ಕೊಪ್ಪಳ ಜಿಲ್ಲಾ ವ್ಯಾಪ್ತಿಯಲ್ಲಿ ತ್ರಿಚಕ್ರ (ಆಟೋರಿಕ್ಷಾ ಕ್ಯಾಬ್) ವಾಹನಗಳಿಗೆ ರಹದಾರಿ ಪಡೆಯಲು ಇನ್ನು ಮುಂದೆ ಸ್ಥಳೀಯರಾಗಿದ್ದು, ತ್ರಿಚಕ್ರ ವಾಹನ (ಆಟೋರಿಕ್ಷಾ ಕ್ಯಾಬ್) ಚಾಲನಾ ಅನುಜ್ಞಾ ಪತ್ರ (ಡ್ರೈವಿಂಗ್ ಲೈಸೆನ್ಸ್) ಮತ್ತು ಬ್ಯಾಡ್ಜನ್ನು ಕಡ್ಡಾಯಗೊಳಿಸಿದೆ.
ಇನ್ನು ಮುಂದೆ ಆಟೋರಿಕ್ಷಾ ಖರೀದಿದಾರರು ತ್ರಿಚಕ್ರ ವಾಹನ (ಆಟೋರಿಕ್ಷಾ ಕ್ಯಾಬ್) ಚಾಲನಾ ಅನುಜ್ಞಾ ಪತ್ರ ಮತ್ತು ಬ್ಯಾಡ್ಜನ್ನು ಹೊಂದಿರಬೇಕು. ಮತ್ತು ಸ್ಥಳೀಯರಾದವರು ಮಾತ್ರ ಆಟೋರಿಕ್ಷಾ ಕ್ಯಾಬ್ ರಹದಾರಿ ಪಡೆಯಲು ಅರ್ಹರಿರುತ್ತಾರೆಂದು ಕೊಪ್ಪಳ ಪ್ರಾದೇಶಿಕ ಸಾರಿಗೆ ಅಧಿಕಾರಿಗಳು ತಿಳಿಸಿದ್ದಾರೆ.
ರಾಜ್ಯದ ಯಾವುದೇ ತ್ರಿಚಕ್ರ ವಾಹನ ಮಾರಾಟಗಾರರು, ಕೊಪ್ಪಳ ಜಿಲ್ಲಾ ವ್ಯಾಪ್ತಿಯ ಖರೀದಿದಾರರು ತ್ರಿಚಕ್ರ ವಾಹನ ಖರೀದಿಸಿದಲ್ಲಿ, ಖರೀದಿ ಪತ್ರ (ನಮೂನೆ-೨೧) ವಿತರಿಸುವ ಮುಂಚೆ ಅಂತಹ ಗ್ರಾಹಕರು ತ್ರಿಚಕ್ರ ಚಾಲನಾ ಅನುಜ್ಞಾ ಪತ್ರ ಮತ್ತು ಬ್ಯಾಡ್ಜನ್ನು ಹೊಂದಿರುವ ಬಗ್ಗೆ ಮತ್ತು ಕೊಪ್ಪಳ ಜಿಲ್ಲಾ ವ್ಯಾಪ್ತಿಯ ನಿವಾಸಿ ಎಂಬ ಬಗ್ಗೆ ಖಾತರಿ ಪಡಿಸಿಕೊಂಡು ಖರೀದಿ ಪತ್ರ ಮತ್ತು ತಾತ್ಕಾಲಿಕ ನೊಂದಣಿ ವಿತರಿಸಲು ಸೂಚನೆ ನೀಡಲಾಗಿದೆ.
ರಾಜ್ಯದ ಪ್ರಾದೇಶಿಕ ಸಾರಿಗೆ ಅಧಿಕಾರಿಗಳು/ಸಹಾಯಕ ಸಾರಿಗೆ ಪ್ರಾದೇಶಿಕ ಅಧಿಕಾರಿಗಳು ಜಿಲ್ಲಾ ವ್ಯಾಪ್ತಿಯ ತ್ರಿಚಕ್ರ ವಾಹನಗಳಿಗೆ ತಾತ್ಕಾಲಿಕ ನೊಂದಣಿ ಮತ್ತು ಸಿಸಿ ವಿತರಿಸುವ ಸಂದರ್ಭದಲ್ಲಿ ವಾಹನ ಖರೀದಿದಾರರು ತ್ರಿಚಕ್ರ ಚಾಲನಾ ಅನುಜ್ಞಾ ಪತ್ರ ಮತ್ತು ಬ್ಯಾಡ್ಜ ಹೊಂದಿದವರಿಗೆ ಮಾತ್ರ ತಾತ್ಕಾಲಿಕ ನೊಂದಣಿ ವಿತರಿಸಲು ಮತ್ತು ಸಿಸಿ ವಿತರಿಸಲು ಕೊಪ್ಪಳ ಪ್ರಾದೇಶಿಕ ಸಾರಿಗೆ ಅಧಿಕಾರಿಗಳು ತಿಳಿಸಿದ್ದಾರೆ.
0 comments:
Post a Comment