ಕೊಪ್ಪಳ: ನ-೫ ಕೊಪ್ಪಳದಲ್ಲಿ ೫೮ನೇ ಕನ್ನಡ ರಾಜೋತ್ಸವವನ್ನು ಕರ್ನಾಟಕ ರಕ್ಷಣಾ ವೇದಿಕೆ (ಶಿವರಾಮೇಗೌಡ ಬಣ) ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದೊಂದಿಗೆ ಕನ್ನಡತಾಯಿ ಭುವನೇಶ್ವರಿ ದೆವಿಯ ಭಾವ ಚಿತ್ರಕ್ಕೆ ಪುಸ್ಫ ಅರ್ಪಿಸುವುದರೋಂದಿಗೆ ಡೊಳ್ಳು ಬಾರಿಸುವ ಮುಖಾಂತರ ಮೆರವಣಿಗೆಗೆ ಉಸ್ತುವಾರಿ ಜಿಲ್ಲಾಧ್ಯಕ್ಷರಾದ ಎಸ್.ಸುರೆಶ್, ಚಾಲನೆ ನೀಡಿದರು.
ಮೆರವಣಿಗೆಯನ್ನು ವಿಜೃಂಭಣೆಯಿಂದ ನಗರದ ಸಿರಸಪ್ಪಯ್ಯನ ಮಠದಿಂದ ಪ್ರಮುಖ ಬೀದಿಗಳಾದ ಗಡಿಯಾರ ಕಂಬ, ಜವಹಾರ ರಸ್ತೆ ಮತ್ತು ಅಶೋಕ ಸರ್ಕಲ್ ಮುಖಾಂತರ ನಗರದ ಜೂನಿಯರ್ ಕಾಲೇಜ್ ಮೈದಾನದಲ್ಲಿ ದ್ವಜಾರೋಹಣ ಮಾಡುವಾಗ ಶಾಲೆಯ ಮಕ್ಕಳು ನಾಡಗೀತೆ ಹಾಡಿದರು, ಎಸ್,ಸುರೆಶ್ ಕನ್ನಡದ ಧ್ವಜರೋಹಣ ನೆರವೇರಿಸಿ ಮಾತನಾಡಿದ ಅವರು ನಾಡು ಕಟ್ಟಲು ಮನೆಗೊಬ್ಬ ಯುವಕರು ಮುಂದೆ ಬಂದರೆ ಸಾಕು "ಕನ್ನಡ ತಾಯಿಯ ಋಣ ತೀರಿಸಿದಂತೆ" ಅದಕ್ಕಾಗಿ ನಾಡು ನುಡಿ ರಕ್ಷಣೆಯಾಗಬೇಕಾದರೆ ಯುವಕರಿಂದ ಸಾದ್ಯ ಎಲ್ಲರೂ ಒಗ್ಗಟ್ಟಾಗಿ ಕನ್ನಡಕ್ಕೆ ಕಳಂಕ ತರುವಂತ ನಂಬಿಕೆದ್ರೋಹಿಗಳನ್ನು ಸದೆ ಬಡೆದು ಇಲ್ಲಿಂದ ಒದ್ದೋಡಿಸುವ ಮುಖಾಂತರ ಕನ್ನಡಾಂಭೆಯ ತೇರನ್ನು ಎಳೆಯೋಣ ಎಂದು ಕನ್ನಡ ಅಭಿಮಾನಿಗಳಿಗೆ ಕರೆ ನೀಡಿದರು. ಮೆರವಣಿಗೆ ಯಲ್ಲಿ ಜಾಂಜ್ ಮೇಳ ಮತ್ತು ಕರಡಿ ಮಜಲು ಕುಣಿತ ಆಕರ್ಷಕವಾಗಿತ್ತು,
ಮೆರವಣಿಗೆಯ ನೇತೃತ್ವವನ್ನು ಕೊಪ್ಪಳ ಉಸ್ತುವಾರಿ ಜಿಲ್ಲಾಧ್ಯಕ್ಷರಾದ ಎಸ್.ಸುರೆಶ್, ಹೊಸಪೆಟೆ ತಾಲೂಕ ಅಧ್ಯಕ್ಷರಾದ ಬೋಡಾ ರಾಮಪ್ಪ, ಜಿಲ್ಲಾ ಮಹಿಳಾ ಘಟಕದ ಅದ್ಯಕ್ಷೆ ಎಲ್.ಪ್ರಿಯಾ, ಕೊಪ್ಪಳ ತಾಲೂಕ ಅಧ್ಯಕ್ಷ ಹನುಮೇಶ್. ಮ್ಯಾಗಳಮನಿ, ಕಾರ್ಯದರ್ಶಿ ಭೀಮಣ್ಣ ದೇವರಮನಿ, ಉಪಾಧ್ಯಕ್ಷ ಮಂಜುನಾಥ ಕಿನ್ನಾಳ, ಭಾಗ್ಯನಗರ ಗ್ರಾಮ ಘಟಕದ ಮುಖಂಡರಾದ ಮಹೇಶ್, ಪರಶುರಾಮ ಮಂಗಳೂರು, ರಾಮವ್ವ ಮಂಗಳೂರು, ಹುಲಿಗೆಮ್ಮ ಕಟ್ಟಿಮನಿ, ಸಂಕ್ರಮ್ಮ ಆಲೂರು, ಕೌಶಲ್ಯಮ್ಮ, ಸುಮಾ ಬಿದರೂರ, ರವಿ, ಬಸವರಾಜ್ ಬಿಕನಳ್ಳಿ, ಯಮನೂರಪ್ಪ, ಮಂಜುನಾಥ, ಹಾಗೂ ರಕ್ಷಣಾ ವೇದಿಕೆ ನೂರಾರು ಕಾರ್ಯಕರ್ತರು ಭಾಗವಹಿಸಿದ್ದರು,
0 comments:
Post a Comment