PLEASE LOGIN TO KANNADANET.COM FOR REGULAR NEWS-UPDATES


ಸರ್ಕಾರ ಮಾರ್ಚ್ ತಿಂಗಳಲ್ಲೇ ೯೪೯ರೂ.ಗಳನ್ನು ತುಟ್ಟಿಭತ್ಯೆ ನಿಗದಿಪಡಿಸಿರುತ್ತದೆ. ಆದರೆ ಪದ್ಮಾ ಇಂಡಸ್ಟ್ರೀಸ್ ಮತ್ತು ಜೈಹನುಮಾನ್ ಸಿಲ್ವರ್‌ಜುಬ್ಲೀ ರೈಸ್‌ಮಿಲ್ ಮಾಲೀಕ ಮುಷ್ಠಿ ಈರಣ್ಣರವರು ಕಾರ್ಮಿಕರಿಗೆ ತುಟ್ಟಿಭತ್ಯೆ ಮತ್ತು ಸಂಬಳ ಹೆಚ್ಚಿಸದೇ ವಂಚಿಸುತ್ತಿದ್ದಾರೆ. ಸರ್ಕಾರ ೮ ಗಂಟೆಗಳಿಗೆ ನಿಗದಿಪಡಿಸಿದ ಸಂಬಳವನ್ನು ಕೊಡದೇ ೧೨ ಗಂಟೆಗಳ ದುಡಿಸಿಕೊಳ್ಳುತ್ತಿದ್ದಾರೆ ಎಂದು ಕರ್ನಾಟಕ ಸಾಮಾನ್ಯ ಕಾರ್ಮಿಕ ಸಂಘದ ಜಿಲ್ಲಾಧ್ಯಕ್ಷರಾದ ಎಂ. ವಿರುಪಾಕ್ಷಪ್ಪ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪದ್ಮಾ ಇಂಡಸ್ಟ್ರೀಸ್‌ನಲ್ಲಿ ದುಡಿಯುತ್ತಿರುವ ಫಿಟ್ಟರ್ ಮತ್ತು ಹೆಲ್ಪರ್ ಕಾರ್ಮಿಕರು ಕಳೆದ ನಾಲ್ಕು ತಿಂಗಳಿಂದ ವೇತನ ಹೆಚ್ಚಳಕ್ಕಾಗಿ ಮಾಲೀಕರಿಗೆ ಮತ್ತು ಕಾರ್ಮಿಕ ಅಧಿಕಾರಿಗಳಿಗೆ ಅನೇಕ ಮನವಿಗಳನ್ನು ಸಲ್ಲಿಸಿದ್ದಾರೆ. ೦೯-೧೦-೨೦೧೩ರಂದು ಗಂಗಾವತಿ ಕಾರ್ಮಿಕ ನಿರೀಕ್ಷಕರ ಕಾರ್ಯಾಲಯ ದಲ್ಲಿ ನಡೆದ ಕಡೆಯ ಸಂಧಾನದಲ್ಲಿ ಮಾಲೀಕರು, ತಾವು ಸಂಬಳ ಒಂದು ಪೈಸಾವನ್ನೂ ಹೆಚ್ಚಿಸುವುದಿಲ್ಲ. ಇಷ್ಟವಿದ್ದವರು ದುಡಿಯಬಹುದು, ಇಲ್ಲದಿದ್ದರೆ ಕೆಲಸ ಬಿಡಬಹುದು ಎಂದು ಕಾರ್ಮಿಕ ಅಧಿಕಾರಗಳ ಸಮಕ್ಷಮ ಹೇಳಿಕೆ ಕೊಟ್ಟಿದ್ದಾರೆ.
ಕರ್ನಾಟಕ ಸರ್ಕಾರ ದಿ:೧/೪/೨೦೧೩ ರಿಂದ ೩೧-೩-೨೦೧೪ರ ವರೆಗೆ ತುಟ್ಟಿಭತ್ಯೆ(ವಿಡಿಎ)೯೪೯ ರೂ. ಗಳನ್ನು ನಿಗದಿಪಡಿಸಿದೆ. ಕಳೆದ ೨೦ ವರ್ಷಗಳಿಂದ ಅಕ್ಕಿಗಿರಣಿಗಳಲ್ಲಿ ದುಡಿಯುತ್ತಿರುವ ಕಾರ್ಮಿಕರ ಸಂಬಳ ೧೦,೦೦೦ ಸಾವಿರಗಳ ಗಡಿ ಮುಟ್ಟಿಲ್ಲ. ಇವರುಗಳಿಗೆ ೬,೦೦೦-೮,೦೦೦ವರೆಗೆ ವೇತನ ನೀಡಲಾ ಗುತ್ತಿದೆ. ೮ ಗಂಟೆ ಕಾಲ ಮಿತಿ ಮೀರಿಸಿ, ೧೨ ಗಂಟೆ ದುಡಿಸಿಕೊಳ್ಳುತ್ತಾ ಹೆಚ್ಚುವರಿ ದುಡಿಸಿ ಕೊಂಡ ಅವಧಿಯ ವೇತನ ಕೊಡದೇ ಕಾರ್ಮಿಕರನ್ನು ವಂಚಿಸಿತ್ತಿದ್ದಾರೆ.
ಕಾರ್ಮಿಕ ಮುಖಂಡ ಭಾರದ್ವಾಜ್ ಮಾತನಾಡಿ ಕಾರ್ಮಿಕರು ಇಂದಿನ ಬೆಲೆಏರಿಕೆಯ ದಿನಗಳಲ್ಲಿ ಸರ್ಕಾರ ನಿಗದಿಪಡಿಸಿದ ತುಟ್ಟಿಭತ್ಯೆ ೯೪೯ ರೂ. ಜೊತೆಗೆ ೧೦೦೦ ರೂ.ಗಳ ವೇತನ ಕೂಡಿಸಿ, ೨೦೦೦ ರೂಪಾಯಿಗಳು ಸಂಬಳ ಹೆಚ್ಚಿಸಲು ಬೇಡಿಕೆ ಇಟ್ಟಿದ್ದರು. ಮಾಲೀಕರ ಒಪ್ಪದಿರುವುದರಿಂದ ಕಾರ್ಮಿಕರು ಅನಿವಾರ್ಯವಾಗಿ ಧರಣಿಗೆ ಇಳಿಯ ಬೇಕಾಗಿದೆ. ಆದ್ದರಿಂದ ಗಂಗಾವತಿ ತಾಲೂಕಿನ ಎಲ್ಲ ಅಕ್ಕಿಗಿರಣಿ ಕಾರ್ಮಿಕರು ಪದ್ಮಾ ಇಂಡಸ್ಟ್ರೀಸ್ ಕಾರ್ಮಿಕರ ಧರಣಿಗೆ ಬೆಂಬಲಿಸಬೇಕೆಂದರು. 
ಈ ಸಂದರ್ಭದಲ್ಲಿ ಬಸನಗೌಡ ಸುಳೇಕಲ್, ಟಿ.ರಾಘವೇಂದ್ರ, ಎಂ. ಏಸಪ್ಪ, ಮಾಬುಸಾಬ್ ಬಸಾಪಟ್ಟಣ, ಪದ್ಮಾ ಇಂಡಸ್ಟ್ರೀಸ್ ಕಾರ್ಮಿಕರಾದ ಮಹ್ಮದ್ ರಫಿ, ಮಕ್ಬೂಲ್‌ಖಾನ್, ಹನುಮೇಶ, ಮಂಜುನಾಥ, ಗೋಪಾಲ್, ರಾಮ, ರಹಿಮಾನ್, ಕೃಷ್ಣ ಮತ್ತಿತರರು ಧರಣಿಯಲ್ಲಿ ಪಾಲ್ಗೊಂಡಿದ್ದರು.  

Advertisement

0 comments:

Post a Comment

 
Top