PLEASE LOGIN TO KANNADANET.COM FOR REGULAR NEWS-UPDATES


  1. ನಗರಸಭೆಯ ನೂತನ ಅಧ್ಯಕ್ಷೆ ಲತಾ ವೀರಣ್ಣ ಸೊಂಡೂರ ಹಾಗೂ ಉಪಾಧ್ಯಕ್ಷರಾದ ಅಮ್ಜದ್ ಪಟೇಲ್ ರವರು ಬುಧವಾರ ನಗರದ ಕಾತರಕಿ ರಸ್ತೆಯಲ್ಲಿರುವ ಶುದ್ಧೀಕರಣ ಘಟಕದಲ್ಲಿ ನಡೆಯುತ್ತಿರುವ ಎರಡನೇ ಹಂತದ ಕುಡಿವ ನೀರಿನ ಜೆಎಲ್‌ಎಸ್‌ಆರ್ ಟ್ಯಾಂಕಿನ ಕಾಮಗಾರಿಯನ್ನು ವೀಕ್ಷಣೆ ಮಾಡಿದರು.
    ವೀಕ್ಷಣೆ ಮಾಡಿದ ಅಧ್ಯಕ್ಷ-ಉಪಾಧ್ಯಕ್ಷರು ನಂತರ ಸ್ಥಳದಲ್ಲಿ ಉಪಸ್ಥಿತರಿದ್ದ ಸಂಬಂಧಪಟ್ಟ ಅಧಿಕಾರಿಗಳಿಗೆ ಈ ಕಾಮಗಾರಿಯನ್ನು ಗುಣಮಟ್ಟದಿಂದ ಕೈಗೊಳ್ಳುವಂತೆ ಸೂಚಿಸಿದರು. ಈ ಕಾಮಗಾರಿಯಿಂದ ನಗರದ ಜನತೆಗೆ ಶುದ್ಧ ಕುಡಿವ ನೀರು ಪೂರೈಕೆಗೆ ಅನುಕೂಲವಾಗಲಿದ್ದು, ಜನತೆಯ ಆಶೋತ್ತರಗಳಿಗೆ ಜನಪ್ರತಿನಿಧಿಗಳು ಸ್ಪಂಧಿಸಿದಾಗ ಮಾತ್ರ ಜನತೆಗೆ ನಾವು ಮಾಡುವ ಸಾಮಾಜಿಕ ಸೇವೆ ಅರ್ಥವಾಗುತ್ತದೆ ಎಂದು ಅಧ್ಯಕ್ಷರು ಅಭಿಪ್ರಾಯಪಟ್ಟರು. ಇದೇ ವೇಳೆ ಉಪಾಧ್ಯಕ್ಷ ಅಮ್ಜದ್ ಪಟೇಲ್ ಮಾತನಾಡಿ, ಕೊಪ್ಪಳ ನಗರದ ನಾಗರಿಕರ ಬಹು ವರ್ಷಗಳ ಬೇಡಿಕೆ ಮುಖ್ಯವಾಗಿ ಕುಡಿವ ನೀರಿನ ಶುದ್ಧೀಕರಣ ಮಾಡಿ ಪೂರೈಸಬೇಕೆಂಬ ಒತ್ತಾಸೆ ಇದೀಗ ಈಡೇರುವ ಕಾಲ ಸನ್ನಿಹಿತವಾಗಿದೆ ಎಂದರು. ತಮ್ಮದೆ ಪಕ್ಷ ಆಡಳಿತವಿರುವುದರಿಂದ ಕೊಪ್ಪಳ ನಗರದ ಸಮಗ್ರ ಅಭಿವೃದ್ಧಿಗೆ ಪ್ರಾಮಾಣಿಕವಾಗಿ ಶ್ರಮಿಸುವುದಾಗಿ ಭರವಸೆ ನೀಡಿದರು.
    ನಗರಸಭೆ ಸದಸ್ಯರಾದ ಮಹೇಶ ಬಜಂತ್ರಿ, ಸಂಬಂಧಪಟ್ಟ ಅಧಿಕಾರಿಗಳು ಮತ್ತಿತರರು ಉಪಸ್ಥಿತರಿದ್ದರು.

Advertisement

0 comments:

Post a Comment

 
Top