ಕೊಪ್ಪಳ : ನಗರೋತ್ಥಾನ ಯೋಜನೆಯಲ್ಲಿ ನಗರದ ಎಲ್ಲ ವಾರ್ಡಗಳಲ್ಲಿ ವಿವಿಧ ಅಭಿವೃದ್ದಿ ಕಾಮಗಾರಿಗಳಿಗೆ ಚಾಲನೆ ದೊರಿತಿದೆ. ವಿವಿಧ ಯೋಜನೆಗಳನ್ನು ಹಮ್ಮಿಕೊಳ್ಳಲಾಗಿದೆ. ಕನಿಷ್ಠ ರೂ. ೪೧ ಲಕ್ಷಕ್ಕೂ ಮೀರಿದಂತಹ ಯೋಜನೆಗಳು ಇವೆ. ೩ನೇ ವಾರ್ಡಿಗೆ ೩ ಕೋಟಿ ೨೯ ಲಕ್ಷದ ಯೋಜನೆಗಳು ಜಾರಿಯಾಗುತ್ತಿವೆ. ಆದರೆ ನಮ್ಮ ೧೮ನೇ ವಾರ್ಡಿಗೆ ಯಾವುದೇ ಕಾಮಗಾರಿಗಳು ಇಲ್ಲ ಯಾಕೆ? ಕನಿಷ್ಠ ಮೂಲಭೂತ ಸೌಕರ‍್ಯಗಳನ್ನೂ ಒದಗಿಸಲು ಯಾವುದೇ ರೀತಿಯ ಯೋಜನೆಗಳು ಇಲ್ಲ ಯಾಕೆ ?
ಈ ರೀತಿಯ ಮಲತಾಯಿ ಧೋರಣೆ ಯಾಕೆ? ಈ ಸಲದ ನಗರೋತ್ಥಾನ ಯೋಜನೆಯಲ್ಲಿ ನಮ್ಮ ೧೮ನೇ ವಾರ್ಡನ್ನು ಸೇರಿಸಿಕೊಳ್ಳಬೇಕು. ಮತ್ತು ಕನಿಷ್ಠ ಮೂಲಭೂತ ಸೌಲಭ್ಯಗಳನ್ನು ಒದಗಿಸಬೇಕು. ಈ ರೀತಿಯ ನಿರ್ಲಕ್ಷ್ಯ ಧೋರಣೆ ಮುಂದುವರಿಸಿ ನಮ್ಮ ವಾರ್ಡಿಗೆ ಯಾವುದೇ ರೀತಿಯ ಯೋಜನೆಗಳನ್ನು ಜಾರಿ ಮಾಡದಿದ್ದರೆ ನಗರಸಭೆಯ ವಿರುದ್ದ ಪ್ರತಿಭಟನೆಯನ್ನು ಹಮ್ಮಿಕೊಳ್ಳುತ್ತೇವೆ ಎಂದು ಎಚ್ಚರಿಸಿದ್ದಾರೆ.
0 comments:
Post a Comment