ನಗರದ ಸಾಹಿತ್ಯ ಭವನದಲ್ಲಿ ಜಾಲಿಬಾಯ್ಸ್ ಆರ್ಕೇಸ್ಟ್ರ ತಂಡದಿಂದ ಚಲನಚಿತ್ರ ರಂಗದ ಸ್ವರ ಸಾಮ್ರಾಟ, ನಾಡೋಜ ಪ್ರಶಸ್ತಿ ಪುರಸ್ಕ್ರತರಾದ ದಿ||ಡಾ||ಪಿ.ಬಿ.ಶ್ರೀನಿವಾಸರವರ ಸ್ವರ ಶ್ರದ್ಧಾಂಜಲಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾಜಿ ಸಚಿವರಾದ ಅಮರೇಗೌಡ ಬಯ್ಯಾಪುರ ಅವರು ಮೇಲಿನಂತೆ ಹೇಳಿದರು. ಮತ್ತೊರ್ವ ಅತಿಥಿಗಳಾದ ಶೇಖರಗೌಡ ಮಾಲಿಪಾಟೀಲ ಮಾಜಿ ಕನ್ನಡ ಸಾಹಿತ್ಯ ಪರಿಷತ್ ಮಾಜಿ ಜಿಲ್ಲಾಧ್ಯಕ್ಷರು ಮಾತನಾಡುತ್ತ, ಜಿಲ್ಲೆಯಲ್ಲಿ ಸಾಹಿತ್ಯಕ ಹಾಗೂ ಸಾಂಸ್ಕೃತಿಕ ವಾತಾವಾರಣ ನಿರಂತರವಾಗಿರಲು ಇಂತಹ ಕಾರ್ಯಕ್ರಮಗಳು ಪೂರಕವಾಗಿವೆ ಎಂದು ಹೇಳಿದರು.
ಸಂಗೀತ ಶಿಕ್ಷಕರಾದ ಅಂಬಣ್ಣ ಕೊಪ್ರದ್ ಅವರು ದಿ||ಪಿ.ಬಿ.ಯವರ ಕುರಿತು ಶ್ಲಾಘಿಸಿದರು. ವೇದಿಕೆ ಮೇಲೆ ಮಾಜಿ ನಗರಸಭೆ ಸದಸ್ಯರಾದ ಶಕುಂತಲಾ ಹುಡೇಜಾಲಿ, ಚಂದ್ರಶೇಖರಯ್ಯ ಹಿರೇಮಠ ಉದ್ಯಮಿಗಳು, ಪ್ರಸನ್ನ ಗಡಾದ ಮಾಜಿ ಜಿಪಂ. ಸದಸ್ಯರು ಹಾಗೂ ರಾಮಣ್ಣ ಹದ್ದೀನ್, ಶರಣಪ್ಪ ಬಳಿಗೇರಿ ಹಾಗೂ ವಕೀಲರ ಸಂಘದ ಅಧ್ಯಕ್ಷರಾದ ಎ.ವಿ. ಕಣವಿ ಮುಂತಾದವರು ಉಪಸ್ಥಿತರಿದ್ದರು.
ಗಾಯಕರಾದ ಅಂಬರೀಷ್ ಜವಳಿ, ಪ್ರತಿಭಾ ಹಿರೇಮಠ, ನಂದೀಶ ಹಿರೇಮಠ, ಕುಮಾರ ಚಂದ್ರಗಿರಿ ಪಿ.ಬಿ.ಯವರ ಮಧುರ ಹಾಡುಗಳನ್ನು ಸಾದರ ಪಡಿಸಿದರು.
ಕಾರ್ಯಕ್ರಮದ ನಿರೂಪಣೆ, ಸ್ವಾಗತ ವಂದನಾರ್ಪಣೆಯನ್ನು ವೀರಕನ್ನಡಿಗ ಸಂಘದ ಅಧ್ಯಕ್ಷರಾದ ಶಿವಾನಂದ ಹೊದ್ಲೂರು ನೇರೆವೆರಿಸಿದರು. ಕಾರ್ಯಕ್ರಮದ ಪೂರ್ವದಲ್ಲಿ ಪಿ.ಬಿ.ಶ್ರೀನಿವಾಸರವರ ಶ್ರದ್ಧಾಂಜಲಿ ಕುರಿತು ಒಂದು ನಿಮಿಷ ಮೌನಾಚರಣೆಯನ್ನು ಸಲ್ಲಿಸಲಾಯಿತು.
0 comments:
Post a Comment