PLEASE LOGIN TO KANNADANET.COM FOR REGULAR NEWS-UPDATES

    ಕೊಪ್ಪಳ :   ಕೃಷ್ಣಾ ಜಲಾನಯನ ಪ್ರದೇಶದ ಬಿ ಸ್ಕೀಂ ಯೋಜನೆಗಳನ್ನು ಕಾಲಮಿತಿಯಲ್ಲಿಯೇ ಪೂರ್ಣಗೊಳಿಸಲು ಸುಮಾರು ೬೫ ಸಾವಿರ ಕೋಟಿ ರು.ಗಳನ್ನು ಮೀಡಲು ಇಡಲಾಗುವುದು ಹಾಗೂ ಅದರಂತೆ ಸಮರೋಪಾದಿಯಲ್ಲಿ ಸಂಪನ್ಮೂಲಗಳನ್ನು ಕಚೇರಿಗಳನ್ನು ಮತ್ತು ಸಿಬ್ಬಂದಿಯನ್ನು ಒದಗಿಸಲಾಗುವುದು ಎಂದು ಸರಕಾರ ಘೋಷಣೆ ಮಾಡಿರುವುದು ಸ್ವಾಗತಾರ್ಹ. ಕರ್ನಾಟಕ ರಾಜ್ಯದ ನೀರಾವರಿ ಯೋಜನೆಗಳ ಅಚ್ಚುಕಟ್ಟು ಪ್ರದೇಶಗಳನ್ನು ವೈಜ್ಞಾನಿಕವಾಗಿ ಅಭಿವೃದ್ಧಿಪಡಿಸಿ ರಾಜ್ಯದ ರೈತರ ಜಮೀನಿಗೆ ಸುಗಮವಾದ ನೀರಿನ ಪೂರೈಕೆ ಒದಗಿಸಲು ಸರಕಾರವು ಕರ್ನಾಟಕ ಅಚ್ಚುಕಟ್ಟು ಪ್ರದೇಶಾಭಿವೃದ್ಧಿ ಕಾಯ್ದೆ ೧೯೮೦ ಕ್ಕೆ ತಿದ್ದುಪಡಿ ಮಾಡಿ ೨೦೧೨ರ ನವೆಂಬರ್ ೧೭ರಂದು ಆದೇಶ ಹೊರಡಿಸಿ, ಅಚ್ಚುಕಟ್ಟು ಪ್ರದೇಶಾಭಿವೃದ್ಧಿ ನಿರ್ದೇಶನಾಲಯವನ್ನು ಸ್ಥಾಪಿಸಿದೆ. ಆದರೆ ಉನ್ನತ ಅಽಕಾರಿಗಳು ಕೇವಲ ದಕ್ಷಿಣ ಭಾಗದ ಜಲಾನಯನ ಪ್ರದೇಶದ ಅಂತಿಮಹಂತದ ಯೋಜನೆಗಳನ್ನು ಗಮನದಲ್ಲಿಟ್ಟುಕೊಂಡು ವಿಭಾಗ ಮತ್ತು ಉಪವಿಭಾಗಗಳ ಸಂಖ್ಯೆ ಮತ್ತು ಸಿಬ್ಬಂದಿಯನ್ನು ಗುರುತಿಸದೇ ದಕ್ಷಿಣ ಭಾಗದ ಜಲಾನಯನ ಪ್ರದೇಶದ ನೀರಾವರಿ ಯೋಜನೆಗಳು ಅಂತಿಮ ಹಂತದಲ್ಲಿರುವುದರಿಂದ ಅದನ್ನೇ ಮಾನದಂಡವನ್ನಾಗಿ ಪರಿಗಣಿಸಿ ಪ್ಗತಿಯಲ್ಲಿರುವ ಕೃಷ್ಣಾ ಕಣಿವೆ ಪ್ರದೇಶದ ಅಚ್ಚುಕಟ್ಟು ಅಭಿವೃದ್ಧಿ ಪ್ರಾಽಕಾರಗಳ ಕಾರ್ಯಾಲಯಗಳನ್ನು ಶೇಕಡಾ ೮೦ ರಷ್ಟು ಕಡಿತಗೊಳಿಸಿದ್ದು ಎಳ್ಳಷ್ಟೂ ಸಮಂಜಸವಲ್ಲ. ಇದರಿಂದ ರೈತರ ಜಮೀನಿಗೆ ನೀರೊದಗಿಸಲು ಆಡಳಿತ ಯಂತ್ರದ ಕೊರತೆ ಕಾಣುತ್ತದೆ ಎಂದು ಹೈದರಾಬಾದ ಕರ್ನಾಟಕ ಜನಪರ ಸಂಘರ್ಷ ಸಮಿತಿಯ ಸಂಸ್ಥಾಪಕ ಅಧ್ಯಕ್ಷ ಲಕ್ಷ್ಮಣ ದಸ್ತಿ ಹೇಳಿದರು. 
           ಕೊಪ್ಪಳ ಮೀಡಿಯಾ ಕ್ಲಬ್‌ನಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಅವರು, ಹೈದ್ರಾಬಾದ್ ಕರ್ನಾಟಕ ಪ್ರದೇಶದ ಗೋದಾವರಿ, ಭೀಮಾ, ಕೃಷ್ಣ ಮತ್ತು ತುಂಗಭದ್ರಾ ಜಲಾನಯನ ಪ್ರದೇಶದ ಯೋಜನೆಗಳು ಬೀದರ್, ಗುಲಬರ್ಗಾ, ಯಾದಗಿರಿ, ರಾಯಚೂರು, ಕೊಪ್ಪಳ, ಬಳ್ಳಾರಿ, ಬಾಗಲಕೋಟೆ ಮತ್ತು ಬಿಜಾಪುರ ಜಿಲ್ಲೆಗಳ ಅಚ್ಚುಕಟ್ಟು ಪ್ರದೇಶಾಭಿವೃದ್ಧಿಯನ್ನು ಕೈಗೊಳ್ಳುತ್ತಿರುವ ನೀರಾವರಿ ಯೋಜನಾ ವಲಯ ಗುಲಬರ್ಗಾ, ಕೃಷ್ಣಾ ಕಾಡಾ ಭೀಮರಾಯನಗುಡಿ ಮತ್ತು ತುಂಗಭದ್ರಾ ಯೋಜನೆ ಮುನಿರಾಬಾದ್ ಈ ಮೂರು ಪ್ರಾಽಕಾರಗಳ ಅಡಿಯಲ್ಲಿ ಈ ಹಿಂದೆ ೫ ಇಂಜನಿಯರಿಂಗ್ ವಿಭಾಗಗಳು, ೧೯ ಇಂಜನಿಯರಿಂಗ್ ಉಪವಿಭಾಗಗಳು, ೩ ಕೃಷಿ ಮತ್ತು ಸಹಕಾರ ವಿಭಾಗಗಳು, ೮ ಕೃಷಿ ಮತ್ತು ಸಹಕಾರ ಉಪವಿಭಾಗಗಳು ಅಸ್ತಿತ್ವದಲ್ಲಿದ್ದವು. ಈ ಎಲ್ಲ ವಿಭಾಗ ಹಾಗೂ ಉಪವಿಭಾಗಗಳಲ್ಲಿ ಸುಮಾರು ೮೦೦ ಜನ ಇಂಜನಿಯರ್‌ಗಳು ಸೇರಿದಂತೆ ತಾಂತ್ರಿಕೇತರ ಸಿಬ್ಬಂದಿ ಕಾರ್ಯ ನಿರ್ವಹಿಸುತ್ತಿದ್ದರು. ಆದರೆ ಸರಕಾರ ಈಗ ಕೇವಲ ೪ ಎಂಜನಿಯರಿಂಗ್ ವಿಭಾಗಗಳು, ೪ ಇಂಜನಿಯರಿಂಗ್ ಉಪವಿಭಾಗಗಳು ಮತ್ತು ೪ ಕೃಷಿ ಮತ್ತು ಸಹಕಾರ ಉಪವಿಭಾಗಗಳು ಮಾತ್ರ ಇರಬೇಕೆಂದು ಆದೇಶ ಹೊರಡಿಸಿ ಎಲ್ಲ ಸಿಬ್ಬಂದಿಯನ್ನು ದಕ್ಷಿಣ ಭಾಗದ ಯೋಜನೆಗಳಿಗೆ ವರ್ಗಾಯಿಸಿಕೊಳ್ಳುತ್ತಿದೆ. ಪ್ರಸ್ತುತ ಆದೇಶದಂತೆ ಈ ಭಾಗದ ಯೋಜನೆಗಳಿಗೆ ನೀಡಿರುವ ಕಚೇರಿ ಮತ್ತು ಸಿಬ್ಬಂದಿ ರಾವಣನ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆ ನೀಡಿದಂತಾಗಿದೆ. ಈ ಅವೈಜ್ಞಾನಿಕ ನಿರ್ಧಾರದ ಬಗ್ಗೆ ಸರಕಾರ ಮರು ಪರಿಶೀಲನೆ ನಡೆಸಿ ಈ ಹಿಂದೆ ಇದ್ದಂತೆ ವಿಭಾಗ ಹಾಗೂ ಉಪವಿಭಾಗಗಳು ಕಾರ್ಯ ನಿರ್ವಹಿಸುವಂತೆ ವ್ಯವಸ್ಥೆ ಮಾಡುವುದು ಅಗತ್ಯವಾಗಿದೆ ಎಂದು ಅವರು ಸಲಹೆ ನೀಡಿದರು.
            ಆಗಸ್ಟ ೮ ರಂದು ಬೆಂಗಳೂರಿನಲ್ಲಿ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ಈ ಅವೈಜ್ಞಾನಿಕ ಹಾಗೂ ತಾರತಮ್ಯದ ಕಾರ್ಯಾಲಯಗಳ ಸ್ಥಾಪನೆ ಆದೇಶವನ್ನು ಮರುಪರಿಶೀಲಿಸಲು ಒತ್ತಾಯಿಸಲಾಗುವುದು. ಸರಕಾರ ಸ್ಪಂದಿಸದಿದ್ದಲ್ಲಿ ಬೆಂಗಳೂರಿನಲ್ಲಿರುವ ನೀರಾವರಿ ಇಲಾಖೆಯ ಅಚ್ಚುಕಟ್ಟು ಅಭಿವೃದ್ಧಿ ನಿರ್ದೇಶನಾಲಯ ಕಚೇರಿಯ ಎದುರು ಮುಂದೆ ವಿವಿಧ ಹಂತಗಳಲ್ಲಿ ಹೋರಾಟ ಮಾಡಲು ನಿರ್ಧರಿಸಲಾಗಿದೆ ಎಂದು ಅವರು ಎಚ್ಚರಿಸಿದರು.
        ಪತ್ರಿಕಾಗೋಷ್ಠಿಯಲ್ಲಿ ಹೈ.ಕ. ಜನಪರ ಸಂಘರ್ಷ ಸಮಿತಿಯ ಮುಖಂಡರಾದ ನಾಗಲಿಂಗಯ್ಯ ಮಠಪತಿ, ಎಸ್.ಎನ್.ಮೋದಿ, ನಿಂಗಣ್ಣ ಮತ್ತಿತರರು ಇದ್ದರು. 

Advertisement

0 comments:

Post a Comment

 
Top