ಸೋಲು, ನಿರಾಸೆ, ಹತಾಶೆ ಹಾಗೂ ತಳಮಳ ನಮ್ಮನ್ನು ಕಾಡುವ ಬೇಡವಾದ ಶತ್ರುಗಳು. ಈ ಶತ್ರುಗಳನ್ನ ನಾವೇನು ಬಯಸುವುದಿಲ್ಲವಾದರು, ನಮಗರಿವಿಲ್ಲದಂತೆ ಅಂಟಿಕೊಂಡು ಬೆಂಬತ್ತಿಬಿಡುತ್ತವೆ.
ಅಂತಹ ಅನಿವಾರ್ಯ ಬ್ಲಾಕ್ ಸಂಧರ್ಭ, ಖಾಲಿತನ ಎಲ್ಲರಿಗೊ ಒಂದೊಂದು ಸಲ ಎಲ್ಲರ ಬದುಕಿನಲ್ಲಿ ಬರುತ್ತದೆ, ಎಂದು ಮನೋವಿಜ್ಜಾನಿಗಳು ವಿವರಿಸಿದರೆ, ಸಂಧಿ ಕಾಲವೆಂದು ಜ್ಯೋತಿಷಿಗಳು ವಿಶ್ಲೇಷಿರುತ್ತಾರೆ'
ಸಂಧಿಗಾಗಿ ಜ್ಯೋತಿಷ್ಯ ಶಾಸ್ತ್ರ ಸಂಧಿ ಶಾಂತಿ ಹೋಮ ಹವನಗಳನ್ನ ಹೇಳಿದರೆ, ಮನೋವಿಜ್ಞಾನಿ ಗಳು ಸೊಕ್ತ ಆಪ್ತ ಸಮಾಲೋಚನೆ ಇರಲಿ ಎನ್ನತ್ತದೆ.
ಆದರೆ ಅಂತಹ ತಲ್ಲಣಗಳನ್ನ ಎಲ್ಲಂದರಲ್ಲಿ ನಿರರ್ಥಕ ಅಲೆದಾಟವಿರುತ್ತದೆ.ಎರಡು ದಶಕಗಳ ನನ್ನ ಸಾರ್ವಜನಿಕ ಬದುಕಿನಲ್ಲಿ ಹಾಡಿ ಹೊಗಳಿದವರು ಮಾರ್ಗದರ್ಶನ ಪಡೆದು, ಧನ್ಯರಾದಂತವರು ಕೊಡ ಆನಗತ್ಯವಾದ ಸಲಹೆ ನೀಡಲು ಆರಂಭಿಸಿದ್ದನ್ನು ಎದುರಿಸಿದ್ದೇನೆ. ಅದು ಅವರ ತಪ್ಪಲ್ಲ ಕೆಳಗೆ ಬಿದ್ದಂತೆ ಒದ್ದಾಡುವ ನನ್ನ ಮಿತಿಗಾಗಿ ಹಾಗೆ ನೆಡದುಕೊಂಡಿರಬಹುದಲ್ಲವೆ?
ಹಾಗಂತ ನಮ್ಮ ಖಾಲಿತನ, ನಿರಾಸೆಯ ಪ್ರಸಂಗ ಗಳಲ್ಲಿ ವ್ಯದ್ಯಕೀಯ ಚಿಕಿತ್ಸೆಯ ಮೊರೆ ಹೋಗದೆ, ಆಪ್ತರೆನಿಸಿ, ಆಪ್ತರಂದು ಖಾತ್ರಿಯಾದವರೊಂದಿಗೆ ಹಂಚಿಕೊಳ್ಳಬೇಕು.
ಪ್ರತಿಯೊಬ್ಬರ ಬದುಕನ್ನು ಒಮ್ಮೆ 'ಆತ್ಮಅತ್ಯೆ'ಯ ಭೊತ ಬಡಿದುಕೊಂಡು, ಅವರನ್ನು ಬಲಿ ತೆಗುದುಕೊಳ್ಳಲು ಕಾರಣ ಅವರ ಒಂಟಿತನ ಹಾಗೊ ಆಪ್ತ ಸಮಾಲೋಚನೆಯ ಕೊರತೆ. ಒಂಟಿತನವನ್ನು ಎಕಾಂತವನ್ನಾಗಿ ಪರಿವರ್ತಿಸಿಕೊಂಡವರು ಸಾವಿನ ಬಾಗಿಲು ತಟ್ಟಿ ಇಲ್ಲವಾಗುತ್ತಾರೆ.
ವೃತ್ತಿ ಪಲ್ಲಟ ಹಾಗೊ ತಳಮಳಗಳ ತವರಲ್ಲಿದ್ದಾಗ ನಾನು ಕೊಡ ಖಾಸಗಿ ಗೆಳೆಯರೊಂದಿಗೆ ಭಾವನೆಗಳನ್ನ ಮುಕ್ತವಾಗಿ ಹಂಚಿಕೊಂಡು ಅವರ ಸಹನೆಯನ್ನು ಅಗ್ನಿ ಪರೀಕ್ಷೆಗೆ ಒಡ್ಡಿದ್ದೇನೆ. ಆಗ ಉಳಿದವರು ಕಡೇ ತನಕ ಉಳಿಯುತ್ತಾರೆ ಎಂಬ ವಿಶ್ವಾಸವು ನನಗಿತ್ತು.
ಕಳೆದೆ ದಶಕದಿಂದ ವ್ಯಕ್ತಿತ್ವ ವಿಕಾಸನದ ಟ್ರೆನಿಂಗ್ ಗುರು ಎನಿಸಿಕೊಂಡು ಶಹಬ್ಬಾಸಗಿರಿ ಗಿಟ್ಟಿಸಿದ ನಾನೇ ಅಗ್ನಿಪ್ರರೀಕ್ಷೆ ಯಲ್ಲಿಬೆಂದಾಗ ಅದಕ್ಕೆ ಪರಿಪೊರ್ಣತೆ ಸಿಕ್ಕಿತು.
ನನ್ನ ಆತಂಕ ಭಯ ಕಂಡವರು ನಾನ್ಯಾವ ಸೀಮೆ ಟ್ರೇನರ್ ಎಂದು ಮೊದಲಿಸಿದರು ಸಹಿಸಿಕೊಂಡೆ. ಇಷ್ಟು ದಿನ ತರಬೇತಿಯ ಪಠ್ಯವಾಗಿ 'ನಿರ್ಭಯ ' ಸೇರಿಕೊಳ್ಳಲು ನನ್ನ ಆತಂಕದ ದಿನಗಳು ಕಾರಣವಾದವು.
ಈಗ ಅಂತಿಮ ನಿರ್ಣಯಕ್ಕೆ ಬಂದಿದ್ದೇನೆ, ನಿರ್ಭಯ ನೀತಪ್ರತೆ ಹಾಗೊ ನಿರಾಕರಣೆಯ ತ್ರಿಸೊತ್ರಗಳು ಈಗ ನನ್ನ ಬದುಕಿನ ಯಶಸ್ಸಿನ, ನೆಮ್ಮದಿ ಬದುಕಿನ ಸಮರ್ಥ ಸೊತ್ರಗಳೆನಿಸಿವೆ.
ಅದೇ ಜಾದು ಹಿಡುಕೊಂಡು ಈಗ ಯುಧ್ಧಕ್ಕೆ ಸದ್ಧನಾಗಿದ್ದೇನೆ. ಕೆಲದಿನ ತುಕ್ಕು ಹಿಡಿದಿದ್ದ ಲೇಖನಿ , ನಾಲಿಗೆಗೆ ಕೆಲಸ ಕೊಟ್ಟಿದ್ದೇನೆ. ಆರು ತಿಂಗಳ 'ಎಕಾಂತ'ದ ಹಿತದಿಂದ ಪಕ್ವವಾಗಿದ್ದೇನೆ ಎಂಬ ಆತ್ಮವಿಶ್ವಾಸ.
ನಾವು ಅನಿವಾರ್ಯವಾಗಿ ಆತಂಕಕ್ಕೆ ಒಳಗಾದಾಗ ಆ ತಪ್ಪನ್ನು ಬೇರೆಯವರ ಮೇಲೆ ಹೊರಿಸಲು ನೋಡುತ್ತೇವೆ. ಆ ಸ್ಥಿತಿಗೆ ನಮ್ಮ ನಿರ್ಣಯಗಳು ಹಾಗೊ ಆಯ್ಕೆಗಳೇ ಕಾರಣ ಎಂಬುದನ್ನ ಒಪ್ಪಲೇಬೇಕು.
ಅವರಿಂದ ಹೀಗಾಯ್ತು, ಇವರಿಂದ ಹೀಗಾಯ್ತು , ಅವರನ್ನು ನಂಬಿದ್ದೇ ತಪ್ಪಾಯಿತೆಂದು ಬೇರೆಯವರನ್ನುದೊಷಿಸುವುದು.
ನನ್ನ ಎಳು-ಬಿಳುಗಳಿಗೆ, ಸರಿ-ತಪ್ಪುಗಳಿಗೆ ನಾನೇ ಕಾರಣ , ನನ್ನ ನಿರ್ಣಯಗಳೇ ಕಾರಣವೆಂದು ಒಪ್ಪಿಕೊಂಡಿದ್ದೇನೆ.
ಸೋಲುವಂತೆ ಭಾಸವಾಗಿರುವ ಸಂಗತಿಗಳನ್ನು ಏರುವ ಮೆಟ್ಟಿಲುಗಳು ಎಂದು ಸ್ವೀಕರಿಸಿದ್ದೇನೆ. "ಆಗುವುದೆಲ್ಲಾ ಒಳ್ಳೆಯದು", 'ಬಾರದು ಬಪ್ಪದು, ಬಪ್ಪದು ತಪ್ಪದು', ಎಂಬ ವಾಣಿಯಲ್ಲಿ ಮೆಲುಕು ಹಾಕುತ್ತೇನೆ.
ಸತ್ತನೆಂದನಬೇಡ, ಸೋತೆನೆಂದನಬೇಡ ಎಂಬ ಕಗ್ಗದ ಸಾಲುಗಳನ್ನ ಮಂತ್ರಿಸುತ್ತಾ ಬಾರನೆದುಡಿಸಬೇಕು.
ನಿರ್ಭಯ ಸೊತ್ರವ ವಿವಿಧ ಮಗ್ಗುಲಗಳನ್ನು. ಭಯದ ಮೊಲದ ವಿವಿಧ ಹಂತಗಳನ್ನು ಎದುರಿಸುವುದನ್ನು ರೊಢಿಸಿಕೊಳ್ಳಬೇಕು.
ನಿರ್ಭಯ, ನಿರಾಕರಣೆ ಹಾಗೊ ನಿರ್ಲಿಪ್ತತೆಯ ಸೊತ್ರಗಳನ್ನು ಗೆಳೆಯರು ಮೆಚ್ಚಿಕೊಂಡಿದ್ದಾರೆ. ವ್ಯಾಖ್ಯಾನಿಸುವ ಬಗೆಯನ್ನು ಪ್ರಶಂಸಿಸಿದ್ದಾರೆ. ಅವುಗಳನ್ನು ಸಮರ್ಥವಾಗಿ ಅಳವಡಿಸಿಕೊಂಡು ಖಚಿಟಿಞ ಗಳಿಸದೇ ಹೋದರು, ಕನಿಷ್ಟ ಪಾಸಾಗಿದ್ದಾರೆ, ತರಬೇತಿ ಅರ್ಥಪೊರ್ಣವೆನಿಸಬಹುದನಿಸಿದೆ. -ಸಿದ್ದು ಯಾಪಲಪರವಿ
0 comments:
Post a Comment