡಾಯವಾಗಿರುತ್ತದೆ ಎಂದು ವಿವರಿಸಿದರು.
ಪ್ರಣವಾನಂದ ಸ್ವಾಮಿಜೀಯವರು ಮುಸ್ಲಿಂ ಯುವಕಿಯರನ್ನು ಒಪ್ಪಿಸಿ ಮದುವೆಯಾಗುವ ಹಿಂದೂ ಯುವಕರಿಗೆ ಮನೆ, ಕೆಲಸ ಸೇರಿ ಜೀವನಕ್ಕೆ ಅಗತ್ರಯವಾದ ಸಕಲಸೌಲಭ್ಯ ಒದಗಿಸಲಿದೆ ಎಂಬ ಹೇಳಿಕೆ ತೀವ್ರ ಖಂಡನಾರ್ಹವಾಗಿದೆ ಮತ್ತು ಇದು ದ್ವೇಷ ಭಾವನೆಯಿಂದ ಕೂಡಿದೆ ಇದರಿಂದ ನಮ್ಮ ಮುಸ್ಲಿಂ ಸಮುದಾಯದ ಹೆಣ್ಣು ಮಕ್ಕಳಿಗೆ ಮತ್ತು ಸಮಾಜಕ್ಕೆ ಅಪಮಾನ ಮಾಡಿದ್ದು ಖಂಡನಾರ್ಹ. ಸ್ವಾಮಿಜೀಯವರು ಇಂತಹ ಕೀಳುಮಟ್ಟದ ಹೇಳಿಕೆಯಿಂದ ಸಮಾಜದ ಸ್ವಾಸ್ಥ್ಯ ಹಾಳು ಮಾಡುತ್ತಿರುವುದಲ್ಲದೆ ಹಿಂದು ಯುವಕರಿಗೆ ಪ್ರಚೋಧನೆ ನೀಡಿದಂತಾಗಿದೆ. ಹಿಂದೂ ಮುಸ್ಲಮಾನರು ದೇಶದಲ್ಲಿ ಪರಸ್ಪರ ಸಹೋದ ಭಾತೃತ್ವ ಭಾವನೆಗಳೊಂದಿಗೆ ಬದುಕುತ್ತಿದ್ದಾರೆ. ಅಂತಹ ಭಾವನೊಗಳೊಂದಿಗೆ ಕಿಚ್ಚುಹಚ್ಚಿ ಕೋಮುಗಲಭೆಯನ್ನು ಸೃಷ್ಟಿಸುವ ಹುನ್ನಾರ ಇದಾಗಿದೆ. ಇದು ಶಿಕ್ಷಾರ್ಹವಾಗಿರುತ್ತದೆ. ಇಂತಹ ಸ್ವಾಮಿಜೀ ವಿರುದ್ಧ ಕಾನುನೂ ಕ್ರಮ ಜರುಗಿಸಬೇಕೆಂದು ಕೊಪ್ಪಳದ ಇಸ್ಮಾಯೀಲ್ ಗೇಟಿನ್‌ರವರು ಸಹಸ್ರಾರು ಜನ ಮುಸ್ಲಂ ಸಮುದಾಯದ ಮತ್ತು ವಿವಿಧ ಸಂಘಟನೆಯ ಪದಾಧಿಕಾರಿಯೊಂದಿಗೆ ನಗರ ಪೊಲೀಸ್ ಠಾಣೆಗೆ ದೂರು ಸಲ್ಲಿಸಿ ಪ್ರಣವಾನಂದ ಸ್ವಾಮಿಜೀ ವಿರುದ್ಧ ಕ್ರಮಕ್ಕೆ ಒತ್ತಾಯಿಸಿದ್ದಾರೆ.
ಈ ಸಂದರ್ಭದಲ್ಲಿ ಇಸ್ಮಾಯಿಲ್ ಗೇಟಿನ್ ವಕೀಲರು, ಅಂಜುಮನ್ ಕಮೀಟಿ ಅಧ್ಯಕ್ಷ ಎಂ.ಪಾಷಾ ಕಾಟನ್, ನಗರಸಭೆ ಉಪಾಧ್ಯಕ್ಷ ಅಮ್ಜದ್ ಪಟೇಲ್, ಮಾನ್ವಿ ಪಾಷಾ, ನಾಸೀರುದ್ದೀನ್, ಅಹ್ಮದ್ ಹುಸೇನ ಮುದಗಲ್, ಮಹೇಬೂಬ ಮಚ್ಚಿ, ಮಹೇಬೂಬ ಅರಗಂಜಿ, ರಫೀ ಆರ್.ಎಂ., ಸಯ್ಯದ್ ಮಹೆಮೂದ್ ಹುಸೇನಿ, ಜಾಫರ್ ಸಂಗಟಿ, ಎಂ.ಡಿ.ಆಸೀಫ್ ಕರ್ಕಿಹಳ್ಳಿ, ಗಫಾರ್ ದಿಡ್ಡಿ, ಅಬ್ಬಾಸ್ ಟೈಲರ್, ಅಯುಬ್ ಅಡ್ಡೇವಾಲಿ, ಅಫಸರ್ ವಕೀಲರು, ಪೀರಾಹುಸೇನ್ ಚಿಕನ್, ರಹೇಮಾನ್ ಮಣ್ಣೂರು ಸೇರಿದಂತೆ ಸಹಸ್ರಾರು ಸಂಖ್ಯೆಯಲ್ಲಿ ಮುಸ್ಲಿಂ ಸಮಾಜ ಬಾಂಧವರು ಪಾಲ್ಗೊಂಡಿದ್ದು, ಈ ಬೃಹತ್ ಪ್ರತಿಭಟನೆಯ ನೇತೃತ್ವವನ್ನು ಅಂಜುಮನ್ ಕಮೀಟಿ ಕೊಪ್ಪಳ ಮತ್ತು ಇಸ್ಮಾಯಿಲ್ ಗೇಟಿನ್ ವಕೀಲರು ವಹಿಸಿದ್ದರು.
0 comments:
Post a Comment