ಬಳ್ಳಾರಿ, ನ. ೬:ಗಡಿ ಪ್ರದೇಶವಾಗಿರುವ ಬಳ್ಳಾರಿ ಜಿಲ್ಲೆ ಯಲ್ಲಿ ಕನ್ನಡ ಪರ ಸಂಘಟನೆಗಳು ಸದಾ ಜಾಗೃತ ಸ್ಥಿತಿಯಲ್ಲಿದ್ದು ನಾಡು ನುಡಿ, ನೆಲ ಜಲಕ್ಕೆ ಧಕ್ಕೆ ಬಂದಾಗ ಒಟ್ಟಾಗಿ ಹೋರಾಡುವ ಕಾರ್ಯ ಮೆಚ್ಚುವಂತದ್ದು ಎಂದು ಹಿಂದೂ ಧಾರ್ಮಿಕ ದತ್ತಿ ಇಲಾಖೆಯ ಸಹಾಯಕ ಆಯುಕ್ತ ಎಸ್ ಪಿ ಬಿ ಮಹೇಶ್ ಅವರು ತಿಳಿಸಿದರು.
ನಗರದ ಶ್ರೀ ವಿವೇಕಾನಂದ ಯುವಕ ಸಂಘ ಮಂಗಳವಾರ ಸಂಜೆ ಶ್ರೀ ಕನಕದುರ್ಗಮ್ಮ ದೇವಸ್ಥಾನದ ಆವರಣದಲ್ಲಿ ಆಯೋಜಿಸಿದ್ದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ದೇಶದ ಸ್ವಾತಂತ್ರ್ಯ ಮತ್ತು ಕರ್ನಾಟಕ ಏಕೀಕರಣಕ್ಕೆ ಬಳ್ಳಾರಿ ಜಿಲ್ಲೆಯ ಕೊಡುಗೆ ಅಪಾರ. ಯುವ ಜನ ಸೇವೆ ಜತೆಗೆ ಕನ್ನಡ ನಾಡು ನುಡಿಗೆ ಕಳೆದ ೩೦ ವರ್ಷಗಳಿಂದ ವಿಶಿಷ್ಟ ಸೇವೆ ಸಲ್ಲಿಸುತ್ತಿರುವ ಶ್ರೀ ವಿವೇಕಾನಂದ ಯುವಕ ಸಂಘದ ಕಾರ್ಯ ಚಟುವಟಿಕೆಗಳು ಇತರರಿಗೆ ಮಾದರಿ ಎಂದು ಹೇಳಿದರು.
ಕಾರ್ಯಕ್ರಮವನ್ನು ಹೆಸರಾಂತ ಹಿರಿಯ ರಂಗ ಕಲಾವಿದೆ ನಾಡೋಜ ಸುಭದ್ರಮ್ಮ ಮನ್ಸೂರು ಉದ್ಘಾಟಿಸಿ ಕಾರ್ಯಕ್ರಮಕ್ಕೆ ಶುಭಕೋರಿದರು. ಅಲ್ಲದೇ ಕನ್ನಡ ನಾಡಿನ ಮಹತ್ವ ಸಾರುವ ಗೀತೆಯನ್ನು ಸುಶ್ರಾವ್ಯವಾಗಿ ಹಾಡಿ ಗಮನ ಸೆಳೆದರು.
ಅಧ್ಯಕ್ಷತೆ ವಹಿಸಿದ್ದ ಶ್ರೀ ವಿವೇಕಾನಂದ ಯುವಕ ಸಂಘದ ಅಧ್ಯಕ್ಷ, ರಾಜ್ಯ ಯುವ ಪ್ರಶಸ್ತಿ ಪುರಷ್ಕೃತ ಪಿ ಗಾದೆಪ್ಪ ಮಾತನಾಡಿ ಮಂಬರುವ ದಿನಗಳಲ್ಲಿಯೂ ಸಂಘ ಮತ್ತಷ್ಟು ಕನ್ನಡ, ಜನಪರ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಿದೆ ಎಂದು ತಿಳಿಸಿದರು.
ಮುಖ್ಯ ಅತಿಥಿಗಳಾಗಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಬಿ ನಾಗರಾಜ್, ಕರ್ನಾಟಕ ನೀರು ಸರಬರಾಜು ಮಂಡಳಿಯ ಕಾರ್ಯಪಳಕ ಅಭಿಯಂತರ ಕೆ ಜಿ ವಇ ಗಂಗಾಧರ ಗೌಡ, ಬಳ್ಳಾರಿ ನಗರಾಭಿವೃದ್ಧಿ ಪ್ರಾಧಿಕಾರದ ಸಹಾಯಕ ಕಾರ್ಯಪಾಲಕ ಅಭಿಯಂತರ ಜಿ ಕೆ ರವಿಶಂಕರ, ಖ್ಯಾತ ವೈದ್ಯ ಡಾ. ಎನ್ ಮಂಜುನಾಥ್ ಮತ್ತಿತರರು ಉಪಸ್ಥಿತರಿದ್ದರು.
ಸನ್ಮಾನ: ಇದೇ ಸಂದರ್ಭದಲ್ಲಿ ಕನ್ನಡ ನಾಡು ನುಡಿಗೆ ಅನುಪಮ ಸೇವೆ ಸಲ್ಲಿಸುತ್ತಿರುವ ನಗರದ ಕನ್ನಡಪರ ಹಾಗೂ ಸಮಾಜ ಸೇವಾ ಸಂಘ ಸಂಸ್ಥೆಗಳ ಮುಖಂಡರುಗಳಾದ ಕಲ್ಲುಕಂಬ ಪಂಪಾಪತಿ, ಕಪ್ಪಗಲ್ ರಸೂಲ್ ಸಾಬ್, ನಿಷ್ಠಿ ರುದ್ರಪ್ಪ, ಜೆ ಎಂ ಬಸವರಾಜ ಸ್ವಾಮಿ, ಸಿ ಮಂಜುನಾಥ್, ಬಿ ಚಂದ್ರಶೇಖರ ಆಚಾರ್, ಹಂದ್ಯಾಳ್ ಪುರುಷೋತ್ತಮ್, ಬಿ ಬಸವರಾಜ್, ಕುರುಗೋಡು ಚನ್ನಬಸವರಾಜ್, ಬಂಡ್ರಾಳ್ ಮೃತ್ಯುಂಜಯ ಸ್ವಾಮಿ, ಪ್ರತಾಪ ರೆಡ್ಡಿ, ಕಿರಣ್ ಕುಮಾರ್, ದರೂರ ಶಾಂತನ ಗೌಡ, ಕುಂದಾಪುರ ನಾಗರಾಜ್, ದೇಸಯಿ ಷಡಾಕ್ಷರಪ್ಪ, ಪಿ. ಪೆಂಚಾಲಯ್ಯ, ಕೆ ಎಸ್ ಚಂದ್ರಶೇಖರ, ಚಂದ್ರಣ್ಣ, ವಿಶ್ವನಾಥ್ ಶೆಟ್ಟಿ, ಹಣ್ಣುಕಾಯಿ ಶಿವ ರುದ್ರಯ್ಯ ಸ್ವಾಮಿ, ರಂಗ ಕಲಾವಿದರಾದ ಬಿ ಸುಜಾತಮ್ಮ, ವರಲಕ್ಷ್ಮಿ, ಎಸ್ ಲಕ್ಷ್ಮಿ, ಎ ಎಂ ಜಯಶ್ರೀ ಮತ್ತು ಎನ್ ಡಿ ವೆಂಕಮ್ಮ ಅವರನ್ನು ಸುಭದ್ರಮ್ಮ ಮನ್ಸೂರು ಅವರು ಸಂಘದ ಪರವಾಗಿ ಸನ್ಮಾನ ಪತ್ರ ನೀಡಿ ಗೌರವಿಸಿದರು.
ಯುವ ಕಲಾವಿದರಾದ ಎರ್ರೆಗೌಡ, ಶಂಕರಬಂಡೆ ಯಲ್ಲನಗೌಡ ಮತ್ತು ಹನುಮಯ್ಯ ತಂಡದವರು ಜಾನಪದ ಗೀತೆ ಹಾಗೂ ಕನ್ನಡ ಗೀತೆಗಳ ಗಾಯನ ಪ್ರಸ್ತುಪಡಿಸಿದರು.
ಮೇಡಂ ಕ್ಯೂರಿ ಅಕಾಡೆಮಿಯ ಅಧ್ಯಕ್ಷ ಎಸ್ ಮಂಜುನಾಥ್ ಸ್ವಾಗತಿಸಿ ನಿರೂಪಿಸಿದರು. ಬಸವರಾಜ ಅಮಾತಿ ವಂದಿಸಿದರು.
0 comments:
Post a Comment